HomePage_Banner
HomePage_Banner
HomePage_Banner
HomePage_Banner

ಕೆವಿಜಿ ಸುಳ್ಯ ಹಬ್ಬದ ಪ್ರಯುಕ್ತ ವಿವಿಧ ಕ್ರೀಡಾಕೂಟ

ಡಿ. 15 ರಂದು ಗಾಂಧಿನಗರದಲ್ಲಿ ಫುಟ್ಬಾಲ್ ಪಂದ್ಯಾಟ

ಡಿ. 22ರಂದು ಅಂತಾರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ

ಡಿ.24 ರಂದು ರಾಜ್ಯಮಟ್ಟದ ಹೊನಲು ಬೆಳಕಿನ ಲಗೋರಿ ಪಂದ್ಯಾಟ

ಡಿ. 25 ರಂದು ಮಹಿಳೆಯರಿಗೆ ತ್ರೋಬಾಲ್ – ಪುರುಷರಿಗೆ ಕಬಡ್ಡಿ ಪಂದ್ಯಾಟ

ಸುಳ್ಯದ ಅಮರಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡ ಅವರ ಜನ್ಮ ದಿನಾಚರಣೆಯನ್ನು ಕೆವಿಜಿ ಸುಳ್ಯ ಹಬ್ಬವನ್ನಾಗಿ ಕಳೆದ ಒಂಬತ್ತು ವರ್ಷಗಳಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದು, ಈ ಹಬ್ಬದಲ್ಲಿ ರಾಜ್ಯಮಟ್ಟದ ಲಗೋರಿ ಪಂದ್ಯಾಟ ನಡೆಯಲಿದೆ ಎಂದು ಕ್ರೀಡಾ ಸಂಚಾಲಕ ದೊಡ್ಡಣ್ಣ ಬರೆಮೇಲು ತಿಳಿಸಿದರು. ಡಿ. ೧೧ರಂದು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ಸುಳ್ಯ ತಾಲ್ಲೂಕು ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಡಿಸೆಂಬರ್ ೨೧ರಂದು ಅಂತಾರಾಜ್ಯ ಮಟ್ಟದ ಪುರುಷರ ಬ್ಯಾಡ್ಮಿಂಟನ್ ಹಾಗೂ ಡಿಸೆಂಬರ್ ೨೨ ರಂದು ಸುಳ್ಯ ತಾಲ್ಲೂಕಿನ ಪುರುಷರ ಹಾಗೂ ಮಹಿಳೆಯರ ಮತ್ತು ಬಾಲಕ -ಬಾಲಕಿಯರಿಗೆ ಬ್ಯಾಡ್ಮಿಂಟನ್ ಸ್ಪರ್ಧೆಯನ್ನು ಕುರುಂಜಿಗುಡ್ಡೆ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.


ಡಿಸೆಂಬರ್ ೨೪ ರಂದು ಸುಳ್ಯ ತಾಲ್ಲೂಕು ಲಗೋರಿ ಅಸೋಸಿಯೇಷನ್ ಮತ್ತು ದ.ಕ.ಜಿಲ್ಲಾ ಲಗೋರಿ ಅಸೋಸಿಯೇಷನ್ ಸಹಕಾರದೊಂದಿಗೆ ರಾಜ್ಯಮಟ್ಟದ ಹೊನಲು ಬೆಳಕಿನ ಲಗೋರಿ ಪಂದ್ಯಾಟವನ್ನು ಸಂಘಟಿಸಲಾಗಿದೆ. ರಾಜ್ಯದ ಎಂಟು ತಂಡಗಳು ಈಗಾಗಲೇ ಹೆಸರು ನೋಂದಾಯಿಸಿ ತಾಲೂಕಿನ ಆಸಕ್ತ ಕ್ರೀಡಾಪಟುಗಳಿಗೆ ಲಗೋರಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ರಾಜ್ಯಮಟ್ಟದಿಂದ ಎಂಟು ತಂಡಗಳು ನೋಂದಾಯಿಸಿದ್ದು, ಮಂಡ್ಯ, ಕೊಡಗು, ಮೈಸೂರು, ಚಿಕ್ಕಮಗಳೂರು, ಮಂಗಳೂರಿನ ಹನುಮಾನ್ ಲಗೋರಿಯನ್ಸ್, ವಿಶೇಷವಾಗಿ ಸುಳ್ಯ ತಾಲೂಕಿನ ಪಂಚಶ್ರೀ ಪಂಜ, ಗರುಡ ಚೊಕ್ಕಾಡಿ, ಪೆರಾಜೆ, ಕೆವಿಜಿ ಕ್ಯಾಂಪಸ್ ಮತ್ತು ವಿದ್ಯಾರಶ್ಮಿ ವಿದ್ಯಾಲಯ ಹೀಗೆ ಹತ್ತು ತಂಡಗಳು ಹೆಸರು ನೋಂದಾಯಿಸಿ ಕೊಂಡಿರುತ್ತವೆ. ನಂತರ ಕೆಲವೊಂದು ತಂಡಗಳು ಅವಕಾಶ ಕೋರಿದ ಕಾರಣ ಜಾನಪದ ಕ್ರೀಡೆ ಮತ್ತಷ್ಟು ಬೆಳೆಸುವ ಉದ್ದೇಶದಿಂದ ತಾಲೂಕು ಹಾಗೂ ಜಿಲ್ಲೆಯ ಲಗೋರಿ ತಂಡಗಳಿಗೆ ಭಾಗವಹಿಸುವಿಕೆ ಅವಕಾಶವಿದ್ದು, ಹೆಸರು ನೋಂದಾಯಿಸಿದ್ದಲ್ಲಿ ಅದೇ ದಿನ ಅಪರಾಹ್ನ ೨ ಗಂಟೆಗೆ ನಾಕೌಟ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ. ಈ ಮಾದರಿಯಲ್ಲಿ ಸೆಮಿಫೈನಲಿಗೆ ಬಂದ ನಾಲ್ಕು ತಂಡಗಳನ್ನು ಇತರೆ ಜಿಲ್ಲೆಗಳಿಂದ ಬಂದ ನಾಲ್ಕು ತಂಡಗಳೊಟ್ಟಿಗೆ ವಿಲೀನಗೊಳಿಸಿ ಲೀಗ್ ಮಾದರಿಯ ಪಂದ್ಯಾಟವನ್ನು ಮತ್ತೆ ನಡೆಸಲು ಉದ್ದೇಶಿಸಲಾಗಿದೆ ಎಂದು ಕೆವಿಜಿ ಸುಳ್ಯ ಹಬ್ಬ ಕ್ರೀಡಾ ಸಂಚಾಲಕರಾದ ದೊಡ್ಡಣ್ಣ ಬರೆಮೇಲುರವರು ವಿವರ ನೀಡಿದರು.
ಡಿ. ೨೫ರಂದು ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟ ಮತ್ತು ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ವತಿಯಿಂದ ತಾಲೂಕು ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟ ಜರುಗಲಿದೆ. ಡಿ. ೧೫ರಂದು ಗಾಂಧಿನಗರ ಮೈದಾನದಲ್ಲಿ ಫುಟ್ಬಾಲ್ ಪಂದ್ಯಾಟ ನಡೆಯುವುದು.

ಈ ಬಾರಿ ಕ್ರೀಡೆಗಳ ಆಯಾಯ ಅಸೋಸಿಯೇಷನ್ ವತಿಯಿಂದ ಪಂದ್ಯಾಟವೇ ಸಂಘಟಿಸಿದ್ದು, ಕೆವಿಜಿ ಸುಳ್ಯ ಹಬ್ಬ ಸಮಿತಿಯ ಸಹಕಾರದೊಂದಿಗೆ ನಡೆಸಲಾಗುವುದು. ಎಲ್ಲ ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಟ್ರೋಫಿ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ಹಬ್ಬ ಸಮಿತಿಯ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಪದಾಧಿಕಾರಿಗಳಾದ ಎನ್.ಎ. ರಾಮಚಂದ್ರ, ಶರೀಫ್ ಕಂಠಿ ಉಪಸ್ಥಿತರಿದ್ದರು. ಅಬ್ದುಲ್ ರಹಿಮಾನ್ ಮೊಗರ್ಪಣೆ ಅಂತಾರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟದ ವಿವರ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.