ಡಿ.29ರಂದು ಎಣ್ಮೂರಿನಲ್ಲಿ ಬಂಟರ ಸಮಾವೇಶ

Advt_Headding_Middle
Advt_Headding_Middle
Advt_Headding_Middle

“ಬಂಟರ ಯಾನೆ ನಾಡವರ ಸಂಘ ಸುಳ್ಯ ಹಾಗೂ ಸುಳ್ಯ ವಲಯ ಬಂಟರ ಸಂಘ ಬಾಳಿಲ ಇದರ ಆಶ್ರಯದಲ್ಲಿ ಬಂಟರ ಸಮಾವೇಶವು ಡಿ.29ರಂದು ಎಣ್ಮೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ” ಎಂದು ತಾಲೂಕು ಬಂಟರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಹಾಗೂ ಕಾರ್ಯದರ್ಶಿ ಸುಭಾಶ್ಚಂದ್ರ ರೈ ತೋಟ ಹೇಳಿದರು.
ಡಿ.19ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮದ ವಿವರ ನೀಡಿದ ಅವರು, ಎಣ್ಮೂರು ಶಾಲಾ ವಠಾರದಲ್ಲಿ ನಿರ್ಮಿಸಲಾಗುವ ಕಟ್ಟಬೀಡು ದಿ| ಚಂದ್ರಭಾಗೀ ಕಾಂತಪ್ಪ ಶೆಟ್ಟಿ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ ಉದ್ಘಾಟನೆ ನಡೆಯಲಿದ್ದು ಬಂಟರ ಯಾನೆ ನಾಡವರ ಸಂಘ ಮಂಗಳೂರು ಇದರ ತಾಲೂಕು ಸಂಚಾಲಕ ದಿವಾಕರ ರೈ ಪೆರಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಗತಿ ಪರ ಕೃಷಿಕ ಮರ್ದೂರು ನಾರಾಯಣ ರೈ ಮರುವಂಜ ಕಾರ್ಯಕ್ರಮ ಉದ್ಘಾಟಿಸುವರು. ಸಮಾರಂಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ವಿಶೇಷ ಪುರಸ್ಕಾರ ಪ್ರದಾನ ಮಾಡುವರು. ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಗರಡಿಯ ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಯುವ ಸಾಧಕರನ್ನು ಗೌರವಿಸುವರು. ನಿವೃತ್ತ ಡಿವೈಎಸ್‌ಪಿ ಎನ್.ಜಗನ್ನಾಥ ರೈ ಮಾದೋಡಿ ಪ್ರತಿಭಾ ಪುರಸ್ಕೃತರನ್ನು ಗೌರವಿಸಲಿದ್ದಾರೆ. ಹಲವು ಮಂದಿ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಯುವ ಪುರಸ್ಕಾರ : ಸಮಾರಂಭದಲ್ಲಿ ಜಗನ್ನಾಥ ರೈ ಬಜನಿಗುತ್ತು ಡಿವೈಎಸ್‌ಪಿ ಬೆಂಗಳೂರು, ತಾರನಾಥ ರೈ ಉರುಂಬಿ ಚಲನಚಿತ್ರ ನಿರ್ಮಾಪಕರು, ಪ್ರಭಾಕರ ಆಳ್ವ ಬಜನಿಗುತ್ತು ವಿಶೇಷ ಸಾಧನ ಜೀವ ವಿಮಾ ವಿಭಾಗ, ಶ್ರೀಮತಿ ಗುಲಾಬಿ ಕೆ ಶೆಟ್ಟಿ ನಾಲ್ಗುತ್ತು ಮಹಿಳಾ ಉದ್ಯಮಿ ಇವರಿಗೆ ಯುವ ಪುರಸ್ಕಾರ ನೀಡಿ ಗೌರವಿಸಲಾಗುವುದು.
ವಿಶೇಷ ಪುರಸ್ಕಾರ : ರಕ್ತದಾನಿ ಪಿ.ಬಿ.ಸುಧಾಕರ ರೈ ಪೆರಾಜೆ, ದಾನಿ ಶ್ರೀಮತಿ ಪುಷ್ಪಾ ಪಿ ರೈ ಪೋನಡ್ಕ, ಡಾ| ಶಬರೀಶ ಪಿ.ರೈ ಪಿ.ಎಚ್.ಡಿ. (ತೋಟಗಾರಿಕಾ ಕ್ಷೇತ್ರ), ಹರಿಪ್ರಸಾದ್ ರೈ ಬಾಳಿಲ ದೈಹಿಕ ಶಿಕ್ಷಣ ಶಿಕ್ಷಕರು, ಕು| ವೈಭವ ಎಸ್ ರೈ ಮುಂಡ್ರಾಡಿ ಸಿ.ಎ. ಇಂಟರ್‌ಮೀಡಿಯೇಟರಿ ರ್‍ಯಾಂಕ್, ಕು| ನಿಕ್ಷಿತಾ ವಿ ಶೆಟ್ಟಿ ಪರಾರಿ ಕೊಡಿಯಾಲ, ಮಾ| ಸೂರಜ್ ಭಂಡಾರಿ ಬಜನಿಗುತ್ತು ರಾಷ್ಟ್ರಮಟ್ಟದ ಕರಾಟೆಪಟು ಇವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಅಪರಾಹ್ನ ಬಂಟರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯುವುದು. ಬಳಿಕ ಅಂತರ ವಲಯ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯುವುದು.
ಸಮಾರೋಪ : ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಸಂಸದ ನಳಿನ್ ಕುಮಾರ್ ಕಟೀಲ್, ಪ್ರಗತಿ ಪರ ಕೃಷಿಕ ಚಿಕ್ಕಪ್ಪ ನಾಯ್ಕ್ ಅರಿಯಡ್ಕ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.
17ಮಂದಿ ಸಾಧಕರಿಗೆ ಸನ್ಮಾನ
ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಗುವುದು.
ಶಿಕ್ಷಣದಲ್ಲಿ ಎನ್.ಜಿ. ಶ್ರೀನಿವಾಸ ರೈ, ಪ್ರಾಮಾಣಿಕ ಸರಕಾರಿ ಸೇವೆಗೆ ಗಣೇಶ್ ರೈ ಇದುಂಗುಳಿ, ಧಾರ್ಮಿಕದಲ್ಲಿ ಪಿಜಾವುಗುತ್ತು ಜಗನ್ನಾಥ ರೈ, ಸಾರಿಗೆ ಮಹಾಬಲ ರೈ ಕೊಡ್ಡೋಳು, ಸಹಕಾರಿ ಕಳಂಜ ವಿಶ್ವನಾಥ ರೈ, ಸಮಾಜಸೇವೆಗೆ ಶ್ರೀಮತಿ ಸುನಂದ ಆರ್ ರೈ ಕೊಡೆಂಕಿರಿ, ಕ್ರೀಡೆ ವಿಶ್ವನಾಥ ರೈ ಮರುವಂಜ, ಕೃಷಿ ಎಂಜೀರು ಪದ್ಮನಾಭ ರೈ, ಹೈನುಗಾರಿಕೆಯಲ್ಲಿ ಕೆ. ಸುಧೀರ್ ಕುಮಾರ್ ಶೆಟ್ಟಿ ಕಟ್ಟಬೀಡು, ಪತ್ರಿಕೋದ್ಯಮದಲ್ಲಿ ಕೆ.ಭಾಸ್ಕರ ರೈ ಕಟ್ಟಬೀಡು, ದೇಶಸೇವೆಗೆ ರತ್ನಾಕರ ರೈ ಪಾದೆಕಲ್ಲು, ವೈದ್ಯಕೀಯದಲ್ಲಿ ಡಾ| ರಾಮದಾಸ ರೈ ಮುಪ್ಪೇರ್ಯ, ಯಕ್ಷಗಾನದಲ್ಲಿ ಲಕ್ಷ್ಮೀನಾರಾಯಣ ರೈ ಗುರಿಕ್ಕಾನ, ಉದ್ಯಮದಲ್ಲಿ ಸೂರ್ಯ ರೈ ಹೊಸಮನೆ, ಕಂದಾಯ ಇಲಾಖೆ ಸೇವೆ ಎನ್.ಬಾಲಕೃಷ್ಣ ರೈ ಮುಪ್ಪೇರ್ಯ, ನಾಟಿ ವೈದ್ಯರಾಗಿ ಶ್ರೀಮತಿ ಕುಸುಮ ಎಸ್ ರೈ ಎಣ್ಮೂರು, ವಿವಿಧ ಕ್ಷೇತ್ರ ಸಾಧಕರುಗಳಾಗಿ ವಿಠಲ ರೈ ಪೋಳಾಜೆ, ಶ್ರೀಮತಿ ನೇತ್ರಾವತಿ ಎಂ ರೈ ಗುರಿಕ್ಕಾನ ಇವರನ್ನು ಸನ್ಮಾನಿಸಲಾಗುವುದು.
ಸಭಾ ಕಾರ್ಯಕ್ರಮ ಬಳಿಕ ವಿಧಾತ್ರಿ ಕಲಾವಿದೆರ್ ಕೈಕಂಬ ಕುಡ್ಲ ಇವರು ಅಭಿನಯಿಸುವ ಕುಸಲ್ ಬೊರ್ಚಿ ತುಳು ಹಾಸ್ಯಮಯ ನಾಟಕ ಮೂಡಿಬರುವುದು ಎಂದು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಾಳಿಲ ವಲಯಾಧ್ಯಕ್ಷ ಚಂದ್ರಹಾಸ ರೈ, ಕಾರ್ಯದರ್ಶಿ ಲೋಕನಾಥ ರೈ, ತಾಲೂಕು ಸಮಿತಿ ಖಜಾಂಚಿ ಗಂಗಾಧರ ರೈ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.