HomePage_Banner
HomePage_Banner
HomePage_Banner
HomePage_Banner

ಐವರ್ನಾಡು : ಕೋರೋನಾ ಕಾರ್ಯಪಡೆ ಸಮಿತಿ ಸಭೆ

ಕೋವಿಡ್-19 ಕೊರೋನಾ ಸೋಂಕು ಹರಡದಂತೆ ರಚಿಸಲಾದ ಐವರ್ನಾಡು ಗ್ರಾಮ ಪಂಚಾಯತ್ ಮಟ್ಟದ ಗ್ರಾಮೀಣ ಕಾರ್ಯಪಡೆ ಸಮಿತಿಯ ಸದಸ್ಯರು ಪದಾಧಿಕಾರಿಗಳು ಮತ್ತು ವಿಶೇಷ ಅಹ್ವಾನಿತರ ಮತ್ತು ಗ್ರಾಮ ಪಂಚಾಯತಿಯ ಎಲ್ಲಾ ಸಂಘಸಂಸ್ಥೆಗಳ ಪ್ರತಿನಿಧಿಗಳು ,ಬ್ಯಾಂಕ್ ಪ್ರತಿನಿಧಿಗಳು ಸಹಕಾರಿ ಬ್ಯಾಂಕ್ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ನ್ಯಾಯಬೆಲೆ ಅಂಗಡಿ ಪ್ರತಿನಿಧಿಗಳ ಹಾಗೂ ವಿವಿಧಸಂಘ ಸಂಸ್ಥೆಗಳ ಪ್ರಮುಖರ ಸಭೆಯು ಎ.7 ರಂದು ಐವರ್ನಾಡು ಗ್ರಾಮ ಪಂಚಾಯತದ ಉಪಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಕೀಲಾಡಿ ಯವರ ಅಧ್ಯಕ್ಷತೆಯಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು .

ಈ ಸಭೆಯಲ್ಲಿ ಐರ್ವನಾಡು ಸಹಕಾರಿ ಬ್ಯಾಂಕಿನಅಧ್ಯಕ್ಷರಾದ .ಎಸ್.ಎನ್ ಮನ್ಮಥ ಐವರ್ನಾಡು ಗ್ರಾಮ ಪಂಚಾಯತ್ ನ ಕೋವಿಡ್-19 ನೋಡಲ್ ಅಧಿಕಾರಿಗಳಾದ ಸುಳ್ಯ ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ ಆರ್ ಎಫ್.ಒ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಟಾಸ್ಕಪೋರ್ಸ್ ಕಮಿಟಿಯ ಎಲ್ಲಾ ಸದಸ್ಯರು ,ಪಂಚಾಯತದ ಸದಸ್ಯರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೇಖರ ಯು.ಡಿ ಇವರೆಲ್ಲರೂ ಉಪಸ್ಥಿತರಿದ್ದರು ಸ್ಥಳೀಯ ವೈದ್ಯರಾದ ಡಾ
ಬಾಲಸುಬ್ರಹ್ಮಣ್ಯ ಭಟ್ ರವರು ವಿಶೇಷ ಅಹ್ವಾನಿತರಾಗಿ ಉಪಸ್ಥಿತರಿದ್ದರು .
ಈ ಸಭೆಯಲ್ಲಿ ವಿವಿಧ ವಿಚಾರಗಳನ್ನು ಚರ್ಚಿಸಿ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು 1. ಗ್ರಾಮ ಪಂಚಾಯತಿಯಲ್ಲಿ ರೇಷನ್ ಸಾಮಗ್ರಿಗಳನ್ನು ಫಲಾನುಭವಿಗಳ ಮನೆಗಳಿಗೆ ತಲುಪಿಸಲು ತಲುಪಿಸಬೇಕಾದ ವಲಯವಾರು ಕೇಂದ್ರಗಳನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಯಿತು ಮತ್ತು ಎರಡನೇ ಹಂತದ ರೇಷನ್ ಸಾಮಗ್ರಿಗಳು ಸರಬರಾಜಾದ ಕೂಡಲೇ ಎಲ್ಲಾ ರೇಷನ್ ಸಾಮಗ್ರಿಗಳನ್ನು ಫಲಾನುಭವಿಗಳ ಮನೆಗೆ ವಲಯವಾರು ಜನವಸತಿ ಪ್ರದೇಶಗಳಿಗೆ ಗ್ರಾಮಪಂಚಾಯತ್ ,ನ್ಯಾಯಬೆಲೆ ಅಂಗಡಿ ಸಹಕಾರಿ ಸಂಘಮತ್ತು ದಾನಿಗಳ ನೆರವಿನಿಂದ ಸರಬರಾಜು ಮಾಡುವುದಾಗಿ ತೀರ್ಮಾನಿಸಲಾಯಿತು 2.ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿರುವ ಪೇಟೆ ಪಟ್ಟಣದಿಂದ ಬಂದಿರುವ ವ್ಯಕ್ತಿಗಳನ್ನು ಗುರುತಿಸಿ ಅಂಥವರ ಮೇಲೆ ನಿಗಾ ಇಡುವುದನ್ನು ನಿಗದಿತ ಅವಧಿವರೆಗೆ ಮುಂದುವರಿಸುವುದು ಮತ್ತು ಅವರಿಗೆ ಸಹಕರಿಸಲು ತಿಳುವಳಿಕೆ ನೀಡುವುದಾಗಿ ನಿರ್ಣಯಿಸಲಾಯಿತು. 3.ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೇಶನ್ ಕಾರ್ಡ್ ಹೊಂದಿಲ್ಲದೆ ಇರುವ ಬಡಕುಟುಂಬಗಳಿಗೆ ಟಾಸ್ಕ್ ಪೋರ್ಸ್ ಕಮಿಟಿ ಹಾಗೂ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ವತಿಯಿಂದ ಆಹಾರಧಾನ್ಯದ ಕಿಟ್ ಅನ್ನು ಉಚಿತವಾಗಿ ಒದಗಿಸುವುದು ಮತ್ತು ಕಡುಬಡವ 22 ಕುಟುಂಬಗಳ ಪಟ್ಟಿಯನ್ನು ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆದುಕೊಳ್ಳಲಾಯಿತು.4. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ದೃಷ್ಟಿಯಿಂದ ಮತ್ತು ಅತ್ಯಂತ ದುರ್ಬಲರಿಗೆ ನೆರವಾಗುವ ಸದುದ್ದೇಶದಿಂದ ರಚಿಸಲಾದ ವಿಲೇಜ್ ಟಾಸ್ಕ್ ಪೋರ್ಸುಕಮಿಟಿ ವತಿಯಿಂದ ಸಹಕಾರಿ ಕೃಷಿ ಪತ್ತಿನ ಬ್ಯಾಂಕಿನಲ್ಲಿ ತೆರೆಯಲಾದ ಉಳಿತಾಯ ಖಾತೆಗೆ ಸ್ಥಳೀಯವಾಗಿ ದಾನಿಗಳಿಂದ ದೇಣಿಗೆಯನ್ನು ಸಂಗ್ರಹಿಸುವುದಾಗಿ ನಿರ್ಣಯಿಸಲಾಯಿತು.5 ಮತ್ತು ಈ ಸಂದರ್ಭದಲ್ಲಿ ರೂ.10 ಸಾವಿರ ದೇಣಿಗೆ ನೀಡಿರುವ ಸ್ಥಳೀಯ ವೈದ್ಯರಾದ ಶ್ರೀ. ಬಾಲಸುಬ್ರಹ್ಮಣ್ಯ ಭಟ್, 5 ಸಾವಿರ ದೇಣಿಗೆ ನೀಡಿರುವ ಮಂಜುಶ್ರೀ ಗೆಳೆಯರ ಬಳಗ ಮತ್ತು ರೂಪಾಯಿ 5 ಸಾವಿರ ದೇಣಿಗೆ ನೀಡಿರುವ ದಿನೇಶ್ ಮಡ್ತಿಲ ರವರುಗಳನ್ನುಗೌರವದಿಂದ ಅಭಿನಂದಿಸಲಾಯಿತು ಮತ್ತು ಗ್ರಾಮ ಪಂಚಾಯತಿಯ ಎಲ್ಲ ಸಂಘ-ಸಂಸ್ಥೆಗಳು ಮತ್ತು ದಾನಿಗಳು ಕನಿಷ್ಠ 1000ಕ್ಕೆ ಕಡಿಮೆಯಾಗದಂತೆ ದೇಣಿಗೆಯನ್ನು ನೀಡುವಂತೆ ವಿನಂತಿಸಿ ಕೊಳ್ಳಲಾಯಿತು ಮತ್ತು ಸಮಿತಿಯು ಚರ್ಚಿಸಿ ಸಂಗ್ರಹಿತವಾದ ಮೊತ್ತವನ್ನು ಸದುದ್ದೇಶಗಳಿಗೆ ಬಳಸುವುದಾಗಿ ತೀರ್ಮಾನಿಸಲಾಯಿತು. ಗ್ರಾಮ ಪಂಚಾಯತ್ ಮಟ್ಟದಲ್ಲಿ 18 ರಿಂದ 35 ವರ್ಷ ವಯಸ್ಸಿನ ಯುವಕ ಯುವತಿಯರನ್ನು ಕೊರೋನಾ ಸೈನಿಕರಾಗಿ ನಿಯುಕ್ತಿಗೊಳಿಸುವ ಬಗ್ಗೆ ಚರ್ಚಿಸಲಾಯಿತು ಗ್ರಾಮಪಂಚಾಯಿತಿಯಲ್ಲಿ ಗ್ರಾಮದಲ್ಲಿರುವ 60 ವರ್ಷ ಮೇಲ್ಪಟ್ಟವರಲ್ಲಿ ಉಸಿರಾಟ ಸಮಸ್ಯೆ ರಕ್ತದೊತ್ತಡ ಹಾಗೂ ಗಂಭೀರ ಕಾಯಿಲೆ ಇರುವವರನ್ನು ಆಶಾಕಾರ್ಯಕರ್ತೆಯರ ಮೂಲಕ ಪಟ್ಟಿ ಮಾಡಿಸಿ ಅವರ ನೆರವಿಗೆ ವಿಲೇಜ್ ಟಾಸ್ಕ್ ಪೋರ್ಸ್ ಕಮಿಟಿಯಿಂದ ಸಹಕಾರ ನೀಡುವುದು. ಡಾಕ್ಟರ್ ಬಾಲಸುಬ್ರಹ್ಮಣ್ಯ ಭಟ್ ವೈದ್ಯಾಧಿಕಾರಿಗಳು ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮಗಳ ಬಗ್ಗೆಸಲಹೆಗಳನ್ನುನೀಡಿದರು .ಈ ಸಭೆಯಲ್ಲಿ ನೋಡಲ್ ಅಧಿಕಾರಿಗಳಾಗಿರುವ ಮಂಜುನಾಥರವರು ಕೋವಿಡ್ 19 ಬಗ್ಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಪ್ರಾರಂಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೇಖರ್.ಯು.ಡಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕೊನೆಯಲ್ಲಿ ವಂದಿಸಿದರು ಮತ್ತು ಈ ಸಂಧರ್ಭದಲ್ಲಿ ಕೊರೋನಾ ಸೋಂಕಿನ ಅಂಗವಾಗಿ ಲಾಕ್ ಡೌನ್ ಅವಧಿಯಲ್ಲಿ ಪೂರ್ವಭಾವಿಯಾಗಿ ಅವಶ್ಯಕವಿರುವ ಸಾಮಾಗ್ರಿಗಳನ್ನು ಸಹಕಾರಿ ಬ್ಯಾಂಕಿನ ಮಾರಟವಿಭಾಗದ ಮೂಲಕ ಜನಸಾಮಾನ್ಯರಿಗೆ ತಲುಪಿಸಲು ಪ್ರಯತ್ನಿಸುತ್ತಿರುವ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು,ಉಪಾಧ್ಯಕ್ಷರು,ನಿರ್ದೇಶಕರು,ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಮತ್ತು ಸಿಬ್ಬಂಧಿಗಳನ್ನು ಈ ಸಂಧರ್ಭದಲ್ಲಿ ಅಭಿನಂದಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.