HomePage_Banner
HomePage_Banner

ಅಜಪಿಲ ಶ್ರೀಮಹಾವಿಷ್ಣುಮೂರ್ತಿ ದೈವಸ್ಥಾನ ಜೀರ್ಣೋದ್ಧಾರ ಕಾರ್ಯದ ಬೈಲುವಾರು ಸಮಿತಿ ರಚನೆ

ಅಜಪಿಲ ಶ್ರೀಮಹಾವಿಷ್ಣುಮೂರ್ತಿ ದೈವಸ್ಥಾನ ಜೀರ್ಣೋದ್ಧಾರ ಕಾರ್ಯದ ಬಗ್ಗೆ ಪುಡ್ಕಜೆ, ದರ್ಖಾಸು ಚೂಂತಾರು ಬೈಲಿನ ಭಕ್ತಾದಿಗಳ ಸಭೆಯು ಜ.18ರಂದು ದರ್ಖಾಸು ಶಾಲಾ ವಠಾರದಲ್ಲಿ ನಡೆಯಿತು. ವೇದಿಕೆಯಲ್ಲಿ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುನೀಲ್ ರೈ ಪುಡ್ಕಜೆ, ಗೌರವಾಧ್ಯಕ್ಷ ಆನಂದ ರೈ ಪುಡ್ಕಜೆ, ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ಉಪಸ್ಥಿತರಿದ್ದರು.
ಪ್ರದೀಪ್ ಕುಮಾರ್ ರೈ ಪನ್ನೆ ಬೈಲುವಾರು ಸಮಿತಿ ರಚನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಬೈಲು ಸಮಿತಿ ರಚನೆಗೊಂಡು ಸಂಚಾಲಕರಾಗಿ ಗಂಗಾಧರ ರೈ ಪುಡ್ಕಜೆ, ಸಹ ಸಂಚಾಲಕರಾಗಿ ಚಂದ್ರಶೇಖರ ದರ್ಖಾಸು ಅವಿರೋಧವಾಗಿ ಆಯ್ಕೆಯಾದರು. ಚಂದ್ರಶೇಖರ್ ಪನ್ನೆ ಸ್ವಾಗತಿಸಿ, ಕೊರಗಪ್ಪ ನಾಯ್ಕ್ ಕುರುಂಬುಡೇಲು ವಂದಿಸಿ, ಮಾಧವ ಪುಡ್ಕಜೆ, ಚೆನ್ನಪ್ಪ ಕಾವಿನಮೂಲೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.