HomePage_Banner
HomePage_Banner
Breaking News

ವಾಲ್ತಾಜೆ : ಕಬಡ್ಡಿ ಪಂದ್ಯಾಟ, ಸನ್ಮಾನ, ಗೌರವಾರ್ಪಣೆ

 

ಯುವಕ ಸಂಘಗಳು ಸಕ್ರೀಯವಾಗಿದ್ದರೆ ಊರಿನ ಅಭಿವೃದ್ಧಿ ಸಾದ್ಯ : ಶಾಸಕ ಅಂಗಾರ

ಯುವ ಸೇವಾ ಮತ್ತು ಕ್ರೀಡಾ ಸಂಘ ವಾಲ್ತಾಜೆ ವತಿಯಿಂದ 9 ನೇ ವರ್ಷಾಚರಣೆ ಪ್ರಯುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಫೆ.8 ರಂದು ನಡೆಯಿತು. ಆರಂಭದಲ್ಲಿ ನೂತನವಾಗಿ ನಿರ್ಮಾಣ ವಾಗಲಿರುವ ವೇದಿಕೆಯ ತಳಹದಿಯನ್ನು ತೆಂಗಿನಕಾಯಿ ಒಡೆಯುವುದರ ಮೂಲಕ ಶಾಸಕ ಎಸ್ ಅಂಗಾರ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ” ಯುವಕ ಸಂಘಗಳು ಸಕ್ರೀಯವಾಗಿದ್ದರೆ ಊರಿನ ಅಭಿವೃದ್ಧಿ ಸಾದ್ಯ ಇಲ್ಲಿನ ವೇದಿಕೆಯ ಕೆಲಸವನ್ನು ಸಂಪೂರ್ಣ ಗೊಳಿಸಲು ಅನುದಾನ ನೀಡುವುದಾಗಿಯೂ, ಮುಳಿಯಡ್ಕ ವಾಲ್ತಾಜೆ ರಸ್ತೆಯ ಕಾಂಕ್ರೀಟೀಕರಣಕ್ಕೆ 10 ಲಕ್ಷ ನೀಡುವುದಾಗಿ ಘೋಷಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಸೇವಾ ಮತ್ತು ಕ್ರೀಡಾ ಸಂಘದ ಅಧ್ಯಕ್ಷ ರಂಜಿತ್ ಕಡ್ಲಾರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದೆವಚಳ್ಳ ಗ್ರಾ.ಪಂ. ಅಧ್ಯಕ್ಷ ದಿವಾಕರ ಮುಂಡೋಡಿ, ವೆಂಕಟ್ ವಳಲಂಬೆ, ಮೋನಪ್ಪ ಮೀನಾಜೆ, ಯುವ ಸಬಲೀಕರಣ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ, ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಮಾಧವ ಬಿ.ಕೆ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕಾರಾಮ್ ಏನೆಕಲ್ಲು, ಉದ್ಯಮಿ ಉಮೇಶ್ ಮುಂಡೋಡಿ, ಪ್ರಸನ್ನ ಮುಂಡೋಡಿ, ಸುಬ್ಬಪ್ಪ ಕಾಯಾರ, ಯುವ ಸೇವಾ ಕ್ರೀಡಾ ಸಂಘದ ಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಕೊಡೋಡಿ ಉಪಸ್ಥಿತಿತರಿದ್ದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ್ ಸದಸ್ಯೆ ಯಶೋದಾ ಬಾಳೆಗುಡ್ಡೆ ಅವರನ್ನು ಗೌರವಿಸಲಾಯಿತು. ಗುತ್ತಿಗಾರು ಪಶುವೈದ್ಯಾಧಿಕಾರಿ ಡಾ. ವೆಂಕಟಾಚಲಪತಿ, ಆರೋಗ್ಯ ಸಹಾಯಕಿ ಜಲಜಾಕ್ಷಿ ಕುಕ್ಕೇಟಿ, ಬಾಲ ಪ್ರತಿಭೆ ಹಂಶಿಕಾ ಮೀನಾಜೆ ಇವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ತಾಲೂಕು ಪಂಚಾಯತ್ ಸದಸ್ಯೆ ಯಶೋದಾ ಬಾಳೆಗುಡ್ಡೆ ಅವರು ಅನುದಾನ ಒದಗಿಸಿ ನಿರ್ಮಾಣವಾದ ವೇದಿಕೆಯ ತಳಮಹಡಿ ಕಾಮಗಾರಿ ಪೂರ್ತಿಗೊಳಿಸಿದ್ದು ಅದನ್ನು ಶಾಸಕ ಎಸ್ ಅಂಗಾರ ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ಕಬಡ್ಡಿ ಪಂದ್ಯಾಟದ ಉದ್ಘಾಟನೆಯನ್ನು ಮೋನಪ್ಪ ಕಡ್ಲಾರ್ ನೆರವೇಸಿದರು. ರುತೇಶ್ ಬಲ್ಕಜೆ ಸ್ವಾಗತಿಸಿ, ಕೃಷ್ಣಕುಮಾರ್ ಪಿಲಿಂಜ ಪ್ರಸ್ತಾವಿಕ ಮಾತುಗಳನ್ನು ಆಡಿದರು. ಅಶ್ವತ್ಥ್ ಕೊರತ್ಯಡ್ಕ ವಂದಿಸಿದರು ಸುಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ:
ಪ್ರಥಮ ಪಂಚಶ್ರೀ ಪಂಜ ಪಡೆದರೆ, ಆದರ್ಶ ಹೊಸಮಠ ತಂಡ ದ್ವಿತೀಯ ಸ್ಥಾನ ಪಡೆಯಿತು. ತೃತೀಯ ಸ್ಥಾನವನ್ನು
ವೀರಮಾರುತಿ ಗುತ್ತಿಗಾರು, ಎಂ.ಎಂ ಬ್ಲೂ ಬಾಯ್ಸ್ ನಾಲ್ಕನೇ ಸ್ಥಾನ ಪಡೆದರು. ಉತ್ತಮ ದಾಳಿಗಾರನಾಗಿ ಅಜಿತ್ ಹೊಸಮಠ, ಹಿಡಿತಗಾರನಾಗಿ ಗೌತಮ್ ಪಂಚಶ್ರೀ, ಸರ್ವಾಂಗಿಣ ಆಟಗಾರರಾಗಿ ನವೀನ್ ಹೊಸಮಠ ಬಹುಮಾನ ಪಡೆದರು.

ಫೋಟೊ : ಪ್ರಕೃತಿ ಸ್ಟುಡಿಯೋ ಗುತ್ತಿಗಾರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.