HomePage_Banner
HomePage_Banner

ಸುಳ್ಯದಲ್ಲಿ ಎನ್.ಎಸ್.ಪೋಟೋಗ್ರಾಫಿ ಶುಭಾರಂಭ

ಸುಳ್ಯದ ದ್ವಾರಕದ ಹೋಟೆಲ್ ಮುಂಭಾಗ ಹೋನೆಸ್ಟ್ ಬಿಲ್ಡಿಂಗ್‌ನಲ್ಲಿ ಸುಮಂತ್ ನಿಡ್ಡಾಜೆ ಮಾಲಕತ್ವದ ಎನ್.ಎಸ್. ಪೋಟೋಗ್ರಾಫಿ ಜ.18ರಂದು ಶುಭಾರಂಭಗೊಂಡಿತು. ಮುಂಜಾನೆ ಗಣಹೋಮ ನಡೆದು, ಬಳಿಕ ಸುಳ್ಯ ಸೌತ್ ಕೆನರಾ ಪೋಟೋಗ್ರಾಫಿಯ ಅಧ್ಯಕ್ಷ ಸುಧಾಕರ ರೈ ಸಂಸ್ಥೆಯನ್ನು ಉದ್ಘಾಟಿಸಿದರು. ಮಾಲಕರ ತಂದೆ ಸುಂದರ ನಿಡ್ಡಾಜೆ ಹಾಗೂ ಕುಟುಂಬದ ಹಿರಿಯರು, ಸೌತ್ ಕೆನರಾ ಪೊಟೋಗ್ರಾಫಿಯ ಕಾರ್ಯದರ್ಶಿ, ಸುಳ್ಯ ಭೂಮಿಕ ಸ್ಟುಡಿಯೋ ಮಾಲಕ ವೇಣುಗೋಪಾಲ, ಬಲೆ ತಿಲಿಪಲೆ ಖ್ಯಾತಿಯ ರಂಜಿತ್ ರೈ ದೀಪ ಬೆಳಗಿಸಿ ಶುಭಹಾರೈಸಿದರು. ಈ ವೇಳೆ ಚಂದು ಸುಳ್ಯ, ಗಗನ್‌ದೀಪ್ ಎಸ್.ಕೆ. ಉಪಸ್ಥಿತರಿದ್ದರು. ಪಾರ್ಚೂನ್ ಟಿ.ವಿ. ಸಂಪಾದಕ ವಿಖ್ಯಾತ್ ಬಾಪಣೆ ಕಾರ್ಯಕ್ರಮ ನಿರೂಪಿಸಿದರು.


ಇಲ್ಲಿ ಮದುವೆ ಪೋಟೋಗ್ರಾಫಿ, ಔಟ್ ಡೋರ್ ಪೋಟೋಗ್ರಾಫಿ, ವಿಡಿಯೋಗ್ರಾಫಿ, ಮಗ್ ಪ್ರಿಂಟ್, ಪೋಟೋ ಅಲ್ಬಮ್, ವಿಡಿಯೋ ಎಡಿಟಿಂಗ್ ಕ್ಲಪ್ತ ದರದಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.