HomePage_Banner
HomePage_Banner

ಫೆ.2: ಬೆಳ್ಳಾರೆಯಲ್ಲಿ ಉಚಿತ ಆಯುರ್ವೇದ ತಪಾಸಣಾ ಶಿಬಿರ

ಹಿತಾಯು ಕ್ಲಿನಿಕ್ ಮತ್ತು ಥೆರಪಿಸೆಂಟರ್ ಬೆಳ್ಳಾರೆ ಮತ್ತು ಬಾಳಿಲ, ಸುದ್ದಿ ಬಿಡುಗಡೆ ಸಮೂಹ ಸಂಸ್ಥೆ, ಜ್ಞಾನದೀಪ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ (ರಿ.)ಬೆಳ್ಳಾರೆ, ರೋಟರಿ ಟೌನ್ ಬೆಳ್ಳಾರೆ, ಸ್ನೇಹಿತರ ಕಲಾ ಸಂಘ (ರಿ) ಬೆಳ್ಳಾರೆ , ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನ, ಜೇಸಿಐ ಮತ್ತು ಯುವ ಜೇಸಿ ವಿಭಾಗ ಬೆಳ್ಳಾರೆ ಇವರ ಜಂಟಿ ಆಶ್ರಯಲ್ಲಿ ಉಚಿತ ಆರ್ಯುವೇದ ತಪಾಸಣಾ ಶಿಬಿರ, ಉಚಿತ ಮೂಳೆ ಸಾಂದ್ರತೆ ಪರೀಕ್ಷೆ ಸಲಹಾ ಶಿಬಿರ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಫೆ.೨ರಂದು ನಡೆಯಲಿದೆ.
ಸುದ್ದಿ ಬಿಡುಗಡೆಯ ಸಮೂಹ ಸಂಸ್ಥೆಯ ಮಾಲಕ ಡಾ.ಯು.ಪಿ.ಶಿವಾನಂದ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯ ಪ್ರಾಂಶುಪಾಲೆ ಶ್ರೀಮತಿ ಹಸೀನಾ ಬಾನು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ಗ್ರಹರಕ್ಷಕ ದಳದ ಕಮಾಂಡೆಂಟ್ ಡಾ.ಮುರಳಿ ಮೋಹನ ಚೂಂತಾರು, ಶ್ರೀ ಸದಾಶಿವ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರೊ.ಸುಬ್ರಹ್ಮಣ್ಯ ಜೋಶಿ ಭಾಗವಹಿಸಲಿದ್ದಾರೆ. ತಪಾಸಣಾ ಶಿಬಿರದಲ್ಲಿ ಸಂಧಿವಾತ, ಗಂಟುನೋವು, ಹಿಮ್ಮಡಿ ನೋವು,ಸೊಂಟ ನೋವು, ಕುತ್ತಿಗೆ ನೋವು, ಭುಜ ನೋವು, ಡಿಸ್ಕ್ ಗೆ ಸಂಬಂಧಿಸಿದ ಖಾಯಿಲೆಗಳು, ನರದ ಸಮಸ್ಯೆಗಳು ಮತ್ತು ವಾತ ಸಂಬಂಧಿತ ಖಾಯಿಲೆಗಳು ತಪಾಸಣೆಗೆ ಒಳಪಡಲಿದೆ ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.