ನಿಂತಿಕಲ್ಲು ಬಿಎಸ್ಎನ್ಎಲ್ ದೂರವಾಣಿ ಕೇಂದ್ರದ ಟೆಲಿಕಾಮ್ ಟೆಕ್ನಿಷಿಯನ್ ದೇವಸ್ಯ ತಿಮ್ಮಪ್ಪ ಗೌಡ ನಿವೃತ್ತಿ

Advt_Headding_Middle

 

 

 

 

ನಿಂತಿಕಲ್ಲು ದೂರವಾಣಿ ಕೇಂದ್ರದಲ್ಲಿ ಟೆಲಿಕಾಂ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿದ್ದ ಡಿ. ತಿಮ್ಮಪ್ಪ ಗೌಡರವರು ಅ.31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

1982ರಲ್ಲಿ ಮಂಗಳೂರಿನ ಪಾಂಡೇಶ್ವರ ದೂರವಾಣಿ ಕೇಂದ್ರದಲ್ಲಿ ಲೈನ್ ಮ್ಯಾನ್ ಆಗಿ ಸೇವೆಗೆ ಸೇರಿದ ಇವರು ಅಲ್ಲಿ ಹನ್ನೆರಡು ವರ್ಷಗಳ ಕಾಲ ಸೇವೆ ಸಲ್ಲಿಸಿ, 1991ರ ಸಾಲಿನ ಜಿಲ್ಲಾ ಮಟ್ಟದ ಸಂಚಾರ ಸಾರಥಿ ಪ್ರಶಸ್ತಿಯನ್ನು 13.3.1992ರಂದು ಅಂದಿನ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಎಂ ಐ ಸವದತ್ತಿ ಅವರಿಂದ ಪಡೆದಿರುತ್ತಾರೆ.

1994ರಲ್ಲಿ ಮಂಗಳೂರು ದೂರವಾಣಿ ಕೇಂದ್ರದಿಂದ ಬೆಳ್ಳಾರೆ ದೂರವಾಣಿ ಕೇಂದ್ರಕ್ಕೆ ಟೆಲಿಕಾಂ ಮೆಕ್ಯಾನಿಕ್ ಆಗಿ ವರ್ಗಾವಣೆಗೊಂಡು ಅಲ್ಲಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಬಳಿಕ 2002 ರಲ್ಲಿ ಬೆಳ್ಳಾರೆ ದೂರವಾಣಿ ಕೇಂದ್ರದಿಂದ ನಿಂತಿಕಲ್ ದೂರವಾಣಿ ಕೇಂದ್ರಕ್ಕೆ ವರ್ಗಾವಣೆಗೊಂಡು ಒಟ್ಟು 37 ವರ್ಷ 7ತಿಂಗಳು 15 ದಿನಗಳ ಸುದೀರ್ಘ ಸೇವೆ ಸಲ್ಲಿಸಿ ಅ. 31ರಂದು ನಿವೃತ್ತಿ ಹೊಂದಲಿದ್ದಾರೆ.

ಇವರ ಪತ್ನಿ ಶ್ರೀಮತಿ ತಾರಾವತಿ ಯವರು ಸ.ಹಿ.ಪ್ರಾ.ಶಾಲೆ ಎಡಮಂಗಲದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿರಿಯ ಪುತ್ರಿ ಸುಪ್ರಿಯಾ ಡಿ.ಟಿ. ಎಂ. ಕಾಂ. ಪದವೀಧರೆ. ಕಿರಿಯ ಪುತ್ರಿ ಕು. ಯಶಸ್ವಿನಿ ಡಿ.ಟಿ. ಎಂ.ಬಿ.ಎ. ಪದವೀಧರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.