ವಲಸೆ ಕಾರ್ಮಿಕರಿಗೆ ಆಹಾರ ಇನ್ನು ನಾಲ್ಕುದಿನ ವಿಸ್ತರಣೆ : ಎಂ.ಬಿ. ಎ.14 ರವರೆಗೆ ಊಟ ನೀಡಲು ತಾ.ಆಡಳಿತದಿಂದ ಸಹಕಾರ : ತಹಶೀಲ್ದಾರ್

Advt_Headding_Middle
Advt_Headding_Middle
Advt_Headding_Middle

ಸುಳ್ಯದಲ್ಲಿ ನೆಲೆಸಿರುವ ವಲಸೆ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕರ ಸಂಘದ ಸಹಕಾರದೊಂದಿಗೆ ಎಂ.ಬಿ. ಫೌಂಡೇಶನ್‌ನವರು ಆಹಾರ ತಯಾರಿಸಿ ಪೊಟ್ಟಣದಲ್ಲಿ ಮನೆ ಮನೆಗೆ ಹೋಗಿ ಹಂಚುತ್ತಿದ್ದು, ಅದನ್ನು ದಾನಿಗಳ ಸಹಕಾರದಿಂದ ಇನ್ನೂ ನಾಲ್ಕು ದಿನ ಮುಂದುವರಿಸಿರುವುದಾಗಿ ಎಂ.ಬಿ. ಫೌಂಡೇಶನ್ ಅಧ್ಯಕ್ಷ ಎಂ.ಬಿ.ಸದಾಶಿವರು ಹೇಳಿದ್ದಾರೆ.

 

“ಕಳೆದೆರಡು ದಿನಗಳಿಂದ ಆಹಾರ ತಯಾರಿಸಿ ಮನೆಮನೆಗೆ ವಿತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು ೩ ದಿನ ನಾವು ಫೌಂಡೇಶನ್‌ನಿಂದ ಮಾಡುತ್ತೇವೆ. ಬಳಿಕ ತಾಲೂಕು ಆಡಳಿತ ಮಾಡಬೇಕು ಎಂದು ಹೇಳಿದ್ದೆವು. ಅದರಂತೆ ನಾಳೆಗೆ ನಮ್ಮ ವತಿಯಿಂದ ೩ ದಿನ ಆಗುತ್ತದೆ. ಈಗ ೪ ಮಂದಿ ಪ್ರಮುಖ ದಾನಿಗಳು ಒಂದೊಂದು ದಿನದ ಅಕ್ಕಿಯ ವ್ಯವಸ್ಥೆ ಮಾಡುವುದಾಗಿ ಹೇಳಿರುವುದರಿಂದ ೪ ದಿನ ಈ ಆಹಾರ ವ್ಯವಸ್ತೆಯನ್ನು ಮುಂದುವರಿಸುತ್ತೇವೆ. ಬಳಿಕ ತಾಲೂಕು ಆಡಳಿತ ಆಹಾರ ಸಾಮಾಗ್ರಿ ಪೂರೈಸಿದರೆ ಮುಂದುವರೆಸುತ್ತೇವೆ. ಇಲ್ಲದಿದ್ದರೆ ನಿಲ್ಲಿಸುತ್ತೇವೆ” ಎಂದು ಶಿವಕೃಪಾದಲ್ಲಿ ಆಹಾರ ಪೊಟ್ಟಣ ತಯಾರಿಕಾ ಕಾರ್ಯದಲ್ಲಿ ನಿರತರಾಗಿದ್ದ ಅವರು ಹೇಳಿದರು.
ಅದೇ ಸಂದರ್ಭದಲ್ಲಿ ತಹಶೀಲ್ದಾರ್ ಅನಂತ ಶಂಕರರವರು ಸಿಬ್ಬಂದಿಗಳೊಂದಿಗೆ ಅಲ್ಲಿಗೆ ಆಗಮಿಸಿ, ಆಹಾರ ತಯಾರಿಕೆಯ ವ್ಯವಸ್ಥೆಯನ್ನು ವೀಕ್ಷಿಸಿದರು. ಎಂ.ಬಿ.ಯವರು ತಹಶೀಲ್ದಾರ್‌ರಿಗೆ ಎಲ್ಲ ವಿಚಾರಗಳನ್ನು ವಿವರಿಸಿದರು. ಈ ಸಂದರ್ಭ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಸಿದ ತಹಶೀಲ್ದಾರ್‌ರವರು “ತಾಲೂಕು ಆಡಳಿತವು ವಿವಿಧ ಕಡೆಗಳಿಂದ ಅಕ್ಕಿ, ಬೇಳೆ, ತರಕಾರಿಗಳನ್ನು ಸಂಗ್ರಹಿಸಿ ಇವರಿಗೆ ಕೊಡುತ್ತೇವೆ. ಎಪ್ರಿಲ್ 14ರ ವರೆಗೂ ಈ ಅನ್ನ ದಾಸೋಹ ಮುಂದುವರಿಯುವಂತೆ ನೋಡಿಕೊಳ್ಳುತ್ತೇವೆ” ಎಂದು ಹೇಳಿದರು.
ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ನಾಗರಾಜ ಮೇಸ್ತ್ರಿ, ಕಾರ್ಯದರ್ಶಿ ಬಿಜು ಅಗಸ್ಟಿನ್, ಪದಾಧಿಕಾರಿಗಳು, ನ.ಪಂ. ಸದಸ್ಯರುಗಳಾದ ನಾರಾಯಣ ಶಾಂತಿನಗರ, ಶಿಲ್ಪ ಸುದೇವ್, ಡೇವಿಡ್ ಧೀರ ಕ್ರಾಸ್ತ, ಶರೀಫ್ ಕಂಢಿ, ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ಹರಿಣಿ ಸದಾಶಿವ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.