HomePage_Banner
HomePage_Banner
HomePage_Banner
HomePage_Banner

ಸೂಕ್ತ ಚಿಕಿತ್ಸೆ ದೊರಕದೆ ವೃದ್ಧ ಸಾವು

ಅನಾರೋಗ್ಯದಿಂದಿದ್ದ ವೃದ್ಧರೊಬ್ಬರು , ಕೇರಳದವರಿಗೆ ಕರ್ನಾಟಕದ ಆಸ್ಪತ್ರೆಗಳಲ್ಲಿ ಅಡ್ಮಿಟ್ ಮಾಡಿ ಚಿಕಿತ್ಸೆ ಕೊಡಬಾರದೆಂದು ಜಿಲ್ಲಾಧಿಕಾರಿಯವರ ಆದೇಶದ ಹಿನ್ನೆಲೆಯಲ್ಲಿ , ಸೂಕ್ತ ಚಿಕಿತ್ಸೆ ಲಭಿಸದೆ ಅನಾರೋಗ್ಯ ಉಲ್ಬಣಗೊಂಡು ನಿಧನರಾಗಿರುವ ಘಟನೆ ಕಲ್ಲಪಳ್ಳಿಯಿಂದ ವರದಿಯಾಗಿದೆ.


ಸುಳ್ಯ ತಾಲೂಕಿನ ಗಡಿಗೆ ತಾಗಿಕೊಂಡಿರುವ ಕೇರಳದ ಕಲ್ಲಪಳ್ಳಿಯ ಪೆರುಮುಂಡ ಕೃಷ್ಣಪ್ಪ ಗೌಡರು ಮೃತರಾದವರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದಿದ್ದ ಅವರನ್ನು ಎ.2 ರಂದು ಕಷ್ಟಪಟ್ಟು ರಾಜ್ಯದ ಗಡಿ ದಾಟಿಸಿ ಸುಳ್ಯ ಕೆ.ವಿ.ಜಿ. ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತರಲಾಗಿತ್ತು. ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದರು. ಆದರೆ ಅಡ್ಮಿಟ್ ಮಾಡಬಾರದೆಂಬ ಡಿ.ಸಿ. ಆದೇಶದ ಹಿನ್ನೆಲೆಯಲ್ಲಿ ಅವರನ್ನು ಒಳರೋಗಿಯಾಗಿ ದಾಖಲಿಸಿಕೊಳ್ಳಲು ನಿರಾಕರಿಸಿದರು. ಕಾಂಞಂಗಾಡಿನ ಆಸ್ಪತ್ರೆಗೆ ಕರೆದೊಯ್ಯುವಂತೆ ಅವರು ಸಲಹೆ ನೀಡಿದರೆನ್ನಲಾಗಿದೆ. ಅನಿವಾರ್ಯವಾಗಿ ಮನೆಯವರು ಕೃಷ್ಣಪ್ಪ ಗೌಡರನ್ನು ಮನೆಗೆ ವಾಪಸ್ ಕರೆದುಕೊಂಡು ಹೋದರೆಂದು ತಿಳಿದು ಬಂದಿದೆ. ಎ.4 ರಂದು ರಾತ್ರಿ ಅವರು ಕೊನೆಯುಸಿರೆಳೆದರು. ಆಸ್ಪತ್ರೆಯಲ್ಲಿ ದಾಖಲುಗೊಳಿಸಿ ಚಿಕಿತ್ಸೆ ನೀಡುತ್ತಿದ್ದರೆ ಅಪ್ಪ ಬದುಕುತ್ತಿದ್ದರು ಎಂದು ಅವರ ಮಗ ತಿಳಿಸಿದ್ದಾರೆ.
ಮೃತರಾದ ಕೃಷ್ಣಪ್ಪ ಗೌಡರು ಮೂವರು ಪುತ್ರರು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.