HomePage_Banner
HomePage_Banner
HomePage_Banner
HomePage_Banner

ಹಿರಿಯರ ಮನೆಯಲ್ಲಿ ಹಿರಿಯ ನಾಗರಿಕರ ದಿನಾಚರಣೆ

ಸುಳ್ಯ ತಾಲೂಕು ಹಿರಿಯ ನಾಗರಿಕರ ಸಂಘ `ಸಂಧ್ಯಾಚೇತನ’ ಹಾಗೂ ವಿಷನ್ ಚಾರಿಟೇಬಲ್ ಟ್ರಸ್ಟ್ ಜಟ್ಟಿಪಳ್ಳ ಇವರ ಆಶ್ರಯದಲ್ಲಿ, ಸಂಧ್ಯಾರಶ್ಮಿ ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘ ಸುಳ್ಯ, ಸಂಧ್ಯಾರಶ್ಮಿ ನಿವೃತ್ತ ನೌಕರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸುಳ್ಯ, ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ ಸುಳ್ಯ ಇವರ ಸಹಕಾರದೊಂದಿಗೆ ಹಿರಿಯ ನಾಗರಿಕರ ದಿನಾಚರಣೆ ಅ.19ರಂದು ಸುಳ್ಯದ ಜಟ್ಟಿಪಳ್ಳದಲ್ಲಿರುವ ಹಿರಿಯರ ಮನೆಯಲ್ಲಿ ನಡೆಯಿತು.
ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಡಾ| ರಂಗಯ್ಯ ರವರು ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಸುಮಾ ಸುಬ್ಬರಾವ್ ಹಾಗೂ ಕೇಪು ಸುಂದರ ಮಾಸ್ತರ್ ಮುಖ್ಯ ಅತಿಥಿಗಳಾಗಿದ್ದರು. ಹಿರಿಯರಾದ 99 ವರ್ಷ ಪ್ರಾಯದ ಮೋನಪ್ಪ ಗೌಡ ಕೊರಂಬಡ್ಕ, 98ವಷ ಪ್ರಾಯದ ಕೆ.ಕೆ. ಬೆಳ್ಯಪ್ಪ ಕಟ್ರನ, 95ವರ್ಷ ಪ್ರಾಯ ಶ್ರೀಮತಿ ಮುತ್ತಮ್ಮ ದೇವಜನ, ಹಾಗೂ 92 ವರ್ಷ ಪ್ರಾಯದ ಶ್ರೀಮತಿ ಎನ್.ಕೆ.ಕಮಲ ಕೊಳ್ದುಮಜಲುರವರನ್ನು ಸನ್ಮಾನಿಸಲಾಯಿತು. ಹಿರಿಯ ನಾಗರಿಕರಿಗಾಗಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಸಂಧ್ಯಾಚೇತನದ ಕಾರ್ಯದರ್ಶಿ ರಾಮಚಂದ್ರ ಪಲ್ಲತಡ್ಕ ಸ್ವಾಗತಿಸಿದರು. ಸುಬ್ರಹ್ಮಣ್ಯ ಹೊಳ್ಳ ವಂದಿಸಿದರು. ಚೆನ್ನಕೇಶವ ಜಾಲ್ಸೂರು ಹಾಗೂ ಶ್ರೀಮತಿ ಹೇಮಲತಾ ದೇಂಗೋಡಿ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾರಶ್ಮಿ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.