ಕಡಬ: ತಾಲೂಕಿನ ಎಡಮಂಗಲ ರೈಲು ಹಳಿಯಲ್ಲಿ ದೋಳ್ಪಾಡಿಯ ವೃದ್ದ ವ್ಯಕ್ತಿಯೋರ್ವರು ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಂಗಳೂರು-ಬೆಂಗಳೂರು ರೈಲಿನಡಿಗೆ ಬಿದ್ದು ಮೃತಪಟ್ಟ ಘಟನೆ ಸೆ.21ರಂದು ನಡೆದಿದೆ.
ಮೃತ ವ್ಯಕ್ತಿಯನ್ನು ದೋಳ್ಪಾಡಿ ಗ್ರಾಮದ ಕೊಜಂಬೋಡಿ ನಿವಾಸಿ ಲಿಂಗಪ್ಪ ಗೌಡ(69ವ,) ಎಂದು ಗುರುತಿಸಲಾಗಿದೆ. ಇವರು ಎಡಮಂಗಲ ಎಂಬಲ್ಲಿ ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಂಗಳೂರು-ಬೆಂಗಳೂರು ರೈಲಿನಡಿಗೆ ಬಿದ್ದು ಮೃತಪಟ್ಟಿದ್ದಾರೆ, ಇವರು ಪತ್ನಿ ಸುಶೀಲ, ಮಕ್ಕಳಾದ ಭಾಸ್ಕರ, ಅನಂತಕೃಷ್ಣ, ವಾಸುದೇವ, ಯುವರಾಜ, ಅಶೋಕ ಪುತ್ರಿ ಶಶಿಕಲಾ ಅವರನ್ನು ಅಗಲಿದ್ದಾರೆ.