HomePage_Banner
HomePage_Banner
HomePage_Banner
HomePage_Banner

ಪೈಲಾರಿನಲ್ಲಿ ರಂಜಿಸಿದ ಯಕ್ಷೋತ್ಸವ 2019

ಪ್ರಸಿದ್ಧ ಭಾಗವತ ಪದ್ಯಾಣ ಗಣಪತಿ ಭಟ್ ರವರಿಗೆ ಪ್ರಶಸ್ತಿ ಪ್ರಧಾನ

ಊರ ಸನ್ಮಾನಕ್ಕೆ ಭಾವುಕರಾದ ಭಾಗವತರು

ಪೈಲಾರು ಫ್ರೆಂಡ್ಸ್ ಕ್ಲಬ್ ಮತ್ತು ಶೌರ್ಯ ಯುವತಿ ಮಂಡಲ ಇದರ ಆಶ್ರಯದಲ್ಲಿ ಪೈಲಾರು ಸ.ಹಿ.ಪ್ರಾ.ಶಾಲೆಯ ಸರ್ವಶಕ್ತಿ ಕಲಾ ಸಿಂಚನ ರಂಗಮಂದಿರದಲ್ಲಿ 7 ನೇ ವರ್ಷದ ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ ಸಮಾರಂಭ ಯಕ್ಷೋತ್ಸವ 2019 ಅ.19 ರಂದು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಪೊನ್ನಂಬಲನ್ ಪೈಲಾರು ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಸಿದ್ಧ ಹಿರಿಯ ಭಾಗವತರಾದ ಪದ್ಯಾಣ ಗಣಪತಿ ಭಟ್ ರವರಿಗೆ ಯಕ್ಷೋತ್ಸವ 2019ರ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ಯವರು ಅಭಿನಂದನಾ ಭಾಷಣ ಮಾಡಿದರು. ವೇದಿಕೆಯಲ್ಲಿ ಚೊಕ್ಕಾಡಿ ಶ್ರೀ ಉಳ್ಳಾಕುಳು ಯಾನೆ ನಾಯರ್ ದೇವಸ್ಥಾನದ ವ್ಯ.ಸ.ಸದಸ್ಯರಾದ ಶ್ರೀನಾಥ್ ನೆಲ್ಲಿಕುಂಜ, ಶೌರ್ಯ ಯುವತಿ ಮಂಡಲದ ಅಧ್ಯಕ್ಷೆ ಯಕ್ಷಿತಾ ಪಾರೆ ಉಪಸ್ಥಿತರಿದ್ದರು. ಕ್ಲಬ್ ನ ಕಾರ್ಯದರ್ಶಿ ಮನೋಜ್ಞ ಕೋಡ್ತೂಗುಳಿ ಸ್ವಾಗತಿಸಿದರು. ಯು.ಮಂ.ಗೌರವಾಧ್ಯಕ್ಷೆ ರಶ್ಮಿ ರಜನಿಕಾಂತ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಚರಿಷ್ಮ ಕಡಪಳ ವಂದಿಸಿದರು. ಸುಶ್ಮಿತಾ ಕಡಪಳ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.