HomePage_Banner
HomePage_Banner
HomePage_Banner
HomePage_Banner

ಮೂರ್ಜೆ: ಮೂರ್ಕಜೆ ಗೌಡ ತರವಾಡು ಮೂಲದ ಬಗ್ಗೆ ಸ್ವರ್ಣಪೂಜೆ ಹಾಗೂ ಅಷ್ಟಮಂಗಲ ಪ್ರಶ್ನಾ ಚಿಂತನೆ

ಬಂಟ್ವಾಳ ತಾಲೂಕಿನ ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿ ಮೂರ್ಕಜೆ ಶ್ರೀ ಮೈತ್ರೇಯಿ ಗುರುಕುಲದಲ್ಲಿ ಮೂರ್ಜೆ (ಮೂರ್ಕಜೆ) ಗೌಡ ತರವಾಡು ಮೂಲದ ಬಗ್ಗೆ ಸ್ವರ್ಣಪೂಜೆ ಹಾಗೂ ಅಷ್ಟಮಂಗಲ ಪ್ರಶ್ನಾ ಚಿಂತನೆ ಕಾರ್ಯಕ್ರಮವು ಜ್ಯೋತಿಷ್ಯ ತಿಲಕ ಶಶಿಧರನ್ ಮಾಂಗಾಡ್ ಅವರ ನೇತೃತ್ವದಲ್ಲಿ ಜ್ಯೋತಿಷ್ಯರಾದ ರಾಜೇಶ್, ಗೋಪಾಲಕೃಷ್ಣ ಕುಂಬಳೆ ಅವರಿಂದ ಮೈತ್ರೇಯಿ ಗುರುಕುಲದ ಸಹಕಾರದಲ್ಲಿ ಅ.19ರಂದು ಜರುಗಿತು.


ಮೂರ್ಜೆ (ಮೂರ್ಕಜೆ) ನಂದರ ವಂಶ ಗೌಡ ತರುವಾಡು ಮೂಲ ಸ್ಥಾನದ ಶ್ರೀ ಧರ್ಮದೈವ, ಶ್ರೀ ರುದ್ರಚಾಮುಂಡಿ, ಶ್ರೀ ಮಲರಾಯಿ, ಶ್ರೀ ನಾಗಮೂಲ ದೇವರು, ಶ್ರೀ ವೆಂಕಟ್ರಮಣ ದೇವರು, ಶ್ರೀ ಮಹಾವಿಷ್ಣು ಹಾಗೂ ಪರಿವಾರ ದೈವ-ದೇವರುಗಳ ಹಾಗೂ ಮೂರ್ಜೆ ಮೂಲ ಕುಟುಂಬಸ್ಥರ ಬಗ್ಗೆ ಸ್ವರ್ಣಪೂಜೆ ಹಾಗೂ ಪ್ರಶ್ನಾಚಿಂತನೆ ನಡೆಯಿತು.


ಈ ಸಂದರ್ಭದಲ್ಲಿ ವಿಟ್ಲ ಸೀಮೆಯ ತಂತ್ರಿವರ್ಯರಾದ ಗುರುರಾಜ್ ಭಟ್ ಕುಂಟುಕುಡೇಲು, ಶ್ರೀ ಮಲರಾಯಿ ಮೂವರ್ ದೈವಸ್ಥಾನದ ಆಡಳಿತದಾರರಾದ ಭುಜಂಗ ಶೆಟ್ಟಿ, ವೆಂಕಪ್ಪ ರೈ, ವಿದ್ಯಾಧರ ರೈ, ಮೂರ್ಕಜೆ ದೈವಸ್ಥಾನದ ಅರ್ಚಕ ವೆಂಕಟ್ರಮಣ ಭಟ್, ವಿಟ್ಲಪಡ್ನೂರು ಗ್ರಾ.ಪಂ‌. ಅಧ್ಯಕ್ಷ ರವಿಕಿರಣ್ ಶೆಟ್ಟಿ, ವಿಟ್ಲಪಡ್ನೂರು ವಿಷ್ಣುಮೂರ್ತಿ ದೈವಸ್ಥಾನದ ಅರ್ಚಕರು, ಶ್ರೀ ಮೈತ್ರೇಯಿ ಗುರುಕುಲದ ವ್ಯವಸ್ಥಾಪಕ ಜಗನ್ನಾಥ, ಮೂರ್ಜೆ ತರವಾಡು ಕುಂಟುಂಬದ ಅಧ್ಯಕ್ಷ ಕೆ.ಎಸ್.ಗೋಪಾಲಕೃಷ್ಣ ಗೌಡ, ಮೂರ್ಜೆ ಕುಟುಂಬಸ್ಥರಾದ ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಹರೀಶ್ ಮೂರ್ಜೆ, ವಸಂತ ಮೀನಗದ್ದೆ, ತೀರ್ಥರಾಮ ಸಾರಕೂಟೇಲು, ರಾಧಾಕೃಷ್ಣ ಮೂರ್ಜೆ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು. ಅಪರಾಹ್ನ ಕುಟುಂಬದ ಸದಸ್ಯರ ಸಭೆ ನಡೆಯಿತು. ದಿವಾಕರ ಶೆಟ್ಟಿಹಿತ್ಲು ಮೂರ್ಜೆ ಉಬರಡ್ಕ ಅವರು ಸ್ವಾಗತಿಸಿ, ರಾಧಾಕೃಷ್ಣ ಮೂರ್ಜೆ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು. ವಿಭಾಗದ ಎಲ್ಲಾ ಸಂಚಾಲಕರು, ಗೌರವಾಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನ.4 ರಿಂದ ಮೂರ್ಜೆ (ಮೂರ್ಕಜೆ) ಕುಟುಂಬಸ್ಥರ ಅಷ್ಟಮಂಗಲ ಪ್ರಶ್ನಾ ಚಿಂತನ ಕಾರ್ಯಕ್ರಮವು ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.