HomePage_Banner
HomePage_Banner
Breaking News

ಇದೊಂದು ವಿಧಾನಮಂಡಲ ಸಮಿತಿ, ಜವಾಬ್ದಾರಿ ಒಪ್ಪಿಕೊಳ್ಳುವೆ : ಅಂಗಾರ

 

ಎಸ್‌ಸಿ ಎಸ್‌ಟಿ ಕಲ್ಯಾಣ ಸಮಿತಿ ಅಧ್ಯಕ್ಷತೆಗೆ ಶಾಸಕರ ಪ್ರತಿಕ್ರಿಯೆ

 

 

ತಾನು ನೇಮಕಗೊಂಡ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಲ್ಯಾಣ ಸಮಿತಿಯು ಒಂದು ವಿಧಾನಮಂಡಲ ಸಮಿತಿಯಾಗಿದ್ದು, ಇದನ್ನು ಒಪ್ಪಿಕೊಂಡು ಮುಂದುವರಿಯುತ್ತೇನೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ಪ್ರತಿಕ್ರಿಯಿಸಿದ್ದಾರೆ.

ಎಸ್‌ಸಿ ಎಸ್‌ಟಿ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ಅಂಗಾರರ ನೇಮಕ ಹಾಗೂ ಈ ಹುದ್ದೆಯನ್ನು ಒಪ್ಪಿಕೊಳ್ಳುವ ಕುರಿತಂತೆ ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ “ಸುದ್ದಿ” ಯೊಂದಿಗೆ ಪ್ರತಿಕ್ರಿಯಿಸಿದ ಅಂಗಾರರು, ಹಿಂದೆ ಬಿಜೆಪಿ ಸರಕಾರ ಇರುವಾಗಲೂ ನಾನು ಹಿಂದುಳಿದ ವರ್ಗಗಳ ಸಮಿತಿಯ ಅಧ್ಯಕ್ಷನಾಗಿದ್ದೆ. ಈಗ ಬಿಜೆಪಿ ಸರಕಾರ ಇರುವುದರಿಂದ ಈ ಸಮಿತಿಯ ಅಧ್ಯಕ್ಷನಾಗಿದ್ದೇನೆ. ಸರಕಾರಕ್ಕೆ ಈ ಕ್ಷೇತ್ರದ ಯೋಜನೆಗಳನ್ನು , ಕಾಲಮಿತಿಯನ್ನು ಶಿಫಾರಸ್ಸು ಮಾಡುವಂತಹ ಮಹತ್ವದ ಕೆಲಸಗಳು ಇದರಲ್ಲಿ ಅಡಕವಾಗಿದೆ. ಸಂಬಂಧಪಟ್ಟ ಸಚಿವರನ್ನಾಗಲಿ, ಸೆಕ್ರೆಟರಿಗಳನ್ನಾಗಲಿ ನಮ್ಮ ಸಭೆಗಳಿಗೆ ಕರೆಸಿಕೊಂಡು ಸೂಚನೆ ನೀಡುವ ಅಧಿಕಾರವೂ ಸಮಿತಿಗಿದೆ.
ಎಸ್‌ಸಿ ಎಸ್‌ಟಿ ಕಲ್ಯಾಣ ಸಮಿತಿ ಅಧ್ಯಕ್ಷನಾಗಿ ನ್ಯಾಯೋಚಿತವಾಗಿ ಕರ್ತವ್ಯ ನಿಭಾಯಿಸುತ್ತೇನೆ. ಇದು ಸ್ಪೀಕರ್ ನೇಮಿಸುವ ಸಮಿತಿಯಾಗಿದ್ದು, ಈ ಕುರಿತಂತೆ ನನಗೆ ಮಾಹಿತಿ ಬರಬೇಕಷ್ಟೇ ಎಂದ ಅವರು, ಜನಗಳು ಏನು ಮಾತನಾಡಿಕೊಳ್ಳುತ್ತಾರೋ ನನಗೆ ಗೊತ್ತಿಲ್ಲ. ಆದರೆ ಇದು ಸರಕಾರದ ಹುದ್ದೆಯಲ್ಲ ಎಂದು ಹೇಳಿದ್ದಾರೆ.

 

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.