HomePage_Banner
HomePage_Banner
HomePage_Banner
HomePage_Banner

ಸುಣ್ಣಮೂಲೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ರಬ್ಬರ್ ತೋಟದಲ್ಲಿ ಬೆಂಕಿ ಅವಘಡ

 

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಖಾಸಗಿ ವ್ಯಕ್ತಿಗಳಿಗೆ ಸೇರಿದ ಗುಡ್ಡ ಹಾಗೂ ರಬ್ಬರ್ ತೋಟದಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಎ.8ರಂದು ರಾತ್ರಿ ಸಂಭವಿಸಿದೆ.


ಕನಕಮಜಲು ಗ್ರಾಮದ ಸುಣ್ಣಮೂಲೆಯ ಹಸನ್ ಎಂಬವರಿಗೆ ಸೇರಿದ ರಬ್ಬರ್ ತೋಟದ ಬಳಿಯಿರುವ ಗುಡ್ಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಬೆಂಕಿ ಹೊತ್ತಿಕೊಂಡು, ಸಮೀಪದ ರಬ್ಬರ್ ತೋಟದಲ್ಲಿ ವ್ಯಾಪಿಸಿ ಹೊತ್ತಿ ಉರಿಯ ತೊಡಗಿತು. ಇದನ್ನು ಗಮನಿಸಿದ ಹಸನ್ ಮತ್ತು ಸ್ಥಳೀಯ ಸುಣ್ಣಮೂಲೆ ಫ್ರೆಂಡ್ಸ್ ಸದಸ್ಯರುಗಳು ಹಾಗೂ ಊರವರು ಸೇರಿ ಬೆಂಕಿ ನಂದಿಸಲು ತೊಡಗಿದರು. ಈ ವೇಳೆ ಹಸನ್ ಅವರು ಸುಳ್ಯದ ಅಗ್ನಿಶಾಮಕ ದಳದವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರೆನ್ನಲಾಗಿದೆ. ಆದರೆ ಗುಡ್ಡ ಪ್ರದೇಶದಲ್ಲಿ ಬೆಂಕಿ ಅವಘಡವಾದ ಕಾರಣ ಅಗ್ನಿಶಾಮಕ ದಳದ ವಾಹನ ರಸ್ತೆಯವರೆಗೆ ಬಂದು ನಿಂತಿತು.
ಅದರ ಸಿಬ್ಬಂದಿಗಳು ಪೈಪ್ ಎಟಕುವಷ್ಟು ದೂರ ನೀರು ಹಾಕಿ ಬೆಂಕಿ ನಂದಿಸಿದರು. ಈ ವೇಳೆ ಊರವರು ಸೇರಿ ಅಗ್ನಿಶಾಮಕ ವಾಹನವನ್ನು ಮುಂದೆ ಹೋಗುವಂತೆ ಹೇಳಿದರೆನ್ನಲಾಗಿದೆ. ಆದರೆ ಅದು ಕಚ್ಛಾ ರಸ್ತೆಯಾದ ಕಾರಣ ವಾಹನದ ಚಾಲಕ ಆ ರಸ್ತೆಯಲ್ಲಿ ವಾಹನ ತೆರಳಿದರೆ ವಾಹನಕ್ಕೆ ಹಾನಿಯಾಗುತ್ತದೆ ಎಂದು ಹೇಳಿದರೆನ್ನಲಾಗಿದೆ. ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ವಾಹನ ಚಾಲಕ ಹಾಗೂ ಸ್ಥಳದಲ್ಲಿ ನೆರೆದಿದ್ದವರ ಮಧ್ಯೆ ಮಾತಿನ ಚಕಮಕಿ ನಡೆಯಿತ್ತೆನ್ನಲಾಗಿದ್ದು, ಅಗ್ನಿಶಾಮಕ ದಳದವರು ಸುಳ್ಯ ಪೊಲೀಸ್ ಠಾಣೆಯಲ್ಲಿ ತಮ್ಮ ಕರ್ತವ್ಯಕ್ಕೆ ತೆರಳಿದ ಸಂದರ್ಭದಲ್ಲಿ ಸ್ಥಳೀಯರು ಅಡ್ಡಿಪಡಿಸಿದ್ದಾರೆ ಎಂದು ಮೌಖಿಕವಾಗಿ ದೂರಿ ಕೊಂಡಿರುವುದಾಗಿ ತಿಳಿದುಬಂದಿದೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.