HomePage_Banner
HomePage_Banner

ಜ. 27: ಯೇನೆಕಲ್ಲು ಸಹಕಾರಿ ಸಂಘದ ಚುನಾವಣೆ 25 ಮಂದಿ ಅಂತಿಮ ಕಣದಲ್ಲಿ, ರಮೆಶ್ ನಾಯ್ಕ್ ಅವಿರೋಧ ಆಯ್ಕೆ

ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಆಡಳಿತ ಮಂಡಳಿ ಚುನಾವಣೆಯು ಜ. 27 ರಂದು ನಡೆಯಲಿದ್ದು, ಒಟ್ಟು 13 ಕ್ಷೇತ್ರಗಳಿಗೆ 32 ನಾಮಪತ್ರ ಸಲ್ಲಿಕೆಯಾಗಿತ್ತು. ಪರಿಶಿಷ್ಟ ವರ್ಗ ಮೀಸಲು ಕ್ಷೇತ್ರದಿಂದ ಕೆ.ಎಸ್. ದೇವರಾಜ್ ತಂಡದ ರಮೇಶ್ ನಾಯ್ಕ ಒಬ್ಬರೇ ಅರ್ಹ ಅಭ್ಯರ್ಥಿಯಾಗಿದ್ದುದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ 12 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದ್ದ ಜ. 20 ರಂದು ಕೆ.ಎಸ್. ದೇವರಾಜ್ ರವರ ಸಹಕಾರಿ ಒಕ್ಕೂಟದಿಂದ ಹೆಚ್ಚುವರಿಯಾಗಿ ಸಾಲಗಾರರ ಕ್ಷೇತ್ರದಿಂದ ಸಾಮಾನ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕುಶ ನೆಕ್ರಾಜೆ ಮತ್ತು ಪುಟ್ಟಣ್ಣ ಪರಮಲೆ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಸೀತಾರಾಮ ಪೂಜಾರಿ ಬೈರೋಣಿ ನಾಮಪತ್ರ ಹಿಂದಕ್ಕೆ ಪಡೆದರೆ, ಭವಾನಿಶಂಕರ ಪೂಂಬಾಡಿಯವರ ತಂಡದಿಂದ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಹೆಚ್ಚುವರಿಯಾಗಿ ನಾಮಪತ್ರ ಸಲ್ಲಿಸಿದ್ದ ನಾಗೇಶ್ ನೆಕ್ರಾಜೆ, ಶಿವರಾಮ ನೆಕ್ರಾಜೆ ಮತ್ತು ಗಿರಿಯಪ್ಪ ಗೌಡ ಬಾಲಾಡಿ ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದಾರೆ. ಉಳಿದಂತೆ ಒಟು 12 ಕ್ಷೇತ್ರಗಳಲ್ಲಿ 25 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಹಾಲಿ ಅಧ್ಯಕ್ಷ ಕೆ.ಎಸ್. ದೇವರಾಜ್ ರವರ ನೇತೃತ್ವದ ಸಹಕಾರಿ ಒಕ್ಕೂಟದದಿಂದ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ದೇವರಾಜ್ ಕೆ.ಎಸ್, ಎನ್.ಕೆ. ಮನೋಹರ ನಾಳ,
ದಯಾನಂದ ಕುಕ್ಕಪ್ಪನಮನೆ, ಸುರೇಶ್ ನೆಕ್ರಾಜೆ, ಪೂರ್ಣಚಂದ್ರ ತುಂಬತ್ತಾಜೆ, ನಾಗರಾಜ್ ಪರಮಲೆ, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಲೀಲಾವತಿ ಉಪ್ಪಳಿಕೆ, ಯೋಗೀಶ್ವರಿ ಬಾನಡ್ಕ, ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಭಾಸ್ಕರ ಪೂಜಾರಿ ಉಜಿರ್ ಕೋಡಿ, ಸತೀಶ್ ಆಚಾರ್ಯ ಬೂದಿಪಳ್ಳ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಪೆರ್ನ ಪದ್ನಡ್ಕ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ವೆಂಕಟ್ರಮಣ ಕೇಂಬ್ರೋಳಿ ಅಂತಿಮ ಕಣದಲ್ಲಿದ್ದಾರೆ. ಭವಾನಿಶಂಕರ ಪೂಂಬಾಡಿ, ಗಿರಿಯಪ್ಪ ಗೌಡ ಬಾಲಾಡಿ ನೇತೃತ್ವದ ತಂಡದಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಭವಾನಿಶಂಕರ ಪೂಂಬಾಡಿ, ಪದ್ಮನಾಭ ಗೌಡ ಬಾಲಾಡಿ, ಅನಿತಾ ರೇಗಪ್ಪ ಗೌಡ ಪುಂಡಿಗದ್ದೆ, ಅಣ್ಣೋಜಿ ಗೌಡ ಕಟ್ಟ, ಕಿರಣ್ ಕುಮಾರ್ ಮಾದನಮನೆ, ಭರತ್ ನೆಕ್ರಾಜೆ, ಮಹಿಳಾ ಮೀಸಲು ಕ್ಷೇತ್ರದಿಂದ ವೇದಾವತಿ ಕೆ, ಯಮುನ ಎ.ಎಸ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಗಿರೀಶ್ ಎಂ, ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಕೇಶವ ಆಚಾರ್ಯ ಮತ್ತು ಶ್ರೀನಿವಾಸ ಆಚಾರ್ಯ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ರಾಮಣ್ಣ ಗೌಡ ಬೂದಿಪಳ್ಳ ಅಂತಿಮ ಕಣದಲ್ಲಿದ್ದಾರೆ. ಎರಡೂ ತಂಡಗಳಲ್ಲಿ ಬಿ.ಜೆ.ಪಿ. ಕಾಂಗ್ರೆಸ್ ನ ಕಾರ್ಯಕರ್ತರು ಮಿಶ್ರಣಗೊಂಡಿದ್ದು, ಮತದಾರರು ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.