ಪೆರುವಾಜೆ: ನೇಣುಬಿಗಿದು ಯುವಕ ಆತ್ಮಹತ್ಯೆ

Advt_Headding_Middle
Advt_Headding_Middle

ಪೆರುವಾಜೆ ಗ್ರಾಮದ ಅಡ್ಯತಕಂಡ ಎಂಬಲ್ಲಿ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.೯ ರಂದು ನಡೆದಿದೆ.
ಪೆರುವಾಜೆ ಅಡ್ಯತಕಂಡ ಮನೆಯ ನಾರಾಯಣ ಪೂಜಾರಿ (38) ಎಂಬವರು ಮನೆಯ ಸಮೀಪದ ಗೇರುಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡಿ.8ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿ ಬಂದವರು ರಾತ್ರಿ 9.00 ಗಂಟೆಯ ಹೊತ್ತಿಗೆ ಕೆಲಸಕ್ಕೆ ಹೋಗುವ ಬಟ್ಟೆಬರೆಗಳ ಚೀಲವನ್ನು ಕೈಯಲ್ಲಿ ಹಿಡಿದುಕೊಂಡು ಹೊರಗೆ ಹೋದವರು ವಾಪಾಸ್ಸು ಮನೆಗೆ ಬಾರದೆ ಇದ್ದಾಗ ಮನೆಯವರು ಹುಡುಕಾಡಿದರು. ಹುಡುಕಾಡಿದಾಗ ಮನೆ ಸಮೀಪದ ಗೇರು ಮರಕ್ಕೆ ಲುಂಗಿಯಿಂದ ಕುತ್ತಿಗೆಗೆ ಬಿಗಿದು ನೇಣುಬಿಗಿದುಕೊಂಡಿರುವುದು ಕಂಡು ಬಂದಿತ್ತು.
ಈ ಬಗ್ಗೆ ಮೃತರ ಪತ್ನಿ ಶ್ರೀಮತಿ ವನೀತರವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.