HomePage_Banner
HomePage_Banner
Breaking News

ಜಾಲ್ಸೂರು : ಪಯಸ್ವಿನಿ ಪ್ರೌಢಶಾಲಾ ಪಯಸ್ವಿನಿ ರಂಗಮಂದಿರ ಉದ್ಘಾಟನೆ

ಜಾಲ್ಸೂರಿನ ಪಯಸ್ವಿನಿ ಅನುದಾನಿತ ಪ್ರೌಢಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪಯಸ್ವಿನಿ ರಂಗಮಂದಿರವು ಫೆ.14ರಂದು ಉದ್ಘಾಟನೆಗೊಂಡಿತು.


ಸಂಸದ ನಳಿನ್ ಕುಮಾರ್ ಕಟೀಲ್ ಅವರ ಸಂಸದರ ವಿವೇಚನಾ ನಿಧಿಯಿಂದ ನೂತನವಾಗಿ ನಿರ್ಮಾಣಗೊಂಡ ರಂಗಮಂದಿರ ಕಟ್ಟಡವನ್ನು ಶಾಸಕ ಎಸ್. ಅಂಗಾರ ಅವರು ಉದ್ಘಾಟಿಸಿ, ಶುಭ ಹಾರಿಸಿದರು. ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಾಲ್ಸೂರು ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎಸ್.ನಾಯಕ್, ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ, ಪ್ರೌಢಶಾಲಾ ಸಂಚಾಲಕ ಜಾಕೆ ಸದಾನಂದ, ಉಪಾಧ್ಯಕ್ಷ ಕತ್ತರ್ ಇಬ್ರಾಹಿಂ, ತಾ.ಪಂ. ಸದಸ್ಯ ತೀರ್ಥರಾಮ ಜಾಲ್ಸೂರು, ಗ್ರಾ.ಪಂ. ಸದಸ್ಯರುಗಳಾದ ಜನಾರ್ದನ ಆಚಾರ್ಯ, ಶ್ರೀಮತಿ ರುಕ್ಮಿಣಿ ನಾರಾಯಣ ಗೌಡ ಕದಿಕಡ್ಕ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕುಸುಮಾವತಿ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶ್ರೀಮತಿ ವೇದಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಡಳಿತ ಮಂಡಳಿ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ ಸ್ವಾಗತಿಸಿ, ಪ್ರೌಢಶಾಲಾ ಆಡಳಿತ ಮಂಡಳಿ ನಿರ್ದೇಶಕ ಜಯರಾಮ ರೈ ಜಾಲ್ಸೂರು ಹಾಗೂ ಆಡಳಿತ ಮಂಡಳಿ ಜತೆ ಕಾರ್ಯದರ್ಶಿ ಶ್ಯಾಮ್ ಕುಮಾರ್ ಮರಸಂಕ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಂಚಾಲಕ ಜಾಕೆ ಸದಾನಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶಾಲಾ ವರದಿ ವಾಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.