ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ವತಿಯಿಂದ ಸುಳ್ಯ ತಾಲ್ಲೂಕು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಬೆಳ್ಳಾರೆ ಇದರ ಕಟ್ಟಡದಲ್ಲಿ ರಬ್ಬರ್ ಬೆಳೆಗಾರರ ಅನುಕೂಲಕ್ಕಾಗಿ ನೂತನ ರಬ್ಬರ್ ಖರೀದಿ ಕೇಂದ್ರದ ಶುಭಾರಂಭವು ನ.14ರಂದು ಬೆಳ್ಳಾರೆಯ ಮೇಲಿನಪೇಟೆ ಸುಳ್ಯ ತಾ. ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ನಡೆಯಲಿದೆ.
ಅಲ್ಲದೆ ಚೊಕ್ಕಾಡಿ ರಬ್ಬರ್ ಉತ್ಪಾದಕರ ಸಂಘ ಕುಕ್ಕುಜಡ್ಕ, ಸುಳ್ಯ ತಾಲೂಕು ಮಹಿಳಾ ವಿವದೋದ್ಧೇಶ ಸಹಕಾರಿ ಸಂಘ (ರಿ.) ಜಾಲ್ಸೂರು ಇಲ್ಲಿಯೂ ಕೂಡಾ ರಬ್ಬರ್ ಖರೀದಿಸಲಾಗುವುದು ಎಂದು ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.