ಆಲೆಟ್ಟಿ ಸೊಸೈಟಿ ಎದುರುಗಡೆ ರೈತ ಸಂಘಟನೆಯಿಂದ ಪ್ರತಿಭಟನೆ

Advt_Headding_Middle
Advt_Headding_Middle
Advt_Headding_Middle

ಶೀಘ್ರವಾಗಿ ಸಾಲ ಮನ್ನಾ ರೈತರ ಖಾತೆಗೆ ಜಮೆಯಾಗಬೇಕೆಂಬ ರೈತರ ಆಗ್ರಹ, ಅಧಿಕಾರಿ ಗೆ ಮನವಿ ಸಲ್ಲಿಸಿ ಪ್ರತಿಭಟನೆ ಹಿಂತೆಗೆತ

ಅಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ
ಎದುರುಗಡೆ ರೈತ ಸಂಘ ಮತ್ತು ಹಸಿರುಸೇನೆಯ ವತಿಯಿಂದ ಅ.16 ರಂದು ರೈತರ ಸಾಲಮನ್ನಾ ಖಾತೆಗೆ ಜಮೆ ಮಾಡಿಸುವಲ್ಲಿ ಆಡಳಿತ ಮಂಡಳಿ ಮತ್ತು ಅಧಿಕಾರಿ ವೃಂದ ದವರು ನಿರ್ಲಕ್ಷ್ಯತೆಯ ವಹಿಸಿದ್ದಾರೆ ಎಂಬ ಆರೋಪದಡಿ ಆಲೆಟ್ಟಿ ಗ್ರಾಮದ ಕೃಷಿಕರು ಪ್ರತಿಭಟನೆ ನಡೆಸಿದರು. ತಾಲೂಕು ರೈತ
ಸಂಘದ ಅದ್ಯಕ್ಷ ಲೋಲಜಾಕ್ಷ ಭೂತಕಲ್ಲು ಪ್ರತಿಭಟನೆ ನಿರತ ರೈತರನ್ನುದ್ದೇಶಿಸಿ ಮಾತಾನಾಡಿ ಸಿದ್ದರಾಮಯ್ಯ ಸರಕಾರವಿದ್ದ ಸಂದರ್ಭದಲ್ಲಿ ರೂ.50 ಸಾವಿರ ಸಾಲ ಮನ್ನಾದಿಂದ 160ಮಂದಿ ರೈತರು ವಂಚಿತರಾಗಿದ್ದಾರೆ. ಈಗ 1ಲಕ್ಷ ಸಾಲ ಮನ್ನಾ ದ ನಗದು ಕೇವಲ ಕೆಲವರ ಖಾತೆಗೆ ಜಮೆಯಾಗಿದೆ.ಸರಕಾರದಿಂದ ಬಿಡುಗಡೆಯಾದ ಹಣ ಫಲಾನುಭವಿ ರೈತರ ಖಾತೆಗೆ ಜಮೆಯಾಗಿಲ್ಲ.ಸೊಸೈಟಿಗೆ ಕೊಡಬೇಕಾದ ದಾಖಲೆಗಳನ್ನು ನೀಡಿದ್ದೇವೆ. ಈ ಬಗ್ಗೆ ಮಾಹಿತಿ ಸೊಸೈಟಿಯವರಲ್ಲಿ ಕೇಳಿದಾಗ ಡಿ.ಸಿ.ಸಿ.ಬ್ಯಾಂಕ್ ನವರಲ್ಲಿ ಕೇಳುವಂತೆ ಹೇಳುತ್ತಾರೆ. ಸ್ಪಷ್ಟವಾಗಿ ಮಾಹಿತಿ ನೀಡದೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ.ಇದಕ್ಕೆ ಸರಿಯಾದ ಉತ್ತರ ಅಧಿಕಾರಿಗಳು ಬಂದು ಸೊಸೈಟಿಯವರ ಮುಂದೆ ಸ್ಪಷ್ಟೀಕರಣ ಕೊಡಬೇಕು.ಸೊಸೈಟಿಯವರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯತೆಯಿಂದಾಗಿ ರೈತರು ಕಂಗೆಡುವ ಪರಿಸ್ಥಿತಿ ಉಂಟಾಗಿದೆ .ಸಾಲ ಮನ್ನಾ ದ ಹಣ ಖಾತೆಗೆ ಜಮೆಯಾಗುವ ತನಕ ಹೋರಾಟಕ್ಕೆ ರೈತ ಸಂಘ ಸಿದ್ದವಿದೆ ಎಂದು ಆಕ್ರೋಶಿತರಾಗಿ ಮಾತನಾಡಿದರು.

ಗ್ರಾ.ಪಂ.ಅಧ್ಯಕ್ಷ ಹರೀಶ್ ರಂಗತ್ತಮಲೆ, ರೈತ ಸಂಘದ ಮುಖಂಡರಾದ . ದಿವಾಕರ ಪೈ ಅರಂಬೂರು , ತೀರ್ಥರಾಮ ಉಳುವಾರು, ತೀರ್ಥರಾಮ ನೆಡ್ಚಿಲು,ಗಿರಿಜಾಶಂಕರ ತುದಿಯಡ್ಕ, ನ್ಯಾಯವಾದಿ ಎಂ.ವೆಂಕಪ್ಪ ಗೌಡ, ಚಂದ್ರಕಾಂತ ನಾರ್ಕೋಡು,ಜೀವನ್ ನಾರ್ಕೋಡು, ದಯಾನಂದ ಪಾತಿಕಲ್ಲು , ವಕೀಲರಾದ ಧರ್ಮಪಾಲ ಕೊಯಿಂಗಾಜೆ,ಮೂಸಕುಂಞ ಪೈಂಬೆಚ್ಚಾಲು, ಹರಿಪ್ರಸಾದ್ ಗಬ್ಬಲ್ಕಜೆ, ಕುಸುಮಾಧರ ಭೂತಕಲ್ಲು, ದಿನೇಶ್ ಕೋಲ್ಚಾರು, ಸತ್ಯ ಕುಮಾರ್ ಆಡಿಂಜ, ಗೀತಾ ಕೋಲ್ಚಾರು, ವಿವೇಕಾನಂದ ಕೋಲ್ಚಾರು, ಮನ್ಮಥ ಕುಡೆಕಲ್ಲು, ಸತ್ಯ ಪ್ರಸಾದ್ ಗಬ್ಬಲ್ಕಜೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಕೃಪಾಶಂಕರ ತುದಿಯಡ್ಕ ಪ್ರತಿಭಟನೆ ನಿರತ ರೈತರಿಗೆ ಸಾಲ ಮನ್ನಾ ದ ತಾಂತ್ರಿಕ ಸಮಸ್ಯೆ ಬಗ್ಗೆ ವಿವರ ಮಾಹಿತಿ ನೀಡಿದರು.ನಿರ್ದೇಶಕ ಸುದರ್ಶನ ಪಾತಿಕಲ್ಲು, ಶ್ರೀಪತಿ ಭಟ್ ಮಜಿಗುಂಡಿ ಇದ್ದರು.
ಸಮಸ್ಯೆ ಕುರಿತು ಮೇಲಾಧಿಕಾರಿಗಳು ಬಂದು ಸ್ಪಷ್ಟ ಮಾಹಿತಿ ನೀಡುವಂತೆ ರೈತರು ಆಗ್ರಹಿಸಿದರು.ಅಧಿಕಾರಿಗಳು ಬರದಿದ್ದಲ್ಲಿ ಪ್ರತಿಭಟನೆ ಕೈಬಿಡುವುದಿಲ್ಲ.ನಮ್ಮ ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಗಬೇಕು ಎಂದು ರೈತರು ಪಟ್ಟು ಹಿಡಿದರು. ಮಧ್ಯಾಹ್ನ ಡಿ.ಸಿ.ಸಿ.ಬ್ಯಾಂಕ್ ನ ವಲಯ ಮೇಲ್ವಿಚಾರಕರು ಬಂದು ತಾಂತ್ರಿಕ ಸಮಸ್ಯೆ ಬಗ್ಗೆ ವಿವರ ನೀಡಿದರು.ಮತ್ತೆ ಎಲ್ಲಾ ಫಲಾನುಭವಿಗಳ ಖಾತೆಗೆ ಆಪ್ ಲೋಡ್ ಪ್ರಕ್ರಿಯೆ ನಡೆಯುತ್ತಿದೆ. ಹಣಕಾಸು ಇಲಾಖೆ ಯಿಂದ ನಗದು ಶೀಘ್ರವಾಗಿ ಜಮೆ ಆಗುವುದು ಎಂದು ಭರವಸೆ ನೀಡಿದರು. ಸ್ಪಂದಿಸಿದ ಪ್ತತಿಭಟನಾಕಾರರು ಕನಿಷ್ಟ ಅವಧಿಯಲ್ಲಿ ಸಾಲ ಮನ್ನಾ ಖಾತೆಗೆ ಹಣ ಜಮೆ ಆಗಬೇಕು. ಇಲ್ಲವಾದಲ್ಲಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ಮನವಿಯನ್ನು ಅಧಿಕಾರಿಗೆ ಸಲ್ಲಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.