HomePage_Banner
HomePage_Banner

ಮೇದಿನಡ್ಕ : ನೂತನ ಅಂಗನವಾಡಿ ಕಟ್ಟಡಕ್ಕೆ ಗುದ್ದಲಿಪೂಜೆ

 


ಅಜ್ಜಾವರ ಗ್ರಾಮದ ಮೇದಿನಡ್ಕದಲ್ಲಿ ಅಂಗನವಾಡಿ ಕೇಂದ್ರದ ಹೊಸ ಕಟ್ಟಡಕ್ಕೆ ಗುದ್ದಲಿಪೂಜೆ ನ.೨೨ರಂದು ನಡೆಯಿತು.
ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಪುಷ್ಪಾವತಿ ಬಾಳಿಲ., ಗ್ರಾ.ಪಂ. ಅಧ್ಯಕ್ಷೆ ಬೀನಾ ಕರುಣಾಕರ, ಸದಸ್ಯರಾದ ರೂಪಾನಂದ ಕರ್ಲಪ್ಪಾಡಿ, ಗೀತಾ ಮಾವಿನಪಳ್ಳ, ಸಿಡಿಪಿಒ ಶ್ರೀಮತಿ ರಶ್ಮಿ, ಮೇಲ್ವಿಚಾರಕಿ ಶೈಲಜಾ, ಅಜ್ಜಾವರ ಗ್ರಾ.ಪಂ. ಪಿ.ಡಿ.ಒ. ಜಯಮಾಲ, ಜಿ.ಪಂ. ಮಾಜಿ ಸದಸ್ಯ ನವೀನ್ ರೈ ಮೇನಾಲ, ಮಹೇಶ್ ರೈ ಮೇನಾಲ, ನಿರಂಜನ್ ಕರ್ಲಪ್ಪಾಡಿ, ಯತೀಶ್ ಪಡ್ಡಂಬೈಲ್, ಪುರುಷೋತ್ತಮ ನಾರ್ಕೋಡು ಭಾಗವಹಿಸಿದ್ದರು. ಸ್ಥಳೀಯರಾದ ಅಂಗನವಾಡಿ ಕಾರ್ಯಕರ್ತೆ ಶಿವಪಾಕ್ಯ. ಸಹಾಯಕಿ ಕವಿತಾ, ದೇವಸ್ಥಾನದ ಅರ್ಚಕ ಯೋಗರಾಜ್, ನಾಚಿಮುತ್ತು, ಉಮೇಶ್, ಪಾರ್ಥಿವನ್, ಆನಂದ, ಹರಿಬ್ರಹ್ಮ, ನಿತ್ಯಾನಂದ, ವಿನೀತ್, ಮುರುಗೇಶ್, ಭಾಸ್ಕರನ್, ಸತ್ಯಶೀಲನ್, ಶರವಣ, ರೇಖಾ, ದೀಪಿಕಾ, ಕಟ್ಟಡದ ಗುತ್ತಿಗೆದಾರ ರವಿ ಅಡ್ಕಾರ್ ಮೊದಲಾದವರಿದ್ದರು. ದಯಾಳನ್ ಮೇದಿನಡ್ಕ ಸ್ವಾಗತಿಸಿದರು. ರಮೇಶ್ ಮೇದಿನಡ್ಕ ಕಾರ್ಯಕ್ರಮ ನಿರೂಪಿಸಿದರು.
ಎಂ.ಆರ್.ಪಿ.ಎಲ್. ನಿಂದ ೫ ಲಕ್ಷರೂ ಹಾಗೂ ನರೇಗಾ ಯೋಜನೆಯಲ್ಲಿ ರೂ. ೫ ಲಕ್ಷ ಹೀಗೆ ೧೦ ಲಕ್ಷ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಾಗಲಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.