HomePage_Banner
HomePage_Banner

ಸುಳ್ಯದಲ್ಲಿ ಗೃಹರಕ್ಷಕರಿಗೆ ಭಡ್ತಿ ಘೋಷಣೆ ಮತ್ತು ಸನ್ಮಾನ ಕಾರ್ಯಕ್ರಮ


ಸುಳ್ಯದ ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕರಿಗೆ ಭಡ್ತಿ ಘೋಷಣೆ ಮತ್ತು ಸನ್ಮಾನ ಕಾರ್ಯಕ್ರಮ ಇಂದು ಯುವಜನ ಸಂಯುಕ್ತ ಮಂಡಳಿಯ ವಠಾರದಲ್ಲಿ ನಡೆಯಿತು. ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ.,ಮುರಳೀಮೋಹನ್ ಚೂಂತಾರು ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ,ಸದಾಶಿವ, ದ.ಕ.ಜಿಲ್ಲಾ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಮುಖ್ಯ ಅತಿಥಿಗಳಾಗಿದ್ದರು. ತಾಲೂಕು ಪ್ಲಟೂನ್ ಕಮಾಂಡರ್ ಜಯಂತ ಶೆಟ್ಟಿ ಸ್ವಾಗತಿಸಿದರು.


ಕಾರ್ಯಕ್ರಮದಲ್ಲಿ ಸೆಕ್ಷನ್ ಲೀಡರ್‌ಗಳಾಗಿ ಭಡ್ತಿ ಹೊಂದಿದ ಕಿರಣ್‌ಕುಮಾರ್ ಕೆ.ಆರ್., ವಿಶ್ವನಾಥ್ ಎನ್., ಅಶ್ವಥ್ ಕೆ.ರವರುಗಳಿಗೆ ಹಾಗೂ ಅಸಿಸ್ಟೆಂಟ್ ಸೆಕ್ಷನ್ ಲೀಡರ್‌ಗಳಾಗಿ ಭಡ್ತಿ ಹೊಂದಿದ ಪಿ.ಟಿ.ಗಿರಿಧರ, ಲೋಕೇಶ್ ಟಿ.ಬಿ., ಗೋಪಾಲಕೃಷ್ಣ, ಪದ್ಮಯ್ಯ, ಪ್ರಭಾಕರ ಪೈಯವರುಗಳಿಗೆ ಭಡ್ತಿ ಆದೇಶ ಪ್ರತಿಗಳನ್ನು ಡಾ. ಮುರಳೀಮೋಹನ್ ಚೂಂತಾರು ವಿತರಿಸಿದರು.

ಇತ್ತೀಚೆಗೆ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ತಾಲೂಕು ಆಡಳಿತದಿಂದ ಪುರಸ್ಕರಿಸಲ್ಪಟ್ಟ ಹೋಂಗಾರ್ಡ್ ಪುಷ್ಪಾವತಿ ಹಾಗೂ ಎಟಿಎಂನಲ್ಲಿ ದೊರೆತ ಹಣವನ್ನು ವಾರಿಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಹೋಂಗಾರ್ಡ್ ಗೀತಾರವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.