Breaking News

ಸರಕಾರದ ಆದೇಶವನ್ನು ಪಾಲಿಸಿ, ಕೊರೊನ ಮಹಾಮಾರಿ ವೈರಸ್ ನಿಂದ ಎಲ್ಲರೂ ಒಂದಾಗಿ ಜಯಗೊಳಿಸೋಣ : ಮಾನಸ.ಎಂ ಕಲ್ಮಡ್ಕ 

Advt_Headding_Middle
Advt_Headding_Middle

 

ಕೊರೊನ ಎಂದು ಹೇಳಿದರೆ ಸಾಕು ವಿಶ್ವದ ಎಲ್ಲಾ ಜನರಲ್ಲಿ ಭಯವನ್ನುಂಟುಮಾಡಿದೆ. ಜನರ ರಕ್ಷಣೆಗಾಗಿ ಸರಕಾರವು ಸರಿಯಾದ ಕ್ರಮವನ್ನು ಕೈಗೊಂಡಿದೆ. ಕೊರೊನ ವೈರಸ್ ನಿಂದ ಲಾಕ್ ಡೌನ್ ಆದ ಈ ಸಮಯದಲ್ಲಿ ಜನರು ತುಂಬಾ ಕಷ್ಟವನ್ನು ಅನುಭವಿಸುತ್ತಾ ಇದ್ದಾರೆ. ಜನರು ಅವಶ್ಯಕ ಸಾಮಗ್ರಿಗಳಿಗೆ ಹೊರಗಡೆ ಹೋದರೆ ಮಾತನಾಡುವಾಗ ಪರಸ್ಪರ ಅಂತರ ಹಾಗೂ ಮಾಸ್ಕ್ ಧರಿಸಿ ಜಾಗೃತರಾಗೋಣ.
ನಮ್ಮ ಆರೋಗ್ಯದ ದೃಷ್ಟಿಯಿಂದ ಸರಕಾರದ ನಿಯಮಗಳನ್ನು ನಾವು ಪಾಲಿಸಿ ಕೊರೊನದಿಂದ ಪಾರಾಗೋಣ. ಜನರ ಒಳಿತಿಗಾಗಿ ಪೋಲೀಸರು, ವೈದ್ಯರು, ಸೈನಿಕರು, ಆಶಾಕಾರ್ಯಕರ್ತೆಯರು, ಶ್ರಮಿಸುತ್ತಿದ್ದಾರೆ. ಹಾಗೂ ಪತ್ರಕರ್ತ ವರ್ಗದವರು ಮಾಹಿತಿಯನ್ನು ಜನರಿಗೆ ನೀಡಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ವಿಶ್ವ ವನ್ನು ಬಿಟ್ಟು ಕೊರೊನ ಎಂಬ ಮಹಾಮಾರಿ ತೊಲಗಲಿ ಎಂಬುದು ನನ್ನ ಆಶಯವಾಗಿದೆ. ಇದಕ್ಕಾಗಿ ಶ್ರಮವಹಿಸುತ್ತಿರುವ ಎಲ್ಲರಿಗೂ ನಾವು ಚಿರಋಣಿಯಾಗಿರಬೇಕು.


ಮಾನಸ.ಎಂ ಕಲ್ಮಡ್ಕ
ದ್ವಿತೀಯ. ಬಿ.ಎ
ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ. ಪೆರುವಾಜೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.