HomePage_Banner
HomePage_Banner

ರಾಧಾಕೃಷ್ಣ ದಾಸ್‌ರವರಿಗೆ ರಾಜ್ಯಮಟ್ಟದ ಪ್ರಗತಿಪರ ಜೇನುಕೃಷಿಕ ಪ್ರಶಸ್ತಿ


ಉಬರಡ್ಕ ಗ್ರಾಮದ ಜೇನುಕೃಷಿಕ ಕೈಪೆ ಮನೆ ರಾಧಾಕೃಷ್ಣದಾಸ್ ಅವರಿಗೆ ಪ್ರಗತಿಪರ ಜೇನುಕೃಷಿಕ ಎಂಬ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


ಡಿ. 27 ರಿಂದ ಬೆಂಗಳುರಿನಲ್ಲಿ ಆರಂಭಗೊಂಡಿರುವ ರಾಜ್ಯಮಟ್ಟದ ಜೇನುಗಾರಿಕೆ ಕಾರ್ಯಾಗಾರ ಹಾಗೂ ಮಧು ಮಹೋತ್ಸವ 2019  ಕಾರ್ಯಕ್ರಮದಲ್ಲಿ ಪ್ರಗತಿಪರ ಜೇನು ಕೃಷಿಕ ಉಬರಡ್ಕ ಗ್ರಾಮದ ಕೈಪೆ ಮನೆ ರಾಧಾಕೃಷ್ಣದಾಸ್‌ರಿಗೆ ಕರ್ನಾಟಕ ರಾಜ್ಯದ ಪ್ರಗತಿಪರ ಜೇನುಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ. ತೋಟಗಾರಿಕಾ ಮತ್ತು ರೇಷ್ಮೆ ಸಚಿವ ಸೋಮಣ್ಣರವರು ಪ್ರಶಸ್ತಿ ಪ್ರದಾನ ಮಾಡಿದರು.


ಇವರು ಜೇನು ಕೃಷಿ ಕ್ಷೇತ್ರಕ್ಕೆ ನೀಡಿರುವ ವಿಶೇಷ ಕೊಡುಗೆ ಮತ್ತು ಜೇನು ಕೃಷಿ ಅಭಿವೃದ್ಧಿಗೆ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿದೆ.
ರಾಧಾಕೃಷ್ಣ ದಾಸ್‌ರವರು ಈ ಹಿಂದೆಯೂ ಜೇನು ಕೃಷಿಗಾಗಿ ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.