ವೆಂಕಟ್ರಮಣ ಸೊಸೈಟಿ: ಶೇ. 18 ಡಿವಿಡೆಂಡ್

Advt_Headding_Middle
Advt_Headding_Middle
Advt_Headding_Middle

ರೂ.1,೦1,19,703  ನಿವ್ವಳ ಲಾಭ, ವಾರ್ಷಿಕ 288  ಕೋಟಿಗೂ ಮಿಕ್ಕಿ ವ್ಯವಹಾರ

ಬೆಳ್ತಂಗಡಿ ನೆರೆ ಸಂತ್ರಸ್ತರಿಗೆ 2 ಲಕ್ಷ ರೂ. ಪರಿಹಾರ

ನಿಂತಿಕಲ್ಲು, ನೆಲ್ಯಾಡಿಯಲ್ಲಿ ನೂತನ ಶಾಖೆ ಆರಂಭಿಸಲು ಚಿಂತನೆ

ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 2018-19 ನೇ ಸಾಲಿನಲ್ಲಿ ರೂ. 1,೦1197೦3.13 ನಿವ್ವಳ ಲಾಭ ಗಳಿಸಿದ್ದು, ವಾರ್ಷಿಕ 288 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿದೆ. ಸದಸ್ಯರಿಗೆ ಶೇ. 18 ಡಿವಿಡೆಂಡ್ ವಿತರಿಸಲು ಹಾಗೂ ಬೆಳ್ತಂಗಡಿ ನೆರೆ ಸಂತ್ರಸ್ತರಿಗೆ ರೂ. 2 ಲಕ್ಷ ಪರಿಹಾರ ವಿತರಿಸಲು ತೀರ್ಮಾನ ಕೈಗೊಳ್ಳಲಾಗಿದೆ.


ಸೊಸೈಟಿ ಮಹಾಸಭೆಯ ಬಳಿಕ ಸೊಸೈಟಿ ಅಧ್ಯಕ್ಷ ಕೆ.ಸಿ.ನಾರಾಯಣ ಗೌಡ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದರು.

31-3-2019 ರ ಅಂತ್ಯಕ್ಕೆ 1೦3೦2 ಜನ ವಿವಿಧ ವರ್ಗದ ಸದಸ್ಯರಿದ್ದು, ಇವರಿಂದ ರೂ. 2,46,95,೦5೦ ಪಾಲುಬಂಡವಾಳ ಸಂಗ್ರಹಿಸಿರುತ್ತೇವೆ. ಸಂಘಕ್ಕೆ ಸದಸ್ಯರುಗಳಿಂದ ವಿವಿಧ ರೀತಿಯ ಠೇವಣಿಗಳಾದ ಉಳಿತಾಯ ಖಾತೆ, ಮಾಸಿಕ ಠೇವಣಿ, ಶ್ರೀ ವೆಂಕಟರಮಣ ನಿತ್ಯನಿಧಿ ಠೇವಣಿ, ಸಿಬ್ಬಂದಿ ಭದ್ರತಾ ಠೇವಣಿ, ನಿರಖು ಠೇವಣಿ, ಶ್ರೀ ವೆಂಕಟರಮಣ ನಗದುಪತ್ರ, ಶಾಶ್ವತ ನಿರಖು ಠೇವಣಿ ಇತ್ಯಾದಿ ಪಡೆಯುತ್ತಿದ್ದು, ವರದಿ ಸಾಲಿನ ಅಂತ್ಯಕ್ಕೆ ರೂ. 65,೦5,68,552.53 ರಷ್ಟು ಠೇವಣಿಯನ್ನು ಸಂಗ್ರಹಿಸಿರುತ್ತೇವೆ. ಈ ಸಹಕಾರಿ ವರ್ಷದಲ್ಲಿ ಒಟ್ಟು ರೂ. 52,7೦,43,57೦ ರಷ್ಟು ಸಾಲಗಳನ್ನು ವಿತರಿಸಿರುತ್ತೇವೆ ಎಂದರು.


ಸಂಘದಲ್ಲಿ ಒಟ್ಟು ರೂ. 4,12,38,499.4೦ ರಷ್ಟು ವಿವಿಧ ನಿಧಿಗಳಿದ್ದು, ಸಂಘದ ದುಡಿಯುವ ಬಂಡವಾಳವು ರೂ. 72,೦6,69,೦58.93 ರಷ್ಟಾಗಿರುತ್ತದೆ. ಸಂಘದಲ್ಲಿ ಎಲ್ಲಾ ರೀತಿಯ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುತ್ತಾ ಬರುತ್ತಿದ್ದು, ವರದಿ ಸಾಲಿನಲ್ಲಿ ಯಶಸ್ಸನ್ನು ಕಂಡು ವಾರ್ಷಿಕ ರೂ. 288  ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿದ್ದು, ರೂ. 1,೦1,19,7೦3.13  ರಷ್ಟು ನಿವ್ವಳ ಲಾಭ ಗಳಿಸಿ ಸದಸ್ಯರುಗಳಿಗೆ ಶೇ. 18 ಡಿವಿಡೆಂಡ್ ವಿತರಿಸುತ್ತಿದ್ದೇವೆ. ಸಂಘದ ಆಡಿಟ್ ವರ್ಗೀಕರಣವು ಎ ತರಗತಿಯಾಗಿದ್ದು, ಇದು ನಮ್ಮ ಆರ್ಥಿಕ ತಖ್ತೆಯ ಪಾರದರ್ಶಕತೆಯನ್ನು ಸೂಚಿಸುತ್ತದೆ. ಸಂಘಕ್ಕೆ ೦.33.5೦ ಸೆಂಟ್ಸ್ ಸ್ವಂತ ಜಾಗವಿದ್ದು, ಈ ಜಾಗದಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ಒಳಗೊಂಡ ಸ್ವಂತ ಕಟ್ಟಡವನ್ನು ರಚಿಸಿರುತ್ತೇವೆ ಎಂದರು.
ಸಂಘಕ್ಕೆ ೩ನೇ ಬಾರಿ ರಾಜ್ಯದ ಅತ್ಯುತ್ತಮ ಸಹಕಾರ ಸಂಘವೆಂದು ಪ್ರಶಸ್ತಿ ಬಂದಿರುವುದು ನಮ್ಮ ಸಂಸ್ಥೆಯ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿರುತ್ತದೆ. 2018-19 ನೇ ಸಾಲಿನಲ್ಲಿ ಸಂಘದ ಉತ್ತಮ ಸಾಧನೆಯನ್ನು ಗುರುತಿಸಿ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಸಾಧನಾಶ್ರೀ ಪ್ರಶಸ್ತಿಯನ್ನು ನೀಡಿ ನಮ್ಮ ಸಂಘವನ್ನು ಗೌರವಿಸಿರುತ್ತಾರೆ. ಸಂಘವು ಪ್ರಸ್ತುತ 11ಶಾಖೆಗಳನ್ನು ರಾಜ್ಯದ ಬೇರೆ ಬೇರೆ ಭಾಗದಲ್ಲಿ ಪ್ರಾರಂಭ ಮಾಡಿದ್ದು, ಪ್ರಧಾನ ಕಚೇರಿಯನ್ನು ಪ್ರತ್ಯೇಕವಾಗಿ ರಚಿಸಿದ್ದು, ಇದರ ಮೂಲಕವೇ ಎಲ್ಲಾ ಆಡಳಿತವನ್ನು ನಡೆಸುತ್ತಿದ್ದೇವೆ ಎಂದರು.
ಕಳೆದ ಬಾರಿ ಕೊಡಗಿನಲ್ಲಿ ನಡೆದ ಭೀಕರ ಪ್ರಕೃತಿ ವಿಕೋಪಕ್ಕೆ ಹಾನಿಗೊಳಗಾದ ಸಂತ್ರಸ್ತರಿಗೆ ಸಂಘದ ಎಲ್ಲಾ ಸದಸ್ಯರು ಒಟ್ಟು ಸೇರಿ ಒಟ್ಟು 101  ಜನರಿಗೆ ರೂ. 8,53,೦51 ಪರಿಹಾರವನ್ನು ನೇರವಾಗಿ ಸಂತ್ರಸ್ತರಿಗೆ ನೀಡಿ ಅವರ ಕಟುಂಬಕ್ಕೆ ಸಹಕರಿಸಿರುತ್ತೇವೆ. ಈ ಬಾರಿ ಬೆಳ್ತಂಗಡಿಯಲ್ಲಿ ಪ್ರಕೃತಿ ವಿಕೋಪದಿಂಂದ ಹಾನಿಗೊಳಗಾದ ನೆರೆ ಸಂತ್ರಸ್ತರಿಗೆ ಸಂಘದ ವತಿಯಿಂದ ರೂ. 2 ಲಕ್ಷ ಪರಿಹಾರವನ್ನು ನೇರವಾಗಿ ವಿತರಿಸಲು ತೀರ್ಮಾನಿಸಿರುತ್ತೇವೆ. ವಿಶೇಷವಾಗಿ ಈ ಸಹಕಾರಿ ವರ್ಷದಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿರುವ ಎಲ್ಲಾ ಸದಸ್ಯರ ಮಕ್ಕಳು ಹತ್ತನೇ ತರಗತಿಯಲ್ಲಿ ಶೇ. 9೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೀಡಿ ಗೌರವಿಸಿರುತ್ತೇವೆ ಎಂದು ಅವರು ಹೇಳಿದರು.

ಸಂಘದ ಮುಂದಿನ ಯೋಜನೆ
ಸಂಘದ ಕಾರ್ಯವ್ಯಾಪ್ತಿಯ ನಿಂತಿಕಲ್ ಮತ್ತು ನೆಲ್ಯಾಡಿಯಲ್ಲಿ ಶಾಖೆಗಳನ್ನು ಪ್ರಾರಂಭಿಸಲು ಆಡಳಿತ ಮಂಡಳಿಯು ಈಗಾಗಲೇ ಕೆಲಸವನ್ನು ಆರಂಭಿಸಿರುತ್ತೇವೆ. ಹಾಗೂ ಮುಂದಿನ ಆರ್ಥಿಕ ವರ್ಷದಲ್ಲಿ ರೂ. 1೦೦ ಕೋಟಿ ಠೇವಣಿ ಸಂಗ್ರಹಿಸಿ ರೂ. 8೦ ಕೋಟಿಯಷ್ಟು ಸಾಲವನ್ನು ವಿತರಿಸಲು ಸಂಘದ ಆಡಳಿತ ಮಂಡಳಿಯು ಕಾರ್ಯಯೋಜನೆಯನ್ನು ಹಮ್ಮಿಕೊಂಡಿದೆ ಹಾಗೂ ಪ್ರತೀ ಶಾಖೆಗಳಲ್ಲಿ ಗ್ರಾಹಕರ ಸಭೆಯನ್ನು ಕೂಡಾ ನಡೆಸಲು ತೀರ್ಮಾನಿಸಿರುತ್ತೇವೆ. ಜೊತೆಗೆ ಸಂಘದ ೩ನೇ ಮಹಡಿಯಲ್ಲಿ ವಿಶಾಲವಾದ ಸಭಾಂಗಣವನ್ನು ನಿರ್ಮಿಸಲು ಕೂಡಾ ಚಿಂತನೆಯನ್ನು ನಡೆಸಿರುತ್ತೇವೆ ಎಂದರು.
ಉಪಾಧ್ಯಕ್ಷ ಪಿ.ಎಸ್.ಗಂಗಾಧರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್, ನಿರ್ದೇಶಕರುಗಳಾದ ಪಿ.ಸಿ.ಜಯರಾಮ್, ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ.ತೀರ್ಥರಾಮ, ಚಂದ್ರಾ ಕೋಲ್ಚಾರ್, ಕೆ.ಸಿ.ಸದಾನಂದ, ಲಕ್ಷ್ಮೀನಾರಾಯಣ ನಡ್ಕ, ಮೋಹನ್‌ರಾಮ್ ಸುಳ್ಳಿ, ದಾಮೋದರ ಎನ್.ಎಸ್., ದಿನೇಶ್ ಮಡಪ್ಪಾಡಿ, ಶ್ರೀಮತಿ ನಳಿನಿ ಸೂರಯ್ಯ, ಶ್ರೀಮತಿ ಲತಾ ಎಸ್.ಮಾವಾಜಿ, ಶ್ರೀಮತಿ ಜಯಲಲಿತಾ ಕೆ.ಎಸ್. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.