HomePage_Banner
HomePage_Banner
Breaking News

ಸವಣೂರು : ವಿದ್ಯಾರಶ್ಮಿಯಲ್ಲಿ ಮುಳಿಯ ಸೀಡ್ ಬಾಲ್ ಸೋಯಿಂಗ್

ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಪರಿಸರ ಸಂಘದ ವತಿಯಿಂದ ಮುಳಿಯ ಫೌಂಡೇಶನ್‌ನವರ ಅರಣ್ಯ ಬೆಳೆಸುವ ಮಹತ್ವಾಕಾಂಕ್ಷಿ ಯೋಜನೆಯಾದ ‘ಸೀಡ್ ಬಾಲ್ ಸೋಯಿಂಗ್’ ಕಾರ್ಯಕ್ರಮವನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೊ. ಕೆ. ಸೀತಾರಾಮ ರೈಯವರು ಉದ್ಘಾಟಿಸಿದರು.

ಮುಳಿಯದವರು ಈ ಕಾರ್ಯಕ್ರಮ ಮಾಡುವುದರಲ್ಲಿ ವಿಶೇಷ ಅರ್ಥವಿದ್ದು ಇದು ಪರಿಸರದಲ್ಲಿ ಹಸಿರನ್ನು ಹೆಚ್ಚಿಸುವುದರ ಜೊತೆಜೊತೆಗೆ ಎಳೆಯ ಮಕ್ಕಳಲ್ಲಿ ಪರಿಸರ ಪ್ರೀತಿಯನ್ನು ಬೆಳೆಸುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಮುಳಿಯ ಫೌಂಡೇಶನ್‌ನ ಆಡಳಿತ ನಿರ್ದೇಶಕರಾದ ಕೇಶವ ಪ್ರಸಾದ್ ಮುಳಿಯ ಮಾತನಾಡಿ ಇಂದು ವಿದ್ಯಾರಶ್ಮಿಯ ವಿದ್ಯಾರ್ಥಿಗಳು ಸುಮಾರು ಎರಡು ಸಾವಿರ ಬೀಜದುಂಡೆಗಳನ್ನು ತಯಾರಿಸಿದ್ದು ಅವುಗಳು ಇಲ್ಲಿನ ವಿದ್ಯಾರ್ಥಿಗಳ ಹೊಸ ಸ್ನೇಹಿತರಾಗಿವೆ ಎಂದರು. ಈಗಾಗಲೆ ಅನೇಕ ಬೀಜದುಂಡೆಗಳು ಮೊಳಕೆಯೊಡೆದು ಸಸಿ ಮೇಲೆ ಬಂದಿದ್ದು ಇನ್ನು ಮುಂದೆ ಮಕ್ಕಳು ಆಟವಾಡುವಾಗ ಒಂದಷ್ಟು ಹೊತ್ತು ಈ ಹೊಸ ಗಿಡಗಳು ಮರವಾಗುತ್ತಾ ಬೆಳೆಯುವುದನ್ನು ಗಮನಿಸಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳಾದ ಯಶಸ್, ವಿದಿತ್ ಕಿಶನ್ ಮತ್ತು ಭವಹರಿ ಎಂ. ರೈ ಅವರು ಅತಿಥಿಗಳಿಂದ ಬೀಜದುಂಡೆಗಳನ್ನು ಸಾಂಕೇತಿಕವಾಗಿ ಸ್ವೀಕರಿಸಿದರು. ಬಳಿಕ ಅತಿಥಿಗಳು ಬೀಜದುಂಡೆಗಳನ್ನು ಬಿತ್ತುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಎಸ್.ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್‌ನ ನಿರ್ದೇಶಕರಾದ ಎನ್. ಸುಂದರ ರೈ, ಮುಳಿಯ ಶೋ ರೂಂನ ಮೇನೇಜರ್ ಯತೀಶ್, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮಿ ಎಸ್. ರೈ ಮತ್ತು ವಿದ್ಯಾರಶ್ಮಿ ವಿದ್ಯಾಲಯದ ಉಪ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶಸ್ ಸ್ವಾಗತಿಸಿ,  ಉಪಾಧ್ಯಕ್ಷೆ ಆಯಿಷಾತ್ ಹನಾ ವಂದಿಸಿದರು.  ಮತ್ತು ಶಿಲ್ಪಾ ನಿರೂಪಣೆಗಳಲ್ಲಿ ಸಹಕರಿಸಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.