HomePage_Banner
HomePage_Banner

ಫೆ. 5: ಕುಂಟುಪುಣಿ ದರ್ಖಾಸ್ತು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಉದ್ಘಾಟನೆ

 

ಕುಂಟುಪುಣಿ ದರ್ಖಾಸ್ತು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ. ಕೊಡಿಯಾಲ ಇದರ ಸಂಘದ ನೂತನ ಕಟ್ಟಡ ‘ಕ್ಷೀರ ಸಾಗರ’ದ ಉದ್ಘಾಟನೆಯು ಫೆ. 5 ರಂದು ಪೂ. 10.30ಕ್ಕೆ ನಡೆಯಲಿದ್ದು, ದ.ಕ. ಹಾಲು ಒಕ್ಕೂಟ, ಮಂಗಳೂರು ಇದರ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ. ಹಾಲು ಒಕ್ಕೂಟ, ಮಂಗಳೂರು ಇದರ ಉಪಾಧ್ಯಕ್ಷ ಪ್ರಕಾಶ್ ಚಂದ್ರ ಶೆಟ್ಟಿ, ಒಕ್ಕೂಟದ ನಿರ್ದೇಶಕರಾದ  ನಿರಂಜನ್ ಬಾವಂತಬೆಟ್ಟು, ಮಾಜಿ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು, ದ.ಕ. ಹಾಲು ಒಕ್ಕೂಟದ ನಿರ್ದೇಶಕರುಗಳಾದ ಪದ್ಮನಾಭ ಶೆಟ್ಟಿ ಅರ್ಕಜೆ, ಕೆ. ನಾರಾಯಣ ಪ್ರಕಾಶ್, ಬಿ. ಜಯರಾಮ ರೈ, ಶ್ರೀಮತಿ ಸವಿತಾ ಎನ್. ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾದ ಡಾ. ಜಿ.ವಿ. ಹೆಗ್ಡೆ ಭಾಗವಹಿಸಲಿದ್ದಾರೆ. ಗೌರವ ಉಪಸ್ಥಿತರಾಗಿ ದ.ಕ. ಹಾಲು ಒಕ್ಕೂಟದ ಶೇ.ತಾಂ. ವ್ಯವಸ್ಥಾಪಕ ಡಾ. ನಿತ್ಯಾನಂದ ಭಕ್ತ, ಉಪ ವ್ಯವಸ್ಥಾಪಕ ಡಾ. ರಾಮಕೃಷ್ಣ ಭಟ್, ಕೊಡಿಯಾಲ ಹಾಲು ಉ. ಸ.ಸಂಘದ ಮಾಜಿ ಅಧ್ಯಕ್ಷ ಕುರಿಯಾಜೆ ಬಾಲಕೃಷ್ಣ ರೈ, ಕೊಡಿಯಾಲ ಗ್ರಾ.ಪಂ. ಅಧ್ಯಕ್ಷ ಮೋಹನ್ ಸಾಲಿಯಾನ್,  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಸುಳ್ಯ ತಾ. ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ, ಸುಳ್ಯ ತಾಲೂಕು ಮಹಿಳೆಯರ ವಿವಿಧೋದ್ದೇಶ ಸ.ಸಂಘ ಸುಬ್ರಹ್ಮಣ್ಯ ಇದರ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್. ರೈ ಭಾಗವಹಿಸಲಿದ್ದಾರೆ ಎಂದು ಕುಂಟುಪುಣಿ ದರ್ಖಾಸ್ತು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ಭಾರತಿ ಎಂ. ರೈ ತಿಳಿಸಿರುತ್ತಾರೆ. ಸಂಘದ ಉಪಾಧ್ಯಕ್ಷೆ ಶ್ರೀಮತಿ ಹರಿಣಿ ಪಿ. ರೈ, ಕಾರ್ಯದರ್ಶಿ ಶ್ರೀಮತಿ ದೇವಕಿ ಪಿ. ರೈ, ವಿಸ್ತರಣಾಧಿಕಾರಿ ಹರೀಶ್ ಕುಮಾರ್, ನಿರ್ದೇಶಕರುಗಳಾದ ಶ್ರೀಮತಿ ಇಂದಿರಾ ಆರ್ ರೈ,
ಶ್ರೀಮತಿ ಪಾವನ ಭಟ್, ಶ್ರೀಮತಿ ಯಮುನಾಕ್ಷಿ ರೈ,
ಶ್ರೀಮತಿ ಶೋಭಾ ಟಿ, ಶ್ರೀಮತಿ ರತ್ನಾವತಿ ಪಿ.ಎಸ್,
ಶ್ರೀಮತಿ ಸರಸ್ವತಿ ಬಿ, ಶ್ರೀಮತಿ ಶಾಂತಮ್ಮ, ಶ್ರೀಮತಿ ವಸಂತಲಕ್ಷ್ಮೀ ಭಟ್, ಸುಂದರಿ ಬಿ, ಸಹಾಯಕ ವ್ಯವಸ್ಥಾಪಕ ಡಾ. ಕೇಶವ ಸುಳ್ಳಿ, ಹಾಲು ಪರೀಕ್ಷಕಿ ಶ್ರೀಮತಿ ಶೇಷವೇಣಿ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಬಳಿಕ ಭೋಜನದ ವ್ಯವಸ್ಥೆಯಿರುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.