ಎಲಿಮಲೆಯಿಂದ ಗುತ್ತಿಗಾರಿನವರೆಗೆ ಎರಡನೇ ವರ್ಷದ ಮುಕ್ತ ರಸ್ತೆ ಓಟ

Advt_Headding_Middle
Advt_Headding_Middle
Advt_Headding_Middle

ಸುಳ್ಯ ತಾಲೂಕು ಅತ್ಲೆಟಿಕ್ಸ್ ಅಸೋಸಿಯೇಶನ್ ಇದರ ಆಶ್ರಯದಲ್ಲಿ ೨ನೇ ವರ್ಷದ ಪುರುಷರ ಮತ್ತು ಮಹಿಳೆಯರ ಮುಕ್ತ ರಸ್ತೆ ಓಟ ಸ್ಪರ್ಧೆ ಜ. 12  ರಂದು ನಡೆಯಿತು. ಪುರುಷರ 1೦ ಕಿ.ಮೀ ರಸ್ತೆ ಓಟಕ್ಕೆ ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯಿಂದ ನೆಹರೂ ಸ್ಮಾರಕ ಮಹಾವಿದ್ಯಾಲಯ ಸುಳ್ಯ ಇದರ ದೈಹಿಕ ನಿರ್ದೇಶಕ ರಾಧಾಕೃಷ್ಣ ಮಾಣಿಬೆಟ್ಟು ಧ್ವಜ ಬೀಸಿ ಚಾಲನೆ ಓಟಕ್ಕೆ ಚಾಲನೆ ನೀಡಿದರು.

ಅತಿಥಿಗಳಾಗಿ ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿನ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎ. ಸಿ ವಸಂತ ಉಪಸ್ಥಿತರಿದ್ದರು. ಮಾವಿನ ಕಟ್ಟೆಯಿಂದ ಮಹಿಳೆಯರ 5 ಕಿ.ಮೀ ರಸ್ತೆ ಓಟವನ್ನು ಆರಂಭಿಸಲಾಯಿತು. ರಸ್ತೆ ಓಟದ ಮುಕ್ತಾಯ ಗುತ್ತಿಗಾರು ಪ್ರಾಥಮಿಕ ಶಾಲೆಯಲ್ಲಿದ್ದು, ಆ ಬಳಿಕ ಬಹುಮಾನ ವಿತರಣಾ ಕಾರ್ಯಕ್ರಮ ನಡೆದು ದೈಹಿಕ ಶಿಕ್ಷಣ ಪರಿವೀಕ್ಷಕ ಲಕ್ಷ್ಮೀಶ ರೈ ಬಹುಮಾನ ವಿತರರಿಸಿದರು. ಸುಳ್ಯ ತಾಲೂಕು ಅಥ್ಲೇಟಿಕ್ಸ್ ಅಸೋಸಿಯೇಶನ್ ನ ಅಧ್ಯಕ್ಷ ಮಾಯಿಲಪ್ಪ ಕೊಂಬೆಟ್ಟು ಅಧ್ಯಕ್ಷತೆಯನ್ನು ವಹಿಸಿದ್ದರು . ಕೆಎಸ್‌ಎಸ್ ಕಾಲೇಜು ಸುಬ್ರಹ್ಮಣ್ಯ ಇದರ ನಿವೃತ್ತ ದೈಹಿಕ ನಿರ್ದೇಶಕ ತುಕಾರಾಮ್ ಏನೆಕಲ್, ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್ ಉಪಾಧ್ಯಕ್ಷ ಶರತ್ ಅಡ್ಕಾರು, ಕ್ರೀಡಾ ದರ್ಶಿನಿ ಮಾಸ ಪತ್ರಿಕೆ ಮಂಗಳೂರು ಇದರ ಸಂಪಾದಕ ಸುಬ್ರಹ್ಮಣ್ಯ ಕೆ.ಎಂ, ಕೆವಿಜಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹರಿಪ್ರಸಾದ್ ಅಡ್ಕಾರು, ಜ್ಞಾನದೀಪ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಅನಿಲ್ ಅಂಬೆಕಲ್ಲು, ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ವಿಜೇಶ್ ಹಿರಿಯಡ್ಕ ಉಪಸ್ಥಿತರಿದ್ದರು.

ವೇದಿಕೆಯಲ್ಲಿದ್ದರು. ಅಥ್ಲೆಟಿಕ್ ಅಸೋಸಿಯೇಷನ್ ಸದಸ್ಯ ವೀರನಾಥ ಐವರ್ನಾಡು ಸ್ವಾಗತಿಸಿ , ಸುಬ್ರಹ್ಮಣ್ಯ ಕೆ.ಎಂ ವಂದಿಸಿದರು. ಜ್ಞಾನದೀಪ ವಿದ್ಯಾಸಂಸ್ಥೆಗಳ ಮುಖ್ಯೋಪಾಧ್ಯಾಯ ಗದಾಧರ ಬಾಳುಗೋಡು ಕಾರ್ಯಕ್ರಮ ನಿರೂಪಿಸಿದರು. ರಸ್ತೆ ಓಟದ ಕ್ರೀಡಾಪಟುಗಳಿಗೆ ರಸ್ತೆಯುದ್ದಕ್ಕೂ ನೀರಿನ ವ್ಯವಸ್ಥೆ , ಬಳಲಿದವರಿಗೆ ವಾಹನದ ವ್ಯವಸ್ಥೆ, ರೂಟ್ ಮಾರ್ಗದರ್ಶಕದ ವ್ಯವಸ್ಥೆ ಮಾಡಲಾಗಿತ್ತು.

ರಸ್ತೆ ಓಟ ಫಲಿತಾಂಶ

ಪುರುಷರ ವಿಭಾಗದಲ್ಲಿ ರಘುವರ್ಯ ಮೈಸೂರು , ಬಿ ಎಸ್ ಕರಿಯಾರ್ ಎಸ್ ಡಿ ಎಂ ಉಜಿರೆ, ಪವನ್ ಕುಮಾರ್ ಎಸ್ ಡಿ ಎಂ ಉಜಿರೆ, ರಂಜಿತ್ ಪಿ .ಬಿ ಜಿ ಎಫ್ ಜಿ ಸಿ ಸುಳ್ಯ , ದಶಾಂಕ್ ಎಸ್ ಡಿ ಎಂ ಉಜಿರೆ , ಮಹಿಳೆಯರ ವಿಭಾಗದಲ್ಲಿ ದಿವ್ಯಾ ಎಲಿಮಲೆ, ಶ್ರೇಯ ಚೊಕ್ಕಾಡಿ, ಪ್ರಜನಾ, ಪುನಿತಾ, ಚಿತ್ರಪ್ರಭಾ ಬಹುಮಾನವಾಗಿ ನಗದು ಹಾಗೂ ಫಲಕ ಪಡೆದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.