HomePage_Banner
HomePage_Banner
Breaking News

ಕೆವಿಜಿಸಿಇ: “CENSA” ವತಿಯಿ೦ದ ಎರಡು ದಿನದ ಕಾರ್ಯಾಗಾರ

 

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಸಂಘ ಕೆವಿಜಿಸಿಇ: “CENSA” ವತಿಯಿ೦ದ ಎರಡು ದಿನದ ಕಾರ್ಯಾಗಾರ ಮತ್ತು “CSI” ಸಹಯೋಗದಲ್ಲಿ 3 ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ “Core JAVA and Basic Android”,  7 ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ  “Problem Solving Techniques Using Python”  ಮತ್ತು 5 ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ “Web Development Using Advanced JAVA ವಿಷಯದ ಬಗ್ಗೆ ಎರಡು ದಿನಗಳ ಕಾರ್ಯಾಗಾರ  ೨೦-೦೯-೨೦೧೯ ಮತ್ತು ೨೧-೦೯-೨೦೧೯ ರಂದು ನಡೆಯಿತು.

ವಿಭಾಗ ಮುಖ್ಯಸ್ಥರಾದ ಪ್ರೊ. ಉಜ್ವಲ್ ಯು.ಜೆ, ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಎ. ಜ್ಞಾನೇಶ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾದ ಗೂಗಲ್ ಡೆವೆಲಪರ್‍ಸ್ ಟೀಮ್, ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು, ಮೈಸೂರು – ಪ್ರೊ. ಸಚಿನ್ ಡಿ.ಎನ್. ಮತ್ತು ಪ್ರೊ. ನಿತಿನ್ ಕುಮಾರ್ ಇವರು ೩ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಹಾಗೂ ಪ್ರೊ. ವಿನಯ್ ಕುಮಾರ್ 5 ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮತ್ತು ಪ್ರೊ. ಕಾರ್ತಿಕ್ ವಿ. 7 ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿಕೊಟ್ಟರು.

ಕಾರ್ಯಾಗಾರದಲ್ಲಿ ಭಾಗಿಗಳಾದ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳು ಅರ್ಹತಾ ಪತ್ರವನ್ನು ವಿತರಿಸಿದರು. ಡಾ. ಸ್ಮಿತಾ ಎಂ.ಎಲ್., ಸಂಯೋಜಕರುಗಳಾದ ಪ್ರೊ. ಬಾಲಪ್ರದೀಪ್ ಕೆ.ಎನ್., ಪ್ರೊ. ಪ್ರತಾಪ್ ಎಂ. ಎಸ್. ಮತ್ತು ಪ್ರೊ. ಸುನಿತ್ ಕುಮಾರ್ ಟಿ ಮತ್ತು ಪ್ರೊ. ಸವಿತಾ ಸಿ.ಕೆ, ಹಾಗೂ ವಿಭಾಗದ ಎಲ್ಲಾ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.