HomePage_Banner
HomePage_Banner

ಸುದ್ದಿಯ ಸೇವೆಯನ್ನು ಶ್ಲಾಘಿಸಿದ ಸಮ್ಮೇಳನಾಧ್ಯಕ್ಷರು

 

ಸುದ್ದಿ ಬಿಡುಗಡೆ ಮಾಧ್ಯಮ ಸಂಸ್ಥೆ ಸುಳ್ಯಕ್ಕೆ ನೀಡಿದ ಸೇವೆಯನ್ನು ಸುಳ್ಯ ತಾಲೂಕು 24 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಕೃ.ಶಾ.ಮರ್ಕಂಜ ಶ್ಲಾಘಿಸಿದ್ದಾರೆ.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಯೊಂದು ಈ ಬಾರಿ ಸುಳ್ಯಕ್ಕೆ ಬಂತು.‌ ಈ ಗರಿಮೆಗೆ ಭಾಜನರಾದವರು ನಮ್ಮವರಾದ ಡಾ| ಯು.ಪಿ. ಶಿವಾನಂದರು. ಬಹುಶ: 8೦ರ ದಶಕದ ಆರಂಭದ ವರ್ಷಗಳಲ್ಲಿ ಶಿವಾನಂದರ ಸಂಪಾದಕತ್ವದ ‘ಸುದ್ದಿಬಿಡುಗಡೆ’ ಎರಡು ಸಣ್ಣ ಪುಟಗಳ ಪತ್ರಿಕೆಯಾಗಿ ಆರಂಭಗೊಂಡು ಗೂಡಂಗಡಿಗಳಲ್ಲಿ ನೇತಾಡತೊಡಗಿದ್ದವು. ಆವಾಗ ಈ ಪತ್ರಿಕೆಯ ಶೀರ್ಷಿಕೆ ನೋಡಿ ಮೂಗು ಮುರಿದವರೇ ಹೆಚ್ಚು! ಅನಂತರ ಅದೇ ಮೂಗಿನ ಮೇಲೆ ಅವರು ತೋರುಬೆರಳಿಡುವಂತೆ ಮಾಡಿದವರೂ ಶಿವಾನಂದರೇ. ಸಣ್ಣ ಪತ್ರಿಕೆಯೊಂದರ ಎಲ್ಲ ಸಾಧ್ಯತೆಗಳನ್ನೂ ಸಾಕಾರಗೊಳಿಸಿ ತ್ರಿವಿಕ್ರಮ ಗಾತ್ರದಲ್ಲಿ ಬೆಳೆದುನಿಂತ ‘ಸುದ್ದಿ ಬಿಡುಗಡೆ’ ಇಂದು ಸುಳ್ಯದ ಜನಜೀವನದ ಒಂದು ಭಾಗವೇ ಆಗಿದೆ. ಹಾಗೆಯೇ ಪುತ್ತೂರು, ಬೆಳ್ತಂಗಡಿಗಳಲ್ಲಿ ಪ್ರತ್ಯೇಕವಾಗಿ ಜನಜನಿತವಾಗಿದೆ. ಅನೇಕ ಉದಯೋನ್ಮುಖರಿಗೆ ವೇದಿಕೆಯಾಗಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಸುದ್ದಿ ಚಾನೆಲ್ ನ ಮೂಲಕ ದೃಶ್ಯಮಾಧ್ಯಮ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದೆ ಎಂದು ಸಮ್ಮೇಳನಾಧ್ಯಕ್ಷರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.