HomePage_Banner
HomePage_Banner

ಕನ್ನಡ ಇಂಗ್ಲಿಷ್ ನುಂಗಿತ್ತ‍ಾ?

ಲಾಲಿತ್ಯ ಪೂರ್ಣವಾದ ಕನ್ನಡ ಕಲಿಕೆ ಮತ್ತು ಬಳಕೆ ಆದಾಗ ಭಾಷೆ ಜೀವಂತವಾಗಿ ಉಳಿಯಬಲ್ಲುದು. ಅನೇಕ ಆಂಗ್ಲ ಮಾಧ್ಯಮ ಶಾಲೆಗಳಂತೆ ಕೇವಲ ಪರೀಕ್ಷೆಗಾಗಿ ಕನ್ನಡ ಕಲಿತರೆ ನಮ್ಮ ಸಂಸ್ಕೃತಿಯ ಸೌಂದರ್ಯದ ಸೆಲೆಗಳು ಮಕ್ಕಳಿಗೆ ಅರ್ಥವಾಗುವುದೇ ಇಲ್ಲ. ಅವರ ಹೃದಯಕ್ಕೆ ಕನ್ನಡ ಭಾಷೆಯಂತೂ ಮುಟ್ಟುವುದೇ ಇಲ್ಲ.

ಭಾಷೆಯ ಸಮಾಜ ಕಟ್ಟುವಿಕೆಯ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸುವ ಮತ್ತು ಅದನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಪ್ರಮುಖ ಪರಿಕರಗಳಲ್ಲೊಂದು. ಇಲ್ಲದಿದ್ದಲ್ಲಿ ಸಂಸ್ಕೃತಿ ನಾಶವಾದಂತೆ. ಆಗ ಕನ್ನಡ ನಾಡು ಮತ್ತು ಇಲ್ಲಿನ ನಾಗರಿಕತೆ ಅಪಾಯದಲ್ಲಿ ಸಿಲುಕುತ್ತದೆ. ಕನ್ನಡ ಸಂಸ್ಕೃತಿ ಉಳಿಯದಿದ್ದರೆ ಹಣ್ಣಿನ ಸಮಾಜ ಉಳಿಯಲಾರದು.
ಆಂಗ್ಲ ಭಾಷಾ ಮಾಧ್ಯಮ ಶಿಕ್ಷಣವೇ ಸರ್ವಶ್ರೇಷ್ಠ ಎನ್ನುವ ಭ್ರಮೆಯಿಂದ ಹೆತ್ತವರು ರಾಜಕಾರಣಿಗಳು ಮತ್ತು ಸರಕಾರವು ಹೊರ ಬಂದಿಲ್ಲ. ಎನ್ನುವ ವಿಚಾರ ತೀರಾ ದುರದೃಷ್ಟಕರ. ಕನ್ನಡ ಕನ್ನಡ ಎಂದು ವೇದಿಕೆಯಲ್ಲಿ ಕೂಗುವ ಬದಲು ಕನ್ನಡ ಶಾಲೆಗಳನ್ನು ಆಕರ್ಷಣೀಯವಾಗಿಸಿ ಅವುಗಳನ್ನು ಉಳಿಸಿ ಬೆಳೆಸಲು ಸರಕಾರದವರು ಕಟಿಬದ್ಧರಾಗಬೇಕಿತ್ತು. ಅದು ಬಿಟ್ಟು ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಿ ಕನ್ನಡ ಭಾಷೆಗೆ ಅಂತಿಮ ಮೊಳೆ ಹೊಡೆಯಲು ಹೊರಟಿರುವುದು ತೀರಾ ವಿಷಾದನೀಯ. ಒಂದು ಭಾಷೆಯನ್ನು ಕೊಲ್ಲಲು ಹೊರಟರೆ ಅಲ್ಲಿನ ಸಂಸ್ಕೃತಿ ಮತ್ತು ನಾಗರಿಕತೆಯನ್ನು ನಾಶ ಮಾಡಿದಂತೆ ಎನ್ನುವ ಮಾತಿದೆ. ಇದನ್ನು ಅಂತೂ ಅರಿಯದಂತೆ ಸರಕಾರವೇಕೆ ನಡೆದುಕೊಳ್ಳುತ್ತಿದೆ? ಭಿನ್ನಾಭಿಪ್ರಾಯವು ಸಮೂಹ ಸನ್ನಿಯಿಂದಾಗಿ ತಪ್ಪಾಗಿದ್ದಲ್ಲಿ ಅದಲು ಸರಕಾರ ಅಚ್ಚರಿ ಪಡಿಸಬೇಕು ತಾನೇ?

ಅಧ್ಯಯನಕ್ಕೂ, ಅಧ್ಯಾಪನಕ್ಕೆ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಸರ್ವ ಶ್ರೇಷ್ಠವಾದುದು. ಮಾತೃಭಾಷಾ ಮಾಧ್ಯಮದಲ್ಲಿ ಪ್ರಾಥಮಿಕ ಶಾಲಾ ಮಕ್ಕಳು ಕಲಿಕೆಯನ್ನು ತುಂಬಾ ಆನಂದಿಸುತ್ತಾರೆ. ಹಾಗಿದ್ದಾಗಲೇ ಅವರಲ್ಲಿ ಆತ್ಮವಿಶ್ವಾಸ ಜಾಸ್ತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಭದ್ರ ಬುನಾದಿ ಸಿಗುತ್ತದೆ. ಅದು ಬಿಟ್ಟು ಪರದೇಶಿ ಮಾಧ್ಯಮವನ್ನು ಪ್ರಾಥಮಿಕ ಹಂತದಲ್ಲಿ ಹೇರಿ ಪುಟ್ಟ ಮಕ್ಕಳನ್ನು ಬಾಯಿಪಾಠ ಮಾಡುವ ಗಿಳಿಗಳನ್ನಾಗಿ ಮಾಡುವುದೇತಕ್ಕೆ? ಒಂದು ಭಾಷೆಯಾಗಿ ಇಂಗ್ಲಿಷ್ ನ್ನಾಗಲಿ ಹಿಂದಿಯನ್ನಾಗಲಿ ಕಲಿಯುವುದು ಸ್ವಾಗತಾರ್ಹ. ಆದರೆ ಇದು ಶಿಕ್ಷಣ ಮಾಧ್ಯಮವಾಗಿ ಪ್ರಾಥಮಿಕ ಹಂತದಲ್ಲಿ ಸಲ್ಲದು ಕನ್ನಡ ಭಾಷೆಯ ಕಲಿಕೆ ಮತ್ತು ಬಳಕೆ ಹೆಚ್ಚೆಚ್ಚು ಆಗಲೇಬೇಕಾಗಿದೆ. ಕನ್ನಡ ನಾಡಿನ ಶ್ರೀಮಂತ ನಾಗರಿಕತೆ ನಿರಂತರ ಉಳಿಯಬೇಕಾದರೆ ಕನ್ನಡ ಭಾಷೆಯಲ್ಲಿ ಓದುವುದು ಬರೆಯುವುದು ಮಾತನಾಡುವುದು ಅತಿ ಅವಶ್ಯ. ಇದು ಈಡೇರಿದಾಗಲೇ ರಾಜ್ಯೋತ್ಸವದ ಆಚರಣೆ ಅರ್ಥಪೂರ್ಣವಾಗುವುದು.

ಆದರೆ ಬರಬರುತ್ತಾ ಕನ್ನಡ ಭಾಷೆಯನ್ನು ಕನ್ನಡ ನಾಡನ್ನು ಇಂಗ್ಲಿಷ್ ನುಂಗುತ್ತಿದೆ. ಎಚ್ಚರ, ಎಚ್ಚರ!!

-ಶ್ರೀಕೃಷ್ಣ ಬಿ.ಎನ್.
ಮಕ್ಕಳ ತಜ್ಞರು, ಸುಳ್ಯ

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.