HomePage_Banner
HomePage_Banner
HomePage_Banner
HomePage_Banner

ಮಾ.4 ರಿಂದ 6: ಉಬರಡ್ಕ ಶ್ರೀ ನರಸಿಂಹ‌ ಶಾಸ್ತಾವು ದೇವಾಲಯ ಜಾತ್ರೋತ್ಸವ

 

ಉಬರಡ್ಕ ಮಿತ್ತೂರಿನ ಶ್ರೀ ನರಸಿಂಹ ಶಾಸ್ತಾವು ದೇವಾಲಯದಲ್ಲಿ ವರ್ಷಾವಧಿ ಜಾತ್ರೋತ್ಸವವು ಮಾ.4 ರಂದು ಆರಂಭಗೊಂಡು ಮಾ.6 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು
ಫೆ..26 ರಂದು ಬೆಳಿಗ್ಗೆ ಗೊನೆಮುಹೂರ್ತ ನಡೆಯಲಿದೆ.

ಮಾ.4 ರಂದು ಬೆಳಿಗ್ಗೆ ತೋರಣಮುಹೂರ್ತ,ಉಗ್ರಾಣ ಪೂಜೆ,ಹಸಿರುವಾಣಿ ಸಮರ್ಪಣೆ ನಂತರ ಶ್ರೀ ಬೆಳರಂಪಾಡಿ ವನಶಾಸ್ತಾವು ಕ್ಷೇತ್ರದಲ್ಲಿ ಸಾನಿಧ್ಯ ಕಲಶ ಮತ್ತು ಪಂಚಗವ್ಯ,ವಿಶೇಷ ಪೂಜೆ,ಶ್ರೀ ಶಾಸ್ತಾವು ಕ್ಷೇತ್ರದ ನಾಗನಕಟ್ಟೆ ಮತ್ತು ಬೆಟ್ಟತೋಟದ ಚಿತ್ರಕೂಟದಲ್ಲಿ ಸಾನಿಧ್ಯ ಕಲಶ,ಪಂಚಗವ್ಯ ಮತ್ತು ತಂಬಿಲ ಸೇವೆ ನಡೆಯಲಿದೆ.

ಸಂಜೆ 6.00 ರಿಂದ ಊರಿನ ಅಂಗನವಾಡಿ ಮತ್ತು ಸರಕಾರಿ ಶಾಲಾಮಕ್ಕಳು ಹಾಗೂ ಗ್ರಾಮದ ಸಂಘಸಂಸ್ಥೆಗಳ ಸದಸ್ಯರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ.

ಮಾ.5 ರಂದು ಮಧ್ಯಾಹ್ನ ಮಹಾಪೂಜೆ,ಅನ್ನಂತರ್ಪಣೆ ನಡೆಯಲಿದೆ.ಸಂಜೆ ದೀಪಾರಾಧನೆ,ಸಾಮೂಹಿಕ ಪ್ರಾರ್ಥನೆ,ವಿವಿಧ ವೈಧಿಕ ಕಾರ್ಯಕ್ರಮಗಳು,ಶ್ರೀ ಶಿವ ಸಾನಿಧ್ಯ ಮತ್ತು ಶ್ರೀ ನರಸಿಂಹ ಸಾನಿಧ್ಯ ಕಟ್ಟೆಗಳಲ್ಲಿ ಮಂಡಲ ಬರೆದು ಶಿವ ಪೂಜೆ ಮತ್ತು ನರಸಿಂಹ ದೇವರ ಪೂಜೆ,ಶ್ರೀ ದೇವಾಲಯದಲ್ಲಿ ರಾತ್ರಿ ಪೂಜೆ ನಡೆಯಲಿದೆ.
ರಾತ್ರಿ ಗಂಟೆ 8 ಕ್ಕೆ ಸಭಾ ಕಾರ್ಯಕ್ರಮ ಮತ್ತು ಧಾರ್ಮಿಕ ಉಪನ್ಯಾಸ ನಡೆಯಲಿದೆ.
ರಾತ್ರಿ ಗಂಟೆ 9.00 ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

ಮಾ.6 ರಂದು ಬೆಳಿಗ್ಗೆ ಶ್ರೀ ಗಣಪತಿ ಹವನ,ಸಾನಿಧ್ಯ ಕಲಶ,ಸಾನಿಧ್ಯ ಕಲಶಾಭಿಷೇಕ,ಮಹಾಪೂಜೆ,ದೇವರ ಶ್ರೀ ಭೂತಬಲಿ,ದರ್ಶನ ಬಲಿ,ಬಟ್ಟಲು ಕಾಣಿಕೆ,ರಾಜಾಂಗಣ ಪ್ರಸಾದ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.
ರಾತ್ರಿ ಅಲಂಕಾರ ಪೂಜೆ,ರಂಗಪೂಜೆ,ಶ್ರೀ ರಕ್ತೇಶ್ವರಿ ದೈವದ ಸಾನಿಧ್ಯದಲ್ಲಿ ದೇವಕ್ರಿಯೆಯಲ್ಲಿ ಕೋಲ ನಡಾವಳಿ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.