ಪಂಜ: ಜೈ ಕರ್ನಾಟಕ ಯುವಕ ಮಂಡಲ ಮತ್ತು ಕೃಪಾ ಯುವತಿ ಮಂಡಲ ಇದರ ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle

ಜೈ ಕರ್ನಾಟಕ ಯುವಕ ಮಂಡಲ ಮತ್ತು ಕೃಪಾ ಯುವತಿ ಮಂಡಲ (ರಿ.) ಅಳ್ಪೆ ಚಿಂಗಾಣಿಗುಡ್ಡೆ ಇದರ 2020ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು
ಶ್ರೀ ಉಳ್ಳಾಕುಲು ಉಳ್ಳಾಳ್ತಿ ದೈವಸ್ಥಾನದ ವಠಾರದಲ್ಲಿ ನೆರವೇರಿತು. ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಲೋಕೇಶ್ ಅಳ್ಪೆ ಕೊಡಿ ಮತ್ತು ಪವನ್ ಕುಮಾರ್ .ಬಿ ಕಾರ್ಯದರ್ಶಿಯಾಗಿ ಹಾಗೂ ಕೃಪಾ ಯುವತಿ ಮಂಡಲದ ಅಧ್ಯಕ್ಷರಾಗಿ ಶ್ರೀಮತಿ ಜಲಜಾಕ್ಷಿ ಕೆ ಅಳ್ಪೆ ಕೋಡಿ ಮತ್ತು ಶ್ರೀಮತಿ ಮೀನಾಕ್ಷಿ ಕೆ ಅಳ್ಪೆ ಕೋಡಿ ಅವಿರೋಧವಾಗಿ ಆಯ್ಕೆಯಾದರು.   
ಪ್ರಸಕ್ತ ವರ್ಷದ ಅಧ್ಯಕ್ಷ ನಾರಾಯಣ ಶೀರಾಜೆ ಮತ್ತು ಯುವತಿ ಮಂಡಳದ ಅಧ್ಯಕ್ಷೆ ಶ್ರೀಮತಿ ವಿದ್ಯಾಶ್ರೀ ಕರಿಮಜಲು ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ನೆರವೇರಿತು.

 

ಹಾಗೂ ವಿವಿಧ ಸಮಿತಿಯ ಸಂಚಾಲಕರಾಗಿ ಸದಸ್ಯರನ್ನು ಆಯ್ಕೆಗೊಳಿಸಲಾಯಿತು.
ಜಂಟಿ ಸಂಸ್ಥೆಗಳ ಎಲ್ಲಾ ಪದಾಧಿಕಾರಿಗಳು, ಪೂರ್ವಾಧ್ಯಕ್ಷರುಗಳು ಮತ್ತು ಸದಸ್ಯರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಡಿ.28ರಂದು ನೂತನ ಪದಾಧಿಕಾರಿಗಳ ಪ್ರಮಾಣ ವಚನ ಮತ್ತು ವಾರ್ಷಿಕೋತ್ಸವ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.