ಎಂ.ಬಿ.ಫೌಂಡೇಶನ್ ಮತ್ತು ಕಟ್ಟಡ ಕಾರ್ಮಿಕರ ಸಂಘಟನೆ ವಲಸೆ ಕಾರ್ಮಿಕರಿಗೆ ಅರಂಭಿಸಿದ ‘ಅನ್ನದಾಸೋಹ’ ಮೇ. 3ರಂದು ನಿಲ್ಲಿಸಲು ನಿರ್ಧಾರ

Advt_Headding_Middle
Advt_Headding_Middle

 

ಒಂದು ತಿಂಗಳಲ್ಲಿ 50 ಸಾವಿರಕ್ಕೂ ಅಧಿಕ ಊಟ ವಿತರಣೆ : ದಾನಿಗಳ ಸಹಕಾರ ಸ್ಮರಿಸಿಕೊಂಡ ಸಂಘಟಕರು

ಕೊರೊನಾ ವೈರಸ್ ನಿಂದ ಭಾರತದಲ್ಲಿ ಲಾಕ್ ಡೌನ್ ಆರಂಭಗೊಂಡ ಬಳಿಕ ವಲಸೆ ಕಾರ್ಮಿಕರ ಹಸಿವು ನೀಗಿಸಲು ಸುಳ್ಯದ ಎಂ.ಬಿ.ಫೌಂಡೇಶನ್ ಹಾಗೂ ಕಟ್ಟಡ ಕಾರ್ಮಿಕರ ಸಂಘಟನೆಯವರು ಒಂದು ತಿಂಗಳ ಹಿಂದೆ ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ಆರಂಭಿಸಿದ ಅನ್ನದಾಸೋಹ ಯೋಜನೆ ನಾಳೆಗೆ (ಮೇ.3ರಂದು) ಕೊನೆಗೊಳಿಸಲು ಸಂಘಟಕರು ನಿರ್ಧಾರ ಕೈಗೊಂಡಿದ್ದಾರೆ.

ಈ ಕುರಿತು ಎಂ.ಬಿ.ಫೌಂಡೇಶನ್ ನ ಅಧ್ಯಕ್ಷ ಎಂ.ಬಿ.ಸದಾಶಿವ ಹಾಗೂ ಕಟ್ಟಡ ಕಾರ್ಮಿಕ ಸಂಘಟನೆಯ ಪ್ರಮುಖರಾದ ನಾಗರಾಜ ಮೇಸ್ತ್ರಿ ಜಯನಗರ, ಕೆ.ಪಿ.ಜಾನಿ, ಬಿಜು ಅಗಸ್ಟಿನ್ , ನೆಲ್ಸನ್, ಶಿವರಾಮ ಕೇರ್ಪಳ ಮೊದಲಾದವರಿದ್ದು ಇಂದು ಸಂಘಟಕರು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ಪತ್ರಿಕಾಗೋಷ್ಠಿ ಕರೆದು ಈ ವಿಷಯ ತಿಳಿಸಿದರಲ್ಲದೆ, ಅನ್ನ ದಾಸೋಹ ದಂತಹ ಕಾರ್ಯ ನಡೆಸಲು ಸಹಕರಿಸಿದ ಪ್ರತಿಯೊಬ್ಬರನ್ನು ಸ್ಮರಿಸಿಕೊಂಡರು.

ಎಂ.ಬಿ.ಫೌಂಡೇಶನ್ ನ ಅಧ್ಯಕ್ಷ ಎಂ.ಬಿ.ಸದಾಶಿವರು ಮಾತನಾಡಿ “ಸಡನ್ ಆಗಿ ಲಾಕ್ ಡೌನ್ ಆರಂಭವಾದ ಸಂದರ್ಭದಲ್ಲಿ ದೂರದಿಂದ ಇಲ್ಲಿ ಬಂದು ಕೆಲಸ ಮಾಡುವ ವಲಸೆ ಕಾರ್ಮಿಕರ ಕಷ್ಟ ಅರಿತು ಅವರಿಗೆ ಆಹಾರ ಸಿದ್ದಗೊಳಿಸಿ ನೀಡಲು ನಿರ್ಧರಿಸಿದೆವು. ನ.ಪಂ.ನಲ್ಲಿ ಸಭೆ ನಡೆದ ಬಳಿಕ ಸರ್ವೆ ನಡೆಯಿತು. ಮರುದಿನದಿಂದಲೇ ನಾವು ಆಹಾರ ಬೇಯಿಸಿ ನೀಡಲು ಒಪ್ಪಿದೆವು. ಮೂರು ದಿನದ ಬಳಿಕ ನ.ಪಂ.ಕೂಡಾ ಕೈ ಜೋಡಿಸುವ ಬಗ್ಗೆ ಮಾತುಕತೆ ನಡೆಯಿತು. ಅಲ್ಲಿ ನಡೆದ ಮಾತುಕತೆ ಕೈಗೂಡಲಿಲ್ಲ. ಆದರೆ ನಾವು ದಾನಿಗಳ ಸಹಕಾರದಿಂದ ಈ ಸಾಹಸಮಯ ಕಾರ್ಯವನ್ನು ಇಂದಿನ ವರೆಗೆ ಒಂದು ತಿಂಗಳ ಕಾಲ ಯಶಸ್ವಿಯಾಗಿ ನಡೆಸಿದ್ದೇವೆ ಎಂದು ಎಂ.ಬಿ.ಸದಾಶಿವರು ವಿವರ ನೀಡಿದರು.
” ಆರಂಭದ ದಿನದಲ್ಲಿ 700 ಕಾರ್ಮಿಕರಿಗೆ ಊಟ ಬರಬರುತ್ತ ಸಂಖ್ಯೆ ಏರಿ 800 ರಷ್ಟು ಮಂದಿಗೆ ಬೇಯಿಸಿ ಆಹಾರ ಒದಗಿಸಿದ್ದೇವೆ. ಒಂದು ತಿಂಗಳಿನಲ್ಲಿ ಸರಿ ಸುಮಾರು 50 ಸಾವಿರ ಮಂದಿ ಗೆ ಆಹಾರ ಒದಗಿಸಿದ್ದೇವೆ. ಇದಕ್ಕೆ 7 ಲಕ್ಷದ 8 ಸಾವಿರ ದಷ್ಟು ಖರ್ಚು ತಗಲಿದ್ದು ಎಲ್ಲವನ್ನೂ ದಾನಿಗಳಿಂದ ಪಡೆದುಕೊಂಡಿದ್ದೇವೆ. ಎಲ್ಲರೂ ಹಣವನ್ನೇ ನೀಡಿದ್ದಾರೆಂದಲ್ಲ ಕೆಲವರು ಕಟ್ಟಿಗೆ, ತರಕಾರಿ, ತೆಂಗಿನಕಾಯಿ, ಅಕ್ಕಿ ಒದಗಿಸಿದ್ದಾರೆ.‌ ಮುಖ್ಯವಾಗಿ ಯಾರು ಕಷ್ಟದ ಕೆಲಸ ಮಾಡಿ ಹಂತ ಹಂತವಾಗಿ ಮೇಲೆ ಬಂದಿದ್ದಾರೋ ಅವರೇ ನಮ್ಮ ಈ ಕಾರ್ಯದಲ್ಲಿ ಪ್ರಮುಖವಾಗಿ ಕೈ ಜೋಡಿಸಿದ್ದಾರೆ ಎಂದು ಹೇಳಿದ ಸದಾಶಿವರು “ನಮಗೆ ಸಹಕಾರ ನೀಡಿದವರ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದೇವೆ. ಯಾಕೆಂದರೆ ಅದು ಇನ್ನೂಬ್ಬರಿಗೆ ಸ್ಫೂರ್ತಿಯಾಗಬೇಕೆನ್ನುವ ಕಾರಣಕ್ಕೆ ಎಂದು ಅವರು ವಿವರ ನೀಡಿದರು.

ಲಾಕ್ ಡೌನ್ ಮುಂದೆ ಹೋಗಿದೆ ಈಗ ಊಟ ನಿಲ್ಲಿಸಿದರೆ ಹೇಗೆ ? ತಾಲೂಕು ಆಡಳಿತದ ಗಮನಕ್ಕೆ ತರಲಾಗಿದೆಯಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸದಾಶಿವರು “ನ.ಪಂ.ನಲ್ಲಿ ಆರಂಭದಲ್ಲಿ‌ ಸಭೆ ನಡೆದು ವಿವರ ನೀಡಲಾಗಿತ್ತು. ಅವರ ಸಹಕಾರ ಕೇಳಿದ್ದೆವು. ಆದರೆ ಅವರು ಸಹಕಾರ ನೀಡಿಲ್ಲ. ಈಗ ಸಭೆ ಕರೆಯಿರಿ ಎಂದು ಕೇಳಿದಾಗಲೂ ಅವರು ಸಭೆ ಕರೆದಿಲ್ಲ.‌ ನಾವೆಲ್ಲರೂ ಸೇರಿ ಇದನ್ನು ಆರಂಭಿಸಿದ ಬಳಿಕ ಪ್ರತಿ ದಿನವೂ ಯೋಜನೆಯ ಕುರಿತು ಚರ್ಚೆ ನಡೆಸುತ್ತೇವೆ. ಉತ್ತಮ ಸಲಹೆಯನ್ನು ಆಯ್ಕೆ ಮಾಡಿಕೊಂಡು ಅದೇ ರೀತಿ ಮಾಡುತ್ತೇವೆ. ಇಲ್ಲಿಯ ಆಡಳಿತ ಕೂಡಾ ಆಸಕ್ತಿ ವಹಿಸಿ ಆ ರೀತಿ ಮಾಡಬೇಕು. ಒಂದು ವೇಳೆ ನಮ್ಮ ಯೋಜನೆ ನಿಂತ ಬಳಿಕ ಯಾರಾದರೂ ನಮಗೆ ಆಹಾರದ ತೊಂದರೆ ಇದೆ ಎಂದು ಬಂದು ಹೇಳಿದರೆ ಅವರಿಗೆ ಯಾವುದಾದರೂ ರೀತಿಯಲ್ಲಿ ಆಹಾರ ಒದಗಿಸಲು ನಾವು ಸಿದ್ದರಿದ್ದೇವೆ ಎಂದು ಎಂ.ಬಿ.ಸದಾಶಿವರು ಹೇಳಿದರೆ, ” ನಾವು ನಿಲ್ಲಿಸಿದರೆ ಸರಕಾರ ಈ ಕಾರ್ಯ ಮಾಡಬೇಕು. ಆದರೆ ಈಗ ಕೆಲವೊಂದು ಕೆಲಸಗಳು ಆರಂಭ ವಾಗಿರುವುದರಿಂದ ಕಷ್ಟವಾಗದು” ಎಂದು ಕೆ.ಪಿ.ಜಾನಿ ಹೇಳಿದರು.

ಶಾಸಕರು ಬರಲಿಲ್ಲ

ನಾವು ಈ ಯೋಜನೆ ಆರಂಭಿಸಿ ಒಂದು ತಿಂಗಳಾಯಿತು. ಸಂಸದರು ಬಂದು ಒಂದು ಕ್ವಿಂಟಾಲ್ ಅಕ್ಕಿ ನೀಡಿದ್ದಾರೆ. ‌ಮಾಜಿ ಸಚಿವರಾದ ಯು.ಟಿ.ಖಾದರ್ ರವರು ರೂ.10 ಸಾವಿರ ಸಹಾಯ ನೀಡಿದ್ದಾರೆ. ‌ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳು ಎಲ್ಲರೂ ಬಂದು ಸಹಕಾರ ನೀಡಿ ನಮ್ಮನ್ನು ಪ್ರೋತ್ಸಾಹಿಸಿದ್ದಾರೆ ಅವರೆಲ್ಲರನ್ನು ನೆನಪಿಸಿಕೊಳ್ಳುತ್ತೇವೆ ಎಂದು ಎಂ.ಬಿ.ಯವರು ಹೇಳಿದರೆ, “ನಮ್ಮ ಸ್ಥಳೀಯ ಶಾಸಕರು ಮಾತ್ರ ಒಂದು ದಿನವೂ ಬಂದು ಇಲ್ಲಿಗೆ ಬಂದು ಹೋಗಿಲ್ಲ” ಎಂದು ಸಂಘಟಕರಲ್ಲಿ ಪ್ರಮುಖರಾದ ಕೆ.ಪಿ.ಜಾನಿ‌ ಬೇಸರ ವ್ಯಕ್ತಪಡಿಸಿದರು.

ನ.ಪಂ.ಸದಸ್ಯರಾದ ಎಂ.ವೆಂಕಪ್ಪ ಗೌಡ, ಶರೀಫ್ ಕಂಠಿ, ಸುಳ್ಯ ಎಸ್.ಐ.‌ಹರೀಶ್, ಕಟ್ಟಡ ಕಾರ್ಮಿಕರ ಸಂಘದವರು ಮೊದಲಾದವರು ಪತ್ರಿಕಾಗೋಷ್ಠಿ ಯಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.