HomePage_Banner
HomePage_Banner

ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಕಜೆಗದ್ದೆ ನೇಮಕ, ಸದಸ್ಯರಾಗಿ ಸ್ಮಿತಾ ಅಮೃತರಾಜ್

 

ಯಕ್ಷಗಾನ ಅಕಾಡೆಮಿಗೆ ರಾಧಾಕೃಷ್ಣ ಕಲ್ಚಾರ್,ಕುವೆಂಪು ಭಾಷಾ ಪ್ರಾಧಿಕಾರಕ್ಕೆ ಡಾ ಮಾಧವ ಪೆರಾಜೆ ಸದಸ್ಯರು

ತುಳು ಅಕಾಡೆಮಿ ಅಧ್ಯಕ್ಷರಾಗಿ ದಯಾನಂದ ಕತ್ತಲ್ ಸಾರ್

ರಾಜ್ಯದ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಅಧ್ಯಕ್ಷರು ಮತ್ತು ಸದಸ್ಯರು ಗಳನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.

ಅರೆಭಾಷೆ,ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷರಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀನಾರಾಯಣ ಕಜೆಗದ್ದೆಯವರನ್ನು ನೇಮಿಸಲಾಗಿದ್ದು ಸದಸ್ಯರಾಗಿ ಶ್ರೀಮತಿ ಜಾನಕಿ ಬೈತಡ್ಕ,ಶ್ರೀಮತಿ ಸ್ಮಿತಾ ಅಮೃತರಾಜ್,ಶ್ರೀಮತಿ ಪ್ರೇಮಾ ರಾಘವಯ್ಯ,ಎ.ಪಿ. ಧನಂಜಯ, ಅನಂದ ದಂಬೆಕೋಡಿ,ಸೋಮಣ್ಣ ಸೂರ್ತಲೆ ನೇಮಕಗೊಂಡಿದ್ದಾರೆ.

ತುಳು ಅಕಾಡೆಮಿ ಅಧ್ಯಕ್ಷರಾಗಿ ದಯಾನಂದ ಕತ್ತಲ್ ಸಾರ್ ನೇಮಕಗೊಂಡಿದ್ದಾರೆ.

ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಮೂಲತಃ ಸುಳ್ಯದವರಾದ ರಾಧಾಕೃಷ್ಣ ಕಲ್ಚಾರ್ ನೇಮಕಗೊಂಡಿದ್ದಾರೆ.

ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಪುತ್ತೂರಿನ ಉಪನ್ಯಾಸಕ ರೋಹಿಣಾಕ್ಷ ಶಿರ್ಲಾರು, ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಸದಸ್ಯರಾಗಿ ಡಾ.ಮಾಧವ ಪೆರಾಜೆ ನೇಮಕಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.