ಸುಳ್ಯ ನಗರ ಗೌಡ ಮಹಿಳಾ ಘಟಕದಿಂದ ವಿಶ್ವ ಮಹಿಳಾ ದಿನಾಚರಣೆ

Advt_Headding_Middle
Advt_Headding_Middle


ಸುಳ್ಯ ನಗರ ಗೌಡ ಮಹಿಳಾ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವು ಮಾರ್ಚ್ 8 ರಂದು ಪವಿತ್ರ ಅಶ್ವಥ್ ಕುರುಂಜಿ ಅವರ ಸ್ವಗೃಹದಲ್ಲಿ ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ನಗರ ಗೌಡ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಲತಾಪ್ರಸಾದ್ ಕುದ್ಪಾಜೆ ವಹಿಸಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಯಶೋದಾ ರಾಘವ ಬಲಿಕಳ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಾವರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಾಯೀಗೀತ ಜ್ಞಾನೇಶ್ ರವರು ಮಹಿಳೆಯರ ಏಳಿಗೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಸದಿಂದ ರಸ ಕಲಾಕೃತಿಯ ಪ್ರತಿಭೆಯಾದ ಮೀರಾಪ್ರೇಮನಾಥ್ ರವರಿಗೆ ಹಾಗು ಹಲವಾರು ಸಂಘಟನೆಗಳನ್ನು ಮಾಡಿ ಭಜನಾ ಮಂಡಳಿಗಳನ್ನು ಮುನ್ನಡಿಸುತ್ತಿರುವ ಹರ್ಷಕರ್ಣಾಕರ ಸೇರ್ಕಜೆ ಯವರಿಗೆ ಮತ್ತು ನಗರ ಪಂಚಾಯತ್ ಸದಸ್ಯೆಯಾಗಿ ಆಯ್ಕೆಗೊಂಡ ನಗರಮಹಿಳಾ ಘಟಕದ ಸದಸ್ಯೆರಾದ ಶ್ರೀಮತಿ ಸರೋಜಿನಿ ಪೆಲತ್ತಡ್ಕ ಹಾಗು ಶ್ರೀಮತಿ ಶೀಲಾ ಅರುಣಕುಮಾರ್ ಕುರುಂಜಿ ಇವರನ್ನು ಅಭಿನಂದಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕು ಗೌಡ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾರಾಧಾಕೃಷ್ಣ ಮಾಣಿಬೆಟ್ಟು, ನಗರ ಮಹಿಳಾ ಘಟಕದ ಕಾರ್ಯದರ್ಶಿ ಪವಿತ್ರ ಕುರುಂಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಗೌಡ ಘಟಕದ ನಿಕಟ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ , ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು , ನಗರ ಗೌಡ ಘಟಕದ ನಿಕಟ ಪೂರ್ವಾಧ್ಯಕ್ಷ ಸಂತೋಷ್ ಮಡ್ತಿಲ, ಜನಾರ್ಧನ ಕೊಳಂಜಿರೋಡಿ, ಸುಂದರ್ ರಾಮಕಜೆ, ರಾಮಕೃಷ್ಣ ಆಲಂಕಲ್ಯ, ರಾಧಾಕೃಷ್ಣ ಮಾಣಿಬೆಟ್ಟು , ಹೇಮನಾಥ ಕುರುಂಜಿ, ಉಪಸ್ಥಿತರಿದ್ದರು. ಮೀನಾಕ್ಷಿ ರಾಮಕಜೆ ಪ್ರಾರ್ಥಿಸಿ, ಅಧ್ಯಾಪಕಿ ಶ್ರೀಮತಿ ಚಂದ್ರಮತಿಯವರು ಧನ್ಯವಾದ ಸಮರ್ಪಿಸಿದರು. ಸಭೆಯಲ್ಲಿ ಮಹಿಳೆಯರಿಗೆ ಸ್ಪರ್ಧೆಗಳನ್ನು ನಡೆಸಲಾಯಿತು. ಕೊನೆಯಲ್ಲಿ ಉಪಹಾರದ ವ್ಯವಸ್ಥೆಯನ್ನು ಅಶ್ವಥ್ ಕುರುಂಜಿಯವರು ಏರ್ಪಡಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.