HomePage_Banner
HomePage_Banner

ಕು.ಕೃತಿಕಾ ಮದುವೆಗದ್ದೆ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ತೇರ್ಗಡೆ

2019ನೇ ಸಾಲಿನ ನ್ಯಾಶನಲ್ ಟೆಸ್ಟಿಂಗ್ ಎಜೆನ್ಸಿ ನಡೆಸಿದ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ಕು.ಕೃತಿಕಾ ಮದುವೆಗದ್ದೆ ಅತ್ಯಧಿಕ ಅಂಕ ಗಳಿಸಿ ಜೂನಿಯರ್ ರಿಸರ್ಚ್ ಫೆಲ್ಲೋಶಿಪ್ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್‌ಶಿಪ್‌ಗೆ ಆಯ್ಕೆಯಾಗಿದ್ದಾಳೆ.
ಈಕೆ ಕೇಂದ್ರ ಸರಕಾರದ ವಿದ್ಯಾರ್ಥಿ ವೇತನದೊಂದಿಗೆ ಭಾರತದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಗಣಿತಶಾಸ್ತ್ರ ಶಿಕ್ಷಣ ವಿಷಯದಲ್ಲಿ ಸಂಶೋಧನೆ ನಡೆಸಲು ಆರ್ಹರಾಗಿರುತ್ತಾಳೆ. ಮೈಸೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಅಂತಿಮ ವರ್ಷದ ಎಂ.ಎಡ್. ಪದವೀಧರರಾಗಿರುತ್ತಾರೆ. ಹಾಗೆಯೇ ಎಮ್‌ಎಚ್‌ಆರ್‌ಡಿಯವರು ಜ.೨೦೨೦ನೇ ಸಾಲಿನಲ್ಲಿ ಮೈಸೂರಿನಲ್ಲಿ ನಡೆಸುವ ರಾಷ್ಟ್ರೀಯ ಸೆಮಿನಾರ್‌ಗೆ ಆಯ್ಕೆಯಾಗಿರುತ್ತಾಳೆ. ಇವರು ಶ್ರೀಮತಿ ಹರಿಣಾಕ್ಷಿ ಮತ್ತು ಚಿದಾನಂದ ಮದುವೆಗದ್ದೆ ದಂಪತಿಗಳ ಪುತ್ರಿ. ಹಾಗೂ ಕೊಯಿಂಗಾಜೆ ದಿ.ರಾಮಕೃಷ್ಣ ಗೌಡರ ಮೊಮ್ಮಗಳು. ಹಾಗೂ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ, ಪುತ್ತೂರಿನ ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿನಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.