HomePage_Banner
HomePage_Banner
HomePage_Banner
HomePage_Banner

ಕಂಟ್ರಾಕ್ಟರ್ ಗೋಪಾಲ್ ಕಚೇರಿಗೆ ಐ.ಟಿ. ಧಾಳಿ

 

ಸುಳ್ಯದ ಪ್ರಮುಖ ಕಟ್ಟಡ ನಿರ್ಮಾಣ ಸಂಸ್ಥೆಯಾದ ಭಗವಾನ್ ಕನ್ ಸ್ಟ್ರಕ್ಷನ್ಸ್ ಕಚೇರಿಗೆ ಆದಾಯ ತೆರಿಗೆ ಅಧಿಕಾರಿಗಳು ಧಾಳಿ ನಡೆಸಿದ್ದು ಲೆಕ್ಕಪತ್ರಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಸುಳ್ಯ ತಾಲೂಕು ಪಂಚಾಯತ್ ಕಚೇರಿ ಎದುರುಗಡೆ ಇರುವ ಕಂಟ್ರಾಕ್ಟರ್ ಗೋಪಾಲಕೃಷ್ಣ ಕರೋಡಿಯವರ ಮಾಲಕತ್ವದ ಕಟ್ಟಡದಲ್ಲಿರುವ ಭಗವಾನ್ ಕನ್ ಸ್ಟ್ರಕ್ಷನ್ ಕಚೇರಿ ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ತೆರೆಯುವ ವೇಳೆಗೆ ನಾಲ್ವರು ಐ.ಟಿ. ಅಧಿಕಾರಿಗಳು ಬಂದು ಕಚೇರಿಯ ಲೆಕ್ಕಪತ್ರಗಳನ್ನು ವಶಕ್ಕೆ ಪಡೆದು ತಪಾಸಣೆ ಆರಂಭಿಸಿದರೆಂದು ತಿಳಿದು ಬಂದಿದೆ.
ಅಧಿಕಾರಿಗಳು ಗೋಪಾಲರನ್ನು ಸಂಜೆ ವರೆಗೂ ಕಚೇರಿಯಿಂದ ಹೊರಗೆ ಬರಲು ಬಿಟ್ಟಿಲ್ಲವೆಂದೂ, ಮಧ್ಯಾಹ್ನ ಊಟಕ್ಕೆ ಅವರನ್ನು ತಮ್ಮ ಜತೆಗೇ ಕರೆದೊಯ್ದರೆಂದೂ ಸ್ಥಳೀಯರು ತಿಳಿಸಿದ್ದಾರೆ.
ಐ.ಟಿ.ಧಾಳಿಯ ವಿಷಯ ತಿಳಿದು ಸ್ಥಳಕ್ಕೆ ‘ಸುದ್ದಿ ‘ ಹೋಗಿ ಐ.ಟಿ. ಅಧಿಕಾರಿಗಳೊಂದಿಗೆ ವಿಚಾರಿಸಿದಾಗ ಯಾವುದೇ ಧಾಳಿ ನಡೆಸಿಲ್ಲ. ಅಕೌಂಟ್ ವೆರಿಫಿಕೇಶನ್ ಮಾಡುತ್ತಿದ್ದೇವೆ ಅಷ್ಟೆ ಎಂದರು. ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದರು.
ಬೆಳಿಗ್ಗೆ 9 ಗಂಟೆಗೆ ಆಗಮಿಸಿದ ಅಧಿಕಾರಿಗಳು ರಾತ್ರಿ 8 ಗಂಟೆಯಾದರೂ ಅಕೌಂಟ್ ವೆರಿಫಿಕೇಶನ್ ಮಾಡುತ್ತಲೇ ಇದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.