ಸವಣೂರು ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ಬಾಲಕ ಮತ್ತು ಬಾಲಕಿಯರ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸುವ ಕುರಿತು ಪೂರ್ವಭಾವಿ ಸಭೆಯು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ನಡೆಯಿತು.
ಶಾಲಾ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಲಾಖೆ ನಮಗೆ ವಹಿಸಿರುವ ಕ್ರೀಡಾಕೂಟದ ಆಯೋಜನೆಯ ಜವಾಬ್ದಾರಿಯನ್ನು ನಾವು ಸಂತೋಷದಿಂದ ಸ್ವೀಕರಿಸಿದ್ದೇವೆ. ಇದನ್ನು ಅಕ್ಟೋಬರ್ ತಿಂಗಳ ನಾಲ್ಕನೆ ದಿನಾಂಕದಂದು ಅತ್ಯಂತ ಸುವ್ಯವಸ್ಥಿತವಾಗಿ ಮಾಡಿಕೊಡುವ ಭರವಸೆಯನ್ನು ಈ ಮೂಲಕ ನೀಡುತ್ತಿದ್ದೇನೆ ಎಂದರು.
ಎಸ್.ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್ನ ನಿರ್ದೇಶಕರಾದ ಎನ್. ಸುಂದರ ರೈ ಉಪಸ್ಥಿತರಿದ್ದರು. ಪ್ರಾಂಶುಪಾಲ ಸೀತಾರಾಮ ಕೇವಳ ಸ್ವಾಗತಿಸಿ ಸವಣೂರು ಕ್ಲಸ್ಟರ್ನ ಸಿ.ಆರ್.ಪಿ. ವೆಂಕಟೇಶ್ ವಂದನಾರ್ಪಣೆಗೈದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶಿವಪ್ರಸಾದ್ ಆಳ್ವ, ಜಯರಾಮ ಗೌಡ ಮತ್ತು ಸುರೇಶ್ ಪಾಲ್ತಾಡಿಯವರು ಸಲಹೆಗಳನ್ನು ನೀಡಿದರು. ಬಳಿಕ ವಿಸ್ತೃತವಾದ ವೇಳಾಪಟ್ಟಿಯನ್ನು ದೈಹಿಕ ಶಿಕ್ಷಣ ಶಿಕ್ಷಕರ ಸಂವಾದದೊಂದಿಗೆ ಮಾಡಲಾಯಿತು.