ನಾಳೆಯಿಂದ ಎ.ಪಿ.ಎಂ.ಸಿ ವಠಾರದಲ್ಲಿ ವರ್ತಕರಿಂದ ಅಡಿಕೆ ಖರೀದಿ

Advt_Headding_Middle

 

ಗರಿಷ್ಠ ಒಂದು ಕ್ವಿಂಟಾಲ್ ಗೆ ಮಿತಿ:ಶಾಸಕರು, ಎ.ಸಿ ನೇತೃತ್ವದ ಸಭೆಯಲ್ಲಿ ನಿರ್ಧಾರ

ನಾಳೆಯಿಂದ ಸುಳ್ಯ ಎ.ಪಿ.ಎಂ.ಸಿ ಪ್ರಾಂಗಣದೊಳಗೆ ಖಾಸಗಿ ವರ್ತಕರಿಂದ ಅಡಿಕೆ ಮತ್ತು ಗೇರು ಬೀಜವನ್ನು ಖರೀದಿಸಲು ಅವಕಾಶ ನೀಡಲಾಗಿದೆ.


ಎ.24 ರಂದು ಎ.ಪಿ.ಎಂ.ಸಿ ಸಭಾಂಗಣದಲ್ಲಿ ಶಾಸಕ ಎಸ್.ಅಂಗಾರ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಅಡಿಕೆ ಮತ್ತು ಗೇರು ಬೀಜ ಖರೀದಿಸಲು ಅವಕಾಶ ನೀಡಲಾಗಿದ್ದು ರೈತರು ಗರಿಷ್ಟ ಒಂದು‌ ಕ್ವಿಂಟಾಲ್ ಉತ್ಪನ್ನ ಗಳನ್ನು ವರ್ತಕರಿಗೆ ನೀಡಲು ಅವಕಾಶವಿದೆ. ಖಾಸಗಿ ವಾಹನಗಳು ರಸ್ತೆಗಿಳಿಯಬಾರದೆನ್ನುವ ಆದೇಶ ಇರುವುದರಿಂದ ಎ.ಪಿ.ಎಂ.ಸಿ.ವತಿಯಿಂದಂದಲೇ ವಾಹನ ವ್ಯವಸ್ಥೆ ಮಾಡಲಾಗುತ್ತಿದೆ. ಅಡಿಕೆ ಮತ್ತು ಗೇರು ಬೀಜ ಮಾರಾಟ ಮಾಡುವ ರೈತರು ತಮ್ಮ‌ವ್ಯಾಪ್ತಿಯ ಎ.ಪಿ.ಎಂ.ಸಿ.ಸದಸ್ಯರು ಗಳನ್ನು ಅಥವಾ ಸುಳ್ಯ ಎ.ಪಿ.ಎಂ.ಸಿ. ಕಚೇರಿ (08257-233711) ನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಬೆಳಗ್ಗೆ 7 ಗಂಟೆ ಯಿಂದ ಮಧ್ಯಾಹ್ನ 12 ಗಂಟೆ ವರೆಗೆ ಸಮಯ ನಿಗಧಿ ಪಡಿಸಲಾಗಿದೆ.

ಸಭೆಯಲ್ಲಿ ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಎ.ಪಿ.ಎಂ.ಸಿ.ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ,‌ ಉಪಾಧ್ಯಕ್ಷ ಸಂತೋಷ್ ಜಾಕೆ, ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ತಹಶೀಲ್ದಾರ್ ಅನಂತ ಶಂಕರ್, ಎ.ಪಿ.ಎಂ.ಸಿ.ಕಾರ್ಯದರ್ಶಿ ನಿರಂಜನ ಹಿರೇಮಠ, ಪೋಲೀಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.