ಪಂಜದಲ್ಲಿ ಮುಕ್ತ ಡಬಲ್ಸ್ ಶೆಟಲ್ ಬ್ಯಾಡ್‌ಮಿಂಟನ್ ಪಂದ್ಯಾಟ

Advt_Headding_Middle
Advt_Headding_Middle

ಆರೋಗ್ಯಕರ ಜೀವನಕ್ಕೆ ಕ್ರೀಡೆ, ವ್ಯಾಯಾಮಗಳ ಮೈಗೂಡಿಸಿ – ಬಾಲಕೃಷ್ಣ ಗೌಡ ಕುದ್ವ

“ದೇಹದ ಆಹಾರ, ರಕ್ಷಣೆ, ಆರೋಗ್ಯಕ್ಕಾಗಿ ಕ್ರೀಡೆಗಳು ಅಗತ್ಯ. ಮನುಷ್ಯನ ಒತ್ತಡದ ಕೆಲಸಗಳಿಂದ ಆರೋಗ್ಯ ಕೆಡುತ್ತದೆ. ಅದಕ್ಕಾಗಿ ಆಹಾರ ಪದ್ಧತಿ ಕೂಡ ಸರಿಯಾಗಿರ ಬೇಕು. ಪ್ರತಿಯೊಬ್ಬರು ಕ್ರೀಡೆ, ವ್ಯಾಯಾಮಗಳ ಮೈಗೂಡಿಸಿ ಕೊಂಡರೆ ಆರೋಗ್ಯಕರ ಜೀವನ ಸಾಗುವುದು” ಎಂದು ಹಿರಿಯ ಕ್ರೀಡಾಪಟು ಬಾಲಕೃಷ್ಣ ಗೌಡ ಕುದ್ವ ಹೇಳಿದರು. ಅವರು ಫೆ.21.ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ ಸಿಬ್ಬಂದಿ ವರ್ಗದವರ ಆಶ್ರಯದಲ್ಲಿ ಉತ್ಕರ್ಷ ಸಹಕಾರ ಸೌಧದ ವಠಾರದಲ್ಲಿ ನಡೆದ 3 ನೇ ವರ್ಷದ ಮುಕ್ತ ಹೊನಲು ಬೆಳಕಿನ ಕಿರಿಯ ಮತ್ತು ಸಾರ್ವಜನಿಕ ಡಬಲ್ಸ್ ಶೆಟಲ್ ಬ್ಯಾಡ್‌ಮಿಂಟನ್ ಪಂದ್ಯಾಟ ‘ಉತ್ಕರ್ಷ ಸಹಕಾರ ಟ್ರೋಪಿ’ ಉದ್ಘಾಟಿಸಿ ಮಾತನಾಡಿದರು. ಪಂಜ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಪಂಜ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ, ನಿಕಟಪೂರ್ವಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ನ್ಯಾಯವಾದಿ ಮತ್ತು ನೋಟರಿ ವಕೀಲ ಪುರುಷೊತ್ತಮ ಮಲ್ಕಜೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮಾಡಬಾಗಿಲು ಕಂಬಳ ಆನಂದ ಗೌಡ ಟ್ರಸ್ಟ್ ಅಧ್ಯಕ್ಷ ಆನಂದ ಗೌಡ ಕಂಬಳ, ಎಸ್.ಎಸ್ .ಎಲ್.ಸಿ ಯಲ್ಲಿ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ ಕೆ.ಆರ್.ಕೃಪಾ ಅಮ್ಮಣ್ಣಾಯ ಕಣ್ಕಲ್ ಕೇನ್ಯ ರವನ್ನು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ ಸನ್ಮಾನಿಸಿದರು. ಇದೇ ವೇಳೆ ಕೃಪಾ ಅಮ್ಮಣ್ಣಾಯರವರ ತಂದೆ ರವಿ ಅಮ್ಮಣ್ಣಾಯ,ತಾಯಿ ಗೀತಾ ಉಪಸ್ಥಿತರಿದ್ದರು. ಕ್ರೀಡಾಂಗಣವನ್ನು ರವಿ ಕಕ್ಕೆಪದವು ತೆಂಗಿನ ಕಾಯಿ ಒಡೆದು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕವಿತಾ ಕೃಷ್ಣನಗರ ಮತ್ತು ಪಾರ್ವತಿ ಕೃಷ್ಣನಗರ ಪ್ರಾರ್ಥಿಸಿದರು. ನೇಮಿರಾಜ ಪಲ್ಲೋಡಿ ಸ್ವಾಗತಿಸಿದರು. ಲೋಹಿತ್ ಎಣ್ಣೆಮಜಲು, ವೀಣಾ ಬೊಳ್ಮಲೆ ಸನ್ಮಾನಿತರ ಪರಿಚಯಿಸಿದರು. ಚಂದ್ರಶೇಖರ ಇಟ್ಯಡ್ಕ ನಿರೂಪಿಸಿದರು.ಸತ್ಯದೀಪ್ ಬಹುಮಾನ ವಿಜೇತರ ಪಟ್ಟಿ ಓದಿದರು. ಪೂವಪ್ಪ ಚಿದ್ಗಲ್ಲು ಸಹಕರಿಸಿದರು. ಸುದೀಪ್ ರೈ ವಂದಿಸಿದರು.

ಫಲಿತಾಂಶ :

ಪಂದ್ಯಾಟವು ‘ಜಯ’ ಮತ್ತು ‘ರಾಜ’ ಹೆಸರಿನ ಎರಡು ಅಂಕಣದಲ್ಲಿ ಜರುಗಿತು. ಕಿರಿಯರ ವಿಭಾಗದಲ್ಲಿ 15 ಮತ್ತು ಸಾರ್ವಜನಿಕ ವಿಭಾಗದಲ್ಲಿ 26 ತಂಡ ಭಾಗವಹಿಸಿದ್ದವು. ಸಾರ್ವಜನಿಕ ವಿಭಾಗ ಪ್ರಥಮ ಸ್ಥಾನವನ್ನು ಸುಬ್ರಹ್ಮಣ್ಯ ಕುಮಾರ್ ಸ್ವಾಮಿ ಸ್ಕೂಲ್ ನ ವರಣ್ ಪಿ.ಯಚ್ ಮತ್ತು ಮಹೇಶ ಎಂ., ದ್ವಿತೀಯ ಸ್ಥಾನವನ್ನು ನೂಜಿ ತೆಂಕಿಲ ಎ ತಂಡದ ಜೋಯಿಸನ್ ಪುತ್ತೂರು ಮತ್ತು ಲೋಕೇಶ್ ಪುತ್ತೂರು, ತೃತೀಯ ಸ್ಥಾನವನ್ನು ಕೆ ಬಿ ಎ – ಬಿ ತಂಡದ ಪ್ರಾರ್ಥನ್ ಎಸ್.ಜಿ ಮತ್ತು ಕಾರ್ತಿಕ್ ಯು.ಆರ್, ಚತುರ್ಥ ಸ್ಥಾನವನ್ನು ಪಿ ಎ ಸಿ ಎಸ್ ತಂಡದ ಜಗದೀಶ್ ಬಿ ಮತ್ತು ಭರತ್ ಪಡೆದಿರುತ್ತಾರೆ. ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕೆ ಬಿ ಎ- ಬಿ ತಂಡದ ಪ್ರಾರ್ಥನ್ ಎಸ್.ಜಿ ಮತ್ತು ಕಾರ್ತಿಕ್ ಯು ಆರ್, ದ್ವಿತೀಯ ಸ್ಥಾನವನ್ನು ಸುಳ್ಯ ಸೈಂಟ್ ಜೋಸೆಫ್ ಶಾಲೆಯ ಕೌಶಿಕ್ ಪಿ ಕೆ ಮತ್ತು ತುಷಾರ್ ಕೆ ವಿ, ತೃತೀಯ ಸ್ಥಾನವನ್ನು ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯದ ಮಂಜುನಾಥ ಮತ್ತು ಕೌಶಿಕ್ ಯು, ಚತುರ್ಥ ಸ್ಥಾನವನ್ನು ಸುಳ್ಯದ ಕೃಷ್ಣ ಪ್ರದೀಪ್ ಡಿ ಎಸ್ ಮತ್ತು ಚಿರಾಗ್ ಎಮ್ ಎನ್ ಪಡೆದಿರುತ್ತಾರೆ. ಸಂಘದ ಆಡಳಿತ ಮಂಡಳಿ,ಸಿಬ್ಬಂದಿಗಳಿಗೆ ಲಕ್ಕಿ ಗೇಮ್ ನಡೆಯಿತು.ಬಹುಮಾನ ವಿತರಣೆ ಸಮಾರಂಭದಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಅಧ್ಯಕ್ಷತೆ ವಹಿಸಿದ್ದರು.ಸಂಘದ ಉಪಾಧ್ಯಕ್ಷ ಲಿಗೋಧರ ಆಚಾರ್ಯ, ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ಸೋಮಶೇಖರ ನೇರಳ, ಮಹೇಶ್ ಕೋಟೆ ,ಹೊನ್ನಪ್ಪ ಗೌಡ ಕಮಿಲ,ಸಂಘದ ನಿರ್ದೇಶಕರಾದ ಗಣೇಶ್ ಪೈ, ಚಿನ್ನಪ್ಪ ಗೌಡ ಚೊಟ್ಟೆಮಜಲು, ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ನಾಗಮಣಿ ಕೆದಿಲ, ದೀಪಕ್ ಡಿಸೋಜ, ಉಮೇಶ ಪಂಜದಬೈಲು, ಸಂಘದ ಎಲ್ಲಾ ಸಿಬ್ಬಂದಿ ವರ್ಗದವರು, ಮೊದಲಾದವರು ಉಪಸ್ಥಿತರಿದ್ದರು.

“ಪಂಜ ಕೃಷಿ ಪತ್ತಿನ ಸಹಕಾರಿ ಸಂಘ ಅತ್ಯಂತ ಉತ್ತಮವಾಗಿ ಬೆಳೆದಿದೆ.ಇದರ ಮಹಾಸಭೆ ಸೇರುವ ಜನ ದಾಖಲೆಯಾಗಿದೆ.ಸಂಘದ ಸಿಬ್ಬಂದಿಗಳು ಆಯೋಜಿಸಿದ ಕ್ರೀಡಾ ಕೂಟ ಎಲ್ಲ ಸಂಘಗಳಿಗೂ ಮಾದರಿ”

– ಆನಂದ ಗೌಡ ಕಂಬಳ

“ಸಹಕಾರಿ ಸಂಘಗಳಲ್ಲಿ ಒತ್ತಡ ಕೆಲಸಗಳಿದೆ. ಆ ಮಧ್ಯೆ ಪಂಜ ಸಂಘವು ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಿದೆ”

– ಪುರುಷೋತ್ತಮ ಮಲ್ಕಜೆ

“ಕ್ರೀಡೆಯ ಮೂಲಕ ಬೇರೆ ಬೇರೆ ಕಡೆಗಳಿಂದ ಜನರನ್ನು ಒಗ್ಗೂಡಿಸುವಿಕೆ ಮತ್ತು ಉತ್ತಮ ಬಾಂಧವ್ಯ ಬೆಳೆಸುವ ಕೆಲಸ ಇಲ್ಲಿ ಆಗಿದೆ”

– ಡಾ.ದೇವಿಪ್ರಸಾದ್ ಕಾನತ್ತೂರ್

“ಕಠಿಣ ಪರಿಶ್ರಮ ಇದ್ದರೆ ಯಶಸ್ಸು. ಅಧಿಕಾg ಸಿಕ್ಕರೆ ಸೇವೆ, ಸಂಪತ್ತು ಬರುವುದು ದಾನ ಮಾಡಲು”

ಸುಬ್ರಹ್ಮಣ್ಯ ಕುಳ

“ಕ್ರೀಡಾ ಕೂಟದ ಮೂಲಕ ಅನೇಕ ಕ್ರೀಡಾ ಪಟುಗಳು ನಿರ್ಮಾಣ.ಉತ್ತಮ ಆರೋಗ್ಯಕರ ಜೀವನ”

– ಚಂದ್ರಶೇಖರ ಶಾಸ್ತ್ರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.