HomePage_Banner
HomePage_Banner
HomePage_Banner
HomePage_Banner

ಸಂಕಷ್ಟದ ಸಮಯದಲ್ಲಿ ಬಡವರ ಸೇವೆ ಮಾಡಿದ ಸಾರ್ಥಕತೆ

 

ಜಗತ್ತು ಕೊರೊನಾ ವೈರಸ್ ಎಂಬ ಭೀಕರ ಕಾಯಿಲೆಗೆ ತುತ್ತಾಗಿದೆ. ನಮ್ಮ ಭಾರತ ದೇಶಕ್ಕೂ ಇದರ ಪರಿಣಾಮ ಬೀರಿದೆ. ಈ ಸಂದರ್ಭದಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟದ ಪರಿಸ್ಥಿತಿ ಬಂದೊಂದಗಿದೆ. ದೇಶ, ರಾಜ್ಯ,ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲೂ ಸರ್ಕಾರ ಅಲ್ಲದೇ ಹಲವಾರು ಸಂಘ ಸಂಸ್ಥೆಗಳು ಬಡವರಿಗೆ ದಿನ ಬಳಕೆಯ ವಸ್ತುಗಳನ್ನು ದಾನವಾಗಿ ನೀಡಿರುತ್ತಾರೆ. ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಂಡಿರುವ ನಮ್ಮ ಅಕ್ಷಯ ಯುವಕ ಮಂಡಲ*ದ ವತಿಯಿಂದ ನಾವೇನಾದರೂ ಸಹಾಯ ಮಾಡುವ ಬಗ್ಗೆ ಯೋಚನೆ ಮಾಡಿ ಅದನ್ನು ಯುವಕ ಮಂಡಲದ ಹಿರಿಯ ಕಿರಿಯ ಸದಸ್ಯರೊಡನೆ ಚರ್ಚಿಸಿ ಆ ಮೂಲಕ ನಮ್ಮಿಂದಾದ ಸಹಾಯವನ್ನು ಮಾಡಲು ನಿರ್ಧರಿಸಿದೆವು.ಅದರಂತೆ ನೆಟ್ಟಾರು ಪರಿಸರದ 16 ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ದಿನ ಬಳಕೆಯ ಅಗತ್ಯ ವಸ್ತುಗಳನ್ನು ಇಂದು (08/04/2020) ವಿತರಿಸಲಾಯಿತು.

ಬೆಳ್ಳಾರೆ ಆರಕ್ಷಕ ಠಾಣೆ ಎಸ್ಐ ಶ್ರೀ ಆಂಜನೇಯ ರೆಡ್ಡಿ ಬಡವರಿಗೆ ದಿನ ಬಳಕೆಯ ಕಿಟ್ ಅನ್ನು ವಿತರಿಸಿ ಯುವಕ ಮಂಡಲದ ಈ ಒಂದು ಪುಣ್ಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಬೆಳ್ಳಾರೆ ಠಾಣೆಯ ಹೆಡ್ ಕಾನ್ಸ್ಟೇಬಲ್  ಬಾಲಕೃಷ್ಣ,ಅಕ್ಷಯ ಯುವಕ ಮಂಡಲದ ಅಧ್ಯಕ್ಷರಾದ  ವೆಂಕಟರಮಣ ಗೌಡ, ಕಾರ್ಯದರ್ಶಿ ಪ್ರದೀಪ್ ಚಾವಡಿಬಾಗಿಲು,ಗೌರವಾಧ್ಯಕ್ಷ  ಪ್ರವೀಣ್ ಚಾವಡಿಬಾಗಿಲು,ಸದಸ್ಯರಾದ ಶೈಲೇಶ್ ನೆಟ್ಟಾರು,ವಸಂತ ನೆಟ್ಟಾರು, ವಿಜೇಶ್ ಚಾವಡಿಬಾಗಿಲು,ಶ್ರೀಜಿತ್ ರೈ ಮಣಿಕ್ಕಾರ ಹಾಗೂ ಭಾಸ್ಕರ ನೆಟ್ಟಾರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.