HomePage_Banner
HomePage_Banner
HomePage_Banner
HomePage_Banner

ಹಿರಿಯರ ಕ್ರೀಡಾಕೂಟದಲ್ಲಿ ಮಂಡೆಕೋಲಿಗೆ ಹಲವು ಪ್ರಶಸ್ತಿ

ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನ.24ರಂದು ನಡೆದ 2019ನೇ ಸಾಲಿನ ಹಿರಿಯರ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಮಂಡೆಕೋಲು ಗ್ರಾಮದ 5 ಮಂದಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಮಂಡೆಕೋಲು ಗ್ರಾ.ಪಂ. ಸದಸ್ಯ ಬಾಲಚಂದ್ರ ದೇವರಗುಂಡ ೫೦ರ ವಯೋಮಾನದಲ್ಲಿ ಎತ್ತರ ಜಿಗಿತ ಮತ್ತು ಜಾವಲಿನ್ ಎಸೆತದಲ್ಲಿ ಪ್ರಥಮ, ಹಾಗೂ ಲಾಂಗ್ ಜಂಪ್‌ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಅವರ ಪತ್ನಿ ಮಂಡೆಕೋಲು ಸಹಕಾರಿ ಸಂಘದ ನಿರ್ದೇಶಕಿ ಶ್ರೀಮತಿ ತುಳಸಿನಿ ದೇವರಗುಂಡ ೪೦ರ ವಯೋಮಾನದಲ್ಲಿ ಶಾಟ್‌ಪುಟ್‌ನಲ್ಲಿ ಪ್ರಥಮ, ಲಾಂಗ್‌ಜಂಪ್‌ನಲ್ಲಿ ದ್ವಿತೀಯ ಮತ್ತು 1೦೦ ಮೀ ಒಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡರು. ನಾರಾಯಣ ಕಲ್ಲಡ್ಕ ಪೆರಾಜೆ ೪೦ರ ವಯೋಮಾನದಲ್ಲಿ 15೦೦ ಮೀ, 8೦೦ ಮೀ ಮತ್ತು 4೦೦ ಮೀ ಓಟದಲ್ಲಿ ಭಾಗವಹಿಸಿ ಮೂರು ವಿಭಾಗದಲ್ಲಿಯೂ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಕುಕ್ಕುಡೇಲು ದೇವದಾಸ್ ೫೦ ವಯೋಮಾನದಲ್ಲಿ 1೦೦ ಮೀ ಓಟದಲ್ಲಿ ದ್ವಿತೀಯ, 2೦೦ ಮೀ ಮತ್ತು 4೦೦ ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಪತ್ನಿ ಶ್ರೀಮತಿ ಅನಿತಾ ಡಿ.ಸಿ.ಯವರು 45ರ ವಯೋಮಾನದಲ್ಲಿ ಶಾಟ್‌ಪುಟ್ ಮತ್ತು ಡಿಸ್ಕಸ್ ಎಸೆತದಲ್ಲಿ ಪ್ರಥಮ, ಲಾಂಗ್ ಜಂಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರೆಲ್ಲರೂ ಡಿ.14, 15ರಂದು ಚಿತ್ರದುರ್ಗದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಟಾ ಕೂಟದಲ್ಲಿ ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.