HomePage_Banner
HomePage_Banner

ಅಯ್ಯನಕಟ್ಟೆ ಜಾತ್ರೋತ್ಸವ: ವಿವಿಧ ಸಂಘಟನೆಗಳಿಂದ ಶ್ರಮದಾನ

ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಜಾತ್ರೆಗೆ ಕ್ಷಣ ಗಣನೆ ಆರಂಭಗೊಂಡಿದೆ. ಜ. 25ರಂದು ಹಸಿರು ಕಾಣಿಕೆ ಸಂಗ್ರಹಿಸಿ ಮೆರವಣಿಗೆಯ ಮೂಲಕ ಮೂರು ಕಲ್ಲಡ್ಕಕ್ಕೆ ಹಸಿರು ಕಾಣಿಕೆ ತಲುಪಲಿದೆ.

ಊರಿನ ಹಲವು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಸಮಿತಿ ಸಂಚಾಲಕರು, ಸದಸ್ಯರು, ಭಕ್ತವೃಂದದವರು ಭಾಗವಹಿಸಲಿದ್ದಾರೆ. ಜ. 25 ರಂದು ಬೆಳಿಗ್ಗೆ ಕ್ಷೇತ್ರಕ್ಕೆ ತಂತ್ರಿಗಳು ಆಗಮಿಸಲಿದ್ದು, ಎಲ್ಲಾ ಸಮಿತಿಗಳ ಸಂಚಾಲಕರು, ಸದಸ್ಯರು, ಮಹಿಳೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ತಂತ್ರಿಗಳ ಸ್ವಾಗತದಲ್ಲಿ ಭಾಗಿಯಾಗುವಂತೆ ಸಮಿತಿಗಳ ಪ್ರಧಾನ ಕಾರ್ಯದರ್ಶಿಯವರಾದ ಪಿ.ಜಿ.ಎಸ್.ಎನ್. ಪ್ರಸಾದ್ ತಿಳಿಸಿರುತ್ತಾರೆ. ಜ. 26ರಿಂದ ಮೊದಲ್ಗೊಂಡು ಜ . 30 ರ ತನಕ ನಿರಂತರ ವಿವಿಧ ಕಾರ್ಯಕ್ರಮಗಳು ಜರಗಲಿದೆ. ಜ. 24 ರಂದು ಸ್ತ್ರೀ ಶಕ್ತಿ ಸಂಘಗಳು ಬಾಳಿಲ, ದೇವತಾರಾಧನಾ ಮಹಿಳಾ ಸಮಿತಿ ಬಾಳಿಲ-ಮುಪ್ಪೇರ್ಯ, ಶ್ರೀಕೃಷ್ಣ ಸೇವಾ ಸಮಿತಿ ಬಾಳಿಲ – ಮುಪ್ಪೇರ್ಯ ತಂಡಗಳಿಂದ ಮತ್ತು ಊರವರಿಂದ ಶ್ರಮದಾನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.