HomePage_Banner
HomePage_Banner
HomePage_Banner
HomePage_Banner

ಫೆ.22 : ಪೇರಾಲು ಕೊಡೆಂಚಿಕಾರ್ ಕೊರಗ ತನಿಯ ಮತ್ತು ಗುಳಿಗೆ ದೈವಗಳ ನೇಮೋತ್ಸವ

ಮಂಡೆಕೋಲು ಗ್ರಾಮದ ಪೇರಾಲು ಕೊಡೆಂಚಿಕಾರ್ ಶ್ರೀ ಕೊರಗ ತನಿಯ ಮತ್ತು ಗುಳಿಗ ದೈವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ದೈವಗಳ ನೇಮೋತ್ಸವವು ಫೆ.22 ರಂದು ನಡೆಯಲಿರುವುದು. ಬೆಳಗ್ಗೆ ಗಣಪತಿ ಹವನವಾಗಿ ನಾಗಪೂಜೆ ನಡೆಯಲಿದೆ. ಬಳಿಕ ಶನಿಪೂಜೆ ಮತ್ತು ಹೂವಿನ ಪೂಜೆಯಾಗಿ ಕಲಶ ಸ್ನಾನ ನಡೆದು ಮಧ್ಯಾಹ್ನ ಮಹಾಪೂಜೆಯಾಗಿ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಯಾಗಲಿರುವುದು. ಸಂಜೆ 3 ಗಂಟೆಯಿಂದ ಶ್ರೀ ಗುಳಿಗ ದೈವದ ಕೋಲ ನಡೆದು ಪ್ರಸಾದ ವಿತರಣೆಯಾಗಲಿದೆ. ಸಂಜೆ ಗಂಟೆ 6.00 ರಿಂದ ಶಾಂತಿನಗರ ದೀಪಾಂಜಲಿ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸೇವೆ ಮತ್ತು ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಸದಸ್ಯರಿಂದ ಕುಣಿತ ಭಜನೆ ನೆರವೇರಲಿರುವುದು. ರಾತ್ರಿ ಗಂಟೆ 9.00 ಕ್ಕೆ ಮಹಾಪೂಜೆಯ ನಂತರ ಸ್ವಾಮಿ ಕೊರಗಜ್ಜ ದೈವದ ಭಂಡಾರ ತೆಗೆದು ಜೋಡು ಕೊರಗಜ್ಜ ದೈವಗಳ ಕೋಲ ನಡೆಯಲಿರುವುದು. ರಾತ್ರಿ ಗಂಟೆ 1.00 ಕ್ಕೆ ಶ್ರೀ ಕೊರಗ ತನಿಯ ದೈವಕ್ಕೆ ಹರಕೆಯ ಹೂಮಾಲೆ ಸಮರ್ಪಿಸುವ ಕಾರ್ಯಕ್ರಮ ನಡೆಯಲಿರುವುದು. ಫೆ.23 ರಂದು ಪ್ರಾತ: ಕಾಲ ಗಂಟೆ 5.00 ರಿಂದ ಪ್ರಸಾದ ವಿತರಣೆಯಾಗಿ ತುಲಾಭಾರ ಸೇವೆಯಾಗಲಿರುವುದು. ಕ್ಷೇತ್ರದಲ್ಲಿ ನೇಮೋತ್ಸವದ ಸಂದರ್ಭದಲ್ಲಿ ತುಲಾಭಾರ ಸೇವೆ, ಶನಿಪೂಜೆ, ಹೂವಿನ ಪೂಜೆ, ಕಲಶ ಸ್ನಾನ, ಅಗೇಲು ಸೇವೆಗಳು ನಡೆಯಲಿರುವುದು ಎಂದು ದೈವಸ್ಥಾನದ ಆಡಳಿತ ಸಮಿತಿಯವರಾದ ಕೃಷ್ಣಪ್ಪ ಕೊಡೆಂಚಿಕಾರ್ ಮತ್ತು ಬಾಬು ಕೊಡೆಂಚಿಕಾರ್ ರವರು ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.