Breaking News

ಬೆಂಗಳೂರಿನ ಯಲಹಂಕದಲ್ಲಿ ಗುರುವಂದನಾ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ದಕ್ಷಿಣ ಕನ್ನಡ ವಿಶ್ವಬ್ರಾಹ್ಮಣ ಸಂಘ ಬೆಂಗಳೂರು, ಬೆಂಗಳೂರು ಗುರುಸೇವಾ ಪರಿಷತ್ ವತಿಯಿಂದ ಯಲಹಂಕ ವಿಶ್ವಕರ್ಮೇಣ ಧಾಮ್ನದ ಪೂಜಾಮಂದಿರದಲ್ಲಿ ಗುರುವಂದನಾ ಕಾರ್ಯಕ್ರಮ ಜರಗಿತು.
ಗುರುವಂದನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕಟಪಾಡಿ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ, “ಯಾವುದೇ ಕೆಲಸವನ್ನು ಆರಂಭಿಸುವುದು ಕಷ್ಟವಲ್ಲ. ಆದರೆ ಅದನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುವುದು ಪ್ರಯಾಸ. ಆದರೆ ಪರಿಶ್ರಮ, ಏಕಾಗ್ರತೆಯಿಂದ ಕೆಲಸ ಮಾಡಿದರೆ ಯಾವುದೇ ಕೆಲಸದಲ್ಲೂ ಜಯ ಸಾಧಿಸಬಹುದು” ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿ, ಗುರು ಪರಂಪರೆ ಎನ್ನುವುದು ಇಂದು ನಿನ್ನೆಯದಲ್ಲ. ಭಾರತದಲ್ಲಿ ಹಿಂದೂ ಸಂಸ್ಕೃತಿ ಪ್ರಾರಂಭವಾದಾಗಿನಿಂದಲೇ ಗುರು ಪರಂಪರೆ ಇದೆ. ವಿಶ್ವಕರ್ಮ ಸಮಾಜಕ್ಕೂ ಗುರು ಪರಂಪರೆ ಸಿಕ್ಕಿದ್ದು, ಉತ್ತಮ ಭವಿಷ್ಯಕ್ಕೆ ಸೋಪಾನ ಎಂದರು. ನಾಡಪ್ರಭು ಕೆಂಪೇಗೌಡರ ನಾಡು ಯಲಹಂಕ. ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು. ಬೆಂಗಳೂರನ್ನು ಕಟ್ಟಲು ಶ್ರೀ ಕೃಷ್ಣದೇವರಾಯರ ಸಹಾಯ ಪಡೆದು, ಬೆಂಗಳೂರನ್ನು ಕಟ್ಟಿದರು. ಇಂತಹ ಯಲಹಂಕದಲ್ಲಿ ವಿಶ್ವಕರ್ಮ ದಾಮ್ನಾ ನಿರ್ಮಾಣವಾಗಿದ್ದು ಖುಷಿಯ ವಿಚಾರ ಎಂದರು.
ಬಿಬಿಎಂಪಿ ಸದಸ್ಯರಾದ ಹೇಮಲತಾ ಸತೀಶ್, ಎಂ. ಸತೀಶ್ ಶುಭಹಾರೈಸಿದರು. ಶಂಕರಾಚಾರ್ಯ ಕಡ್ಲಾಸ್ಕರ್ ಹುಬ್ಬಳ್ಳಿ, ಮಂಗಳೂರು ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನದ ಎರಡನೇ ಮೊಕ್ತೇಸರ ಸುಂದರ ಆಚಾರ್ಯ, ಎಂ.ಬಿ. ಲೊಕೇಶ್ ಕಾಸರಗೋಡು, ಬೆಂಗಳೂರು ಗುರುಸೇವಾ ಪರಿಷತ್‌ನ ಸಂಚಾಲಕ ಹರಿಶ್ಚಂದ್ರ ಎನ್. ಆಚಾರ್ಯ, ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಮಧು ಆಚಾರ್ಯ ಮುಲ್ಕಿ, ಬೆಂಗಳೂರಿನ ದಕ್ಷಿಣ ಕನ್ನಡ ವಿಶ್ವಬ್ರಾಹ್ಮಣ ಸಂಘದ ಅಧ್ಯಕ್ಷ ಸೋಮನಾಥ್ ಆಚಾರ್ಯ, ಮಾಜಿ ಅಧ್ಯಕ್ಷ ವಿಠ್ಠಲ್ ಬೆಳ್ಳಂದೂರ್ ಉಪಸ್ಥಿತರಿದ್ದರು. ಬೆಂಗಳೂರು ಗುರುಸೇವಾ ಪರಿಷತ್ ಅಧ್ಯಕ್ಷ ಎಂ.ಬಿ. ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಸೇವಾ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿಳಿಯೂರು ಕೇಶವ ಆಚಾರ್ಯ ವಂದಿಸಿದರು. ಬೆಂಗಳೂರು ದಕ್ಷಿಣ ಕನ್ನಡ ವಿಶ್ವಬ್ರಾಹ್ಮಣ ಸಂಘ ಹಾಗೂ ಯಲಹಂಕ ಲಯನ್ಸ್ ಕ್ಲಬ್‌ನ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ದುರ್ಗಾ ನಮಸ್ಕಾರ ಪೂಜೆ ಜರಗಿತು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.