HomePage_Banner
HomePage_Banner

ಫೆ.1-ವಳಲಂಬೆ: ದೇವಸ್ಥಾನದ ಜಾತ್ರೋತ್ಸವ ಮತ್ತು ದೈವಗಳ ನೇಮೋತ್ಸವ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರೋತ್ಸವ ಮತ್ತು ದೈವಗಳ ನೇಮೋತ್ಸವವು ಫೆ.1ರಂದು ನೀಲೇಶ್ವರ ದಾಮೋದರ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಫೆ.1 ರಂದು ಬೆಳಿಗ್ಗೆ ಗಣಪತಿ ಹೋಮ, ಏಕಾದಶ ರುದ್ರಾಭಿಷೇಕ ನಡೆಯಲಿದ್ದು, ಮಧ್ಯಾಹ್ನ ನವಕ ಕಲಾಭಿಷೇಕ, ಮಹಾಪೂಜೆ ಮತ್ತು ಅನ್ನಸಂರ್ತಣೆ ನಡೆಯಲಿದೆ. ಸಂಜೆ 6.೦೦ರಿಂದ ದೈವಗಳ ಭಂಡಾರ ತೆಗೆಯುವುದು ಮತ್ತು ಚೆಂಡೆವಾದನ ನಡೆಯಲಿದೆ. ಸಂಜೆ 7.೦೦ರಿಂದ ಮಹಾಪೂಜೆ, ರಾತ್ರಿ 8.೦೦ಕ್ಕೆ ದೇವರ ಉತ್ಸವ ಬಲಿ ಹೊರಡುವುದು,ವಸಂತ ಕಟ್ಟೆ ಪೂಜೆ, ಬಟ್ಟಲು ಕಾಣಿಕೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಫೆ. 2 ರಂದು ಬೆಳಿಗ್ಗೆ 5.೦೦ಕ್ಕೆ ಉಳ್ಳಾಕ್ಲು- ಉಳ್ಳಾಲ್ತಿನೇಮ, ಕುಮಾರ ದೈವದ ನೇಮ, ಶ್ರೀ ದೇವರಿಗೆ ಪೂಜೆ ರಕ್ತೇಶ್ವರಿ ದೈವದ ನೇಮ, ಧೂಮವತಿ ದೈವದ ನೇಮ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ಹಾಗೂ ದೈವಗಳ ಪ್ರಸಾದ ವಿತರಣೆ,ಅನ್ನಸಂರ್ತಣೆ ನಡೆಯಲಿದೆ.ಸಂಜೆ 5.೦೦ರಿಂದ ಗುಳಿಗ ಕೋಲ, ಪ್ರಸಾದ ವಿತರಣೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.