HomePage_Banner
HomePage_Banner
HomePage_Banner
HomePage_Banner

ಫೆ. 25 ರಿಂದ ಫೆ. 29: ಮಡ್ತಿಲ, ಮರುವಂಜದಲ್ಲಿ ಬ್ರಹ್ಮ ಕಲಶ, ನೇಮೋತ್ಸವ

ಮುಪ್ಪೇರ್ಯ ಗ್ರಾಮದ ಮಡ್ತಿಲ, ಮರುವಂಜ ಶ್ರೀ ನಾಗಸಾನಿದ್ಯ, ರುದ್ರಚಾಮುಂಡಿ, ಶಿರಾಡಿ ಮತ್ತು ಪರಿವಾರ ದೈವಗಳ ನವೀಕರಣ ಪುನಃಪ್ರತಿಷ್ಠಾ ಬ್ರಹ್ಮ ಕಲಶವು ಫೆ. 25, 26 ಹಾಗೂ ಶ್ರೀ ದೈವಗಳ ನೇಮ ನಡಾವಳಿಯು ಫೆ. 28 ಮತ್ತು 29 ರಂದು ನಡೆಯಲಿದೆ.
ಫೆ. 25 ರಂದು ಸಂಜೆ 5.00 ಗಂಟೆಯಿಂದ ತಂತ್ರಿಗಳ ಆಗಮನದ ಬಳಿಕ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಫೆ. 26 ರಂದು ಬೆಳಿಗ್ಗೆ 6.00 ಗಂಟೆಯಿಂದ ಗಣಪತಿ ಹೋಮ, ಪೂ. 11.42ರ ವೃಷಭ ಲಗ್ನದಲ್ಲಿ ಶ್ರಿ ನಾಗದೇವರ ಮತ್ತು ದೈವಗಳ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಫೆ. 28 ರಂದು ಸಂಜೆ 6.00 ಗಂಟೆಗೆ ದೈವಗಳ ಭಂಡಾರ ತೆಗೆದು ಅನ್ನಸಂತರ್ಪಣೆಯ ಬಳಿಕ ದೈವಗಳ ನೇಮೋತ್ಸವ ನಡೆಯಲಿದೆ. ಫೆ. 29ರಂದು ಬೆಳಿಗ್ಗೆ 8.00 ಗಂಟೆಯಿಂದ ರುದ್ರಚಾಮುಂಡಿ ಮತ್ತು ಶಿರಾಡಿ ದೈವಗಳ ನೇಮೋತ್ಸವ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಫೆ. 25 ರಂದು ರಾತ್ರಿ 10.30 ರಿಂದ 2.00ರ ತನಕ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಲಕ್ಷ್ಮಣ ಆಚಾರ್ಯ ಎಡಮಂಗಲರವರ ಸಂಯೋಜನೆಯಲ್ಲಿ ಶ್ರೀದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ, ಫೆ. 26 ರಂದು ಬೆಳಿಗ್ಗೆ 9.00ರಿಂದ ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರ್ಯ ಇವರಿಂದ ಚೆಂಡೆವಾದನ, ಫೆ. 28ರಂದು ಸಂಜೆ 7.00 ಗಂಟೆಯಿಂದ ಶ್ರೀ ಧರ್ಮಶಾಸ್ತಾವು ಭಜನಾ ಮಂದಿರ ಪಿಲಿಕಜೆಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಮಡ್ತಿಲ, ಮರುವಂಜ ಮನೆಯವರಾದ ಬಾಲಕೃಷ್ಣ ಗೌಡ ಮಡ್ತಿಲ, ಪ್ರಸನ್ನ ಮಡ್ತಿಲ ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.