HomePage_Banner
HomePage_Banner

ಕಲ್ಲುಗುಂಡಿ ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚಿನಲ್ಲಿ ಮಕ್ಕಳ ದಿನಾಚರಣೆ

ಕಲ್ಲುಗುಂಡಿ ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚಿನ ಯುವ ಸಂಘಟನೆಯಿಂದ ಮಕ್ಕಳ ದಿನಾಚರಣೆಯನ್ನು ನ.10ರಂದು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಕೆನರಾ ಕಮ್ಯೂನಿಕೇಶನ್ ಸೆಂಟರ್‌ನ ನಿರ್ದೇಶಕ ಫಾ.ರಿಚ್ಚರ್ಡ್ ಡಿಸೋಜ ಆಗಮಿಸಿ ಮಾಧ್ಯಮದ ಕುರಿತು ಮಾಹಿತಿ ನೀಡಿದರು.
ಬೆಳ್ಳಾರೆ ಚರ್ಚ್‌ನ ಧರ್ಮಗುರು ಪೌಲ್ ಸೆಬೆಸ್ಟೀನ್ ಡಿಸೋಜ ಆಗಮಿಸಿ ಮ್ಯಾಜಿಕ್ ಶೋ ಕಾರ್ಯಕ್ರಮ ನಡೆಸಿಕೊಟ್ಟರು. ಮಕ್ಕಳ ದಿನಾಚರಣೆಯಂದು ಹಮ್ಮಿಕೊಂಡ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಚರ್ಚ್ ಧರ್ಮಗುರು ಫಾ.ನವೀನ್ ಪ್ರಕಾಶ್ ಪಿಂಟೋ, ಧರ್ಮಭಗಿನಿಯರು, ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಹಾಗೂ ಮಕ್ಕಳು, ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.